Haryana Murder Case- ಹರ್ಯಾಣದಲ್ಲಿ ನಡೆದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ. ತಾನು ಪ್ರೇಮಿಯೊಂದಿಗೆ ಇರುವ ದೃಶ್ಯವನ್ನು ಪತಿ ನೋಡಿದ್ದಕ್ಕೆ ಆತನ ಕುತ್ತಿಗೆಗೆ ದುಪಟ್ಟಾದಿಂದ ಬಿಗಿದು ಕೊಲೆ ಮಾಡಿರುವ ಈ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆಯು ಮೀರತ್ ನಲ್ಲಿ ಇತ್ತೀಚೆಗೆ ನಡೆದಿದ್ದ ಮತ್ತೊಂದು ಪ್ರಕರಣವನ್ನು ನೆನಪಿಸುತ್ತದೆ. ಅಲ್ಲಿಯೂ ಸಹ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ, ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದಳು.
Haryana – ಘಟನೆಯ ಹಿನ್ನೆಲೆ
ರವೀನಾ ಎಂಬ 34 ಸಾವಿರ ಫಾಲೋವರ್ಸ್ ಹೊಂದಿರುವ ಯೂಟ್ಯೂಬರ್, ಕಳೆದ ಒಂದೂವರೆ ವರ್ಷಗಳಿಂದ ಸುರೇಶ್ ಎಂಬಾತನೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕದಲ್ಲಿದ್ದಳು. ಆಕೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಸ್ಯ, ಕೌಟುಂಬಿಕ ಸಮಸ್ಯೆಗಳು ಮತ್ತು ಜೀವನಶೈಲಿಗೆ ಸಂಬಂಧಿಸಿದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ಆದರೆ, ಆಕೆಯ ಪತಿ ಪ್ರವೀಣ್, ರವೀನಾ ಸೋಷಿಯಲ್ ಮೀಡಿಯಾದಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಈ ವಿಷಯದಿಂದಾಗಿ ದಂಪತಿಗಳ ನಡುವೆ ಆಗಾಗ ವಾಗ್ವಾದ ಮತ್ತು ಜಗಳಗಳು ಆಗಾಗ ನಡೆಯುತ್ತಿದ್ದವು ಎನ್ನಲಾಗಿದೆ. ರವೀನಾ ಮತ್ತು ಪ್ರವೀಣ್ ಗೆ 6 ವರ್ಷದ ಮಗನಿದ್ದಾನೆ. ಆದರೂ, ರವೀನಾ ತನ್ನ ಯೂಟ್ಯೂಬ್ ವಿಡಿಯೋ ಚಿತ್ರೀಕರಣಕ್ಕಾಗಿ ಆಗಾಗ ಬೇರೆ ಕಡೆಗೆ ಹೋಗುತ್ತಿದ್ದಳು. ಇದಕ್ಕೆ ಪ್ರವೀಣ್ ಮತ್ತು ಕುಟುಂಬದ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣಗಳು ದಂಪತಿಯ ನಡುವೆ ವಾಗ್ವಾದಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
Haryana ಮನೆಯಲ್ಲಿ ರವೀನಾ ಜೊತೆಗಿದ್ದ ಸುರೇಶ್?
ರವೀನಾ ಒಂದೂವರೆ ವರ್ಷಗಳ ಹಿಂದೆ ಸುರೇಶ್ ಎಂಬ ಯುವಕನನ್ನು ಇನ್ಸ್ಟಾಗ್ರಾಮ್‌ನಲ್ಲಿ ಭೇಟಿಯಾಗಿದ್ದಳು. ರವೀನಾ ನಿತ್ಯವೂ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ವಿಷಯಕ್ಕೆ ಆಕೆಯ ಪತಿ ಪ್ರವೀಣ್ ಆಗಾಗ ಜಗಳವಾಡುತ್ತಿದ್ದರು. ಮಾರ್ಚ್ 25 ರಂದು, ಪ್ರವೀಣ್ ಮನೆಗೆ ಬಂದಾಗ ಆತನಿಗಿದ್ದ ಭಯ ನಿಜವಾಯಿತು. ರವೀನಾ ಸುರೇಶ್‌ನೊಂದಿಗೆ ಮನೆಯಲ್ಲಿರುವುದನ್ನು ಕಂಡು ಆತ ತಾಳ್ಮೆ ಕಳೆದುಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ರವೀನಾ ದುಪಟ್ಟಾದಿಂದ ಪ್ರವೀಣ್‌ನ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದಳು ಎನ್ನಲಾಗಿದೆ.
Read this also : ಪತ್ನಿಯಿಂದ ಪತಿಗೆ ಹಿಂಸೆ: ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಆಘಾತಕಾರಿ ವಿಡಿಯೋ ವೈರಲ್…!
Haryana ಸಿಸಿಟಿವಿಯಲ್ಲಿ ಶವ ಸಾಗಿಸುವ ದೃಶ್ಯ ಪತ್ತೆ
ಸಂಜೆಯಾಗುವವರೆಗೂ ಆಕೆ ಪತಿಯ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಳು. ನಂತರ ರಾತ್ರಿ ವೇಳೆ ಸುಮಾರು 6 ಕಿಲೋಮೀಟರ್ ದೂರದಲ್ಲಿ ಬೈಕ್‌ನಲ್ಲಿ ಹೋಗಿ ಚರಂಡಿಗೆ ಆ ದೇಹವನ್ನು ಎಸೆದಿದ್ದಾಳೆ. ಮೂರು ದಿನಗಳ ನಂತರ, ಪ್ರವೀಣ್ ಅವರ ಕೊಳೆತ ಶವ ಚರಂಡಿಯಲ್ಲಿ ಪತ್ತೆಯಾಗಿದೆ. ಈ ಕೃತ್ಯವು ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.