ಹಾಸನ ಜಿಲ್ಲೆಯಲ್ಲಿ ನಡೆದ ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಎಂಟು ವರ್ಷಗಳ ಸಂಸಾರ ಮತ್ತು ಮಗುವನ್ನು ಬಿಟ್ಟು ರಾತ್ರೋರಾತ್ರಿ (Hassan Car Wedding) ಪ್ರಿಯಕರನ ಜೊತೆ ಪರಾರಿಯಾಗಿದ್ದ ಹರ್ಷಿತಾ ಎಂಬಾಕೆ, ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Hassan Car Wedding – ರಾತ್ರೋರಾತ್ರಿ ಎಸ್ಕೇಪ್ ಆದ ಕಥೆ
ಹರ್ಷಿತಾ ಮತ್ತು ಪ್ರಕಾಶ್ ದಂಪತಿಯದ್ದು ಎಂಟು ವರ್ಷಗಳ ಸಂಸಾರ. ಆದರೆ ಏಪ್ರಿಲ್ 10ರಂದು ಎಲ್ಲವೂ ಬದಲಾಯಿತು. ಪತಿ ಪ್ರಕಾಶ್ ಆರೋಪಿಸುವಂತೆ, ಹರ್ಷಿತಾ ತನಗೆ ನಿದ್ರೆ ಮಾತ್ರೆ ನೀಡಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದಿನೊಂದಿಗೆ ಪ್ರಿಯಕರನ ಜೊತೆ ಓಡಿಹೋಗಿದ್ದಾರೆ. ಇದಾದ ಬಳಿಕ ಕಾರಿನಲ್ಲೇ ಮದುವೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಮೊದಮೊದಲು ಪತಿಗೆ ಕರೆ ಮಾಡಿ “ತಪ್ಪಾಯ್ತು ಕರ್ಕೊಂಡು ಹೋಗಿ” ಎಂದು ಬೇಡಿಕೊಂಡಿದ್ದ ಹರ್ಷಿತಾ, ಈಗ ಹಠಾತ್ತನೆ ಉಲ್ಟಾ ಹೊಡೆದಿದ್ದಾರೆ.
ಪತ್ನಿಯ ವಿರುದ್ಧ ಪತಿ ಪ್ರಕಾಶ್ ಮಾಡಿದ ಗಂಭೀರ ಆರೋಪಗಳು
ಪತ್ನಿಯ ನಡವಳಿಕೆಯಿಂದ ಕಂಗೆಟ್ಟಿರುವ ಪ್ರಕಾಶ್ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಾನು ಸೋದರ ಮಾವನ ಮಗಳನ್ನೇ ಇಷ್ಟಪಟ್ಟು ಮದುವೆಯಾಗಿದ್ದಾಗಿ ಹೇಳಿರುವ ಅವರು, ಮನೆಯಲ್ಲಿ ಯಾವುದೇ ಆರ್ಥಿಕ ತೊಂದರೆ ಇರಲಿಲ್ಲ ಎಂದಿದ್ದಾರೆ. ನಿತ್ಯ 100 ಲೀಟರ್ ಹಾಲು ಹಾಕುವ 15 ಹಸುಗಳು, ಟ್ರ್ಯಾಕ್ಟರ್ ಮತ್ತು ತಿಂಗಳಿಗೆ 80 ಸಾವಿರ ರೂಪಾಯಿ (Hassan Car Wedding) ಆದಾಯವಿತ್ತು. ಎಲ್ಲವನ್ನೂ ಪತ್ನಿಯ ಹೆಸರಲ್ಲೇ ನೋಡಿಕೊಳ್ಳುತ್ತಿದ್ದರೂ ಆಕೆ ತನಗೆ ದ್ರೋಹ ಮಾಡಿದ್ದಾಳೆ ಎನ್ನುವುದು ಪ್ರಕಾಶ್ ಅವರ ವಾದ.
ಅಜ್ಞಾತ ಸ್ಥಳದಿಂದ ಹರ್ಷಿತಾ ನೀಡಿದ ಸ್ಪಷ್ಟನೆ
ಪತಿ ಪ್ರಕಾಶ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ಹರ್ಷಿತಾ ಕೂಡ ವಿಡಿಯೋ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ತಾನು ಯಾರ ಬಲವಂತಕ್ಕೂ ಮಣಿದು ಬಂದಿಲ್ಲ ಮತ್ತು ತನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ (Hassan Car Wedding) ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕಾಶ್ ಮತ್ತು ಅವರ ಕಡೆಯವರು ತನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿರುವ ಅವರು, ಮಾಧ್ಯಮಗಳ ಮುಂದೆ ಹೋಗಿ ತನ್ನ ಮರ್ಯಾದೆ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. Read this also : ಉದ್ಯಮಿ ಸುದೀಪ್ ರೈ (Sudeep Rai) ಸಾವಿಗೆ ಪತ್ನಿಯ ಕಿರುಕುಳವೇ ಕಾರಣವೇ? ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ..!
ಡಿವೋರ್ಸ್ ಬೇಕೆಂದ ಮಹಿಳೆ ಮತ್ತು ಆತ್ಮ**ತ್ಯೆಯ ಬೆದರಿಕೆ
ಹರ್ಷಿತಾ ಅವರ ಈ ವಿಡಿಯೋದಲ್ಲಿ ಕೇಳಿಬಂದ ಪ್ರಮುಖ ಬೇಡಿಕೆ ಎಂದರೆ ವಿಚ್ಛೇದನ. ತನಗೆ ಪ್ರಕಾಶ್ ಜೊತೆ ಬದುಕಲು ಇಷ್ಟವಿಲ್ಲ ಮತ್ತು ತಕ್ಷಣವೇ ಡಿವೋರ್ಸ್ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಒಂದು ವೇಳೆ ಯಾರಾದರೂ ತನ್ನನ್ನು ಬಲವಂತವಾಗಿ ಪತಿಯ ಮನೆಗೆ ಕಳುಹಿಸಲು ಯತ್ನಿಸಿದರೆ, ಅವರ ಹೆಸರನ್ನು ಬರೆದಿಟ್ಟು ಆತ್ಮ**ತ್ಯೆ (Hassan Car Wedding) ಮಾಡಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಚಿನ್ನ ಮತ್ತು ಹಣದ ಬಗ್ಗೆ ಪ್ರಕಾಶ್ ಸುಳ್ಳು ಹೇಳುತ್ತಿದ್ದಾರೆ ಎಂಬುದು ಹರ್ಷಿತಾ ಅವರ ವಾದ.

ಹಿಂಸೆ ಮತ್ತು ಹಸಿವಿನ ಆರೋಪ ಹೊರಿಸಿದ ಪತ್ನಿ
ಮನೆ ಕೆಲಸ ಮಾಡಿಕೊಂಡಿರಬೇಕು (Hassan Car Wedding) ಮತ್ತು ಹೊರಗಿನ ಪ್ರಪಂಚ ನೋಡಬಾರದು ಎಂದು ಪತಿ ನಿರ್ಬಂಧ ಹೇರಿದ್ದರು ಎಂದು ಹರ್ಷಿತಾ ದೂರಿದ್ದಾರೆ. ಊಟ ನೀಡದೆ ಸತಾಯಿಸುತ್ತಿದ್ದರು ಮತ್ತು ಬಾಯಿಗೆ ಬಂದಂತೆ ಬೈಯುತ್ತಿದ್ದರು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೆ, ಪತಿ ಕುಡಿದು ಬಂದು ಹೊಡೆಯುತ್ತಿದ್ದರು ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ. ಮಗುವಿನ ಜವಾಬ್ದಾರಿಯ ಬಗ್ಗೆಯೂ ಮಾತನಾಡಿದ ಅವರು, ಡಿವೋರ್ಸ್ ಪಡೆದು ತಾನೇ ಮಗುವನ್ನು ಸಾಕುವುದುದಾಗಿ ತಿಳಿಸಿದ್ದಾರೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
