HomeSpecialHanuman Jayanti 2026 : ಸಂಕಷ್ಟ ನಿವಾರಣೆಗೆ ಏಪ್ರಿಲ್ 2ರಂದು ಈ ಸರಳ ಕ್ರಮಗಳನ್ನು ಅನುಸರಿಸಲು...

Hanuman Jayanti 2026 : ಸಂಕಷ್ಟ ನಿವಾರಣೆಗೆ ಏಪ್ರಿಲ್ 2ರಂದು ಈ ಸರಳ ಕ್ರಮಗಳನ್ನು ಅನುಸರಿಸಲು ಮರೆಯಬೇಡಿ!

ಸಂಕಟ ಬಂದಾಗ ವೆಂಕಟರಮಣ ಅನ್ನೋ ಮಾತಿದೆ, ಆದರೆ ಸಂಕಟಗಳನ್ನೇ ದೂರ ಮಾಡುವ ‘ಸಂಕಟಮೋಚನ’ ಹನುಮಂತನನ್ನು ನೆನೆದರೆ ಮನಸ್ಸಿಗೆ ಬರೋ ಆ ಧೈರ್ಯವೇ ಬೇರೆ ಅಲ್ಲವೇ? ಹಿಂದೂ ಧರ್ಮದಲ್ಲಿ ಚೈತ್ರ ಮಾಸದ ಹುಣ್ಣಿಮೆಗೆ ಎಷ್ಟು ಪ್ರಾಮುಖ್ಯತೆ ಇದೆ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಪುರಾಣಗಳ ಪ್ರಕಾರ, ಶ್ರೀರಾಮನ ಪರಮ ಭಕ್ತ ಹನುಮಂತನು ಜನಿಸಿದ ಈ ಪವಿತ್ರ ದಿನವನ್ನು ನಾವು ‘ಹನುಮ ಜಯಂತಿ‘ (Hanuman Jayanti 2026) ಅಥವಾ ‘ಹನುಮಾನ್ ಜನ್ಮೋತ್ಸವ’ ಎಂದು ದೇಶಾದ್ಯಂತ ಸಡಗರದಿಂದ ಆಚರಿಸುತ್ತೇವೆ.

Hanuman Jayanti 2026 Blessings and Powerful Remedies

ಈ ವರ್ಷ ಅಂದರೆ 2026ರಲ್ಲಿ, ಏಪ್ರಿಲ್ 2 ರಂದು ಹನುಮಾನ್ ಜಯಂತಿ ಬಂದಿದೆ. ಜೀವನದಲ್ಲಿ ಎದುರಾಗುವ ಭಯ, ಆತಂಕ ಹಾಗೂ ಅಡೆತಡೆಗಳನ್ನು ದೂರ ಮಾಡಲು ಬಜರಂಗಬಲಿಯ ಆರಾಧನೆಗಿಂತ ಮಿಗಿಲಾದದ್ದು ಮತ್ತೊಂದಿಲ್ಲ. ವಿಶೇಷವಾಗಿ ನಿಮ್ಮ ಜಾತಕದಲ್ಲಿ ‘ಮಂಗಳ ದೋಷ’ದ ಪ್ರಭಾವವಿದ್ದರೆ, ಅದನ್ನು ತಗ್ಗಿಸಲು ಈ ದಿನದ ಪೂಜೆ ಒಂದು ಅದ್ಭುತ ಮದ್ದು!

Hanuman Jayanti 2026 – ಹನುಮಂತನ ಕೃಪೆ ಪಡೆಯಲು ಇಲ್ಲಿದೆ 5 ಸುಲಭ ದಾರಿಗಳು:

ಜಾತಕದಲ್ಲಿನ ಗ್ರಹಗತಿಗಳ ಅಶುಭ ಫಲವನ್ನು ತಗ್ಗಿಸಲು ಮತ್ತು ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಈ ಕ್ರಮಗಳು ಸಹಕಾರಿ:

  • ಸಿಂಧೂರ ಮತ್ತು ಮಲ್ಲಿಗೆ ಎಣ್ಣೆ ಸಮರ್ಪಣೆ: ಹನುಮಂತನಿಗೆ ಮಲ್ಲಿಗೆ ಎಣ್ಣೆಯಲ್ಲಿ ಬೆರೆಸಿದ ಸಿಂಧೂರವನ್ನು (ಚೋಳ) ಅರ್ಪಿಸುವುದು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಇದು ಮಂಗಳ ಗ್ರಹದ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಸುಂದರಕಾಂಡ ಪಠಣೆ: ನಿಮ್ಮ ಮನಸ್ಸು ಪದೇ ಪದೇ ಅಶಾಂತವಾಗುತ್ತಿದೆಯೇ? ಹಾಗಿದ್ದರೆ ಈ ದಿನ ತಪ್ಪದೇ ಸುಂದರಕಾಂಡವನ್ನು ಪಠಿಸಿ. ಇದರಿಂದ ಆತ್ಮವಿಶ್ವಾಸ ವೃದ್ಧಿಸುವುದಲ್ಲದೆ, ತಿಳಿದೋ (Hanuman Jayanti 2026) ತಿಳಿಯದೆಯೋ ಮಾಡಿದ ಪಾಪಕರ್ಮಗಳ ಭಾರ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
  • ರಾಮ ನಾಮದ ಮ್ಯಾಜಿಕ್: ಹನುಮಂತನನ್ನು ಒಲಿಸಿಕೊಳ್ಳಲು ಇರುವ ಶಾರ್ಟ್‌ಕಟ್ ಎಂದರೆ ಅದು ‘ರಾಮ ನಾಮ’. ಆಂಜನೇಯನಿಗೆ ರಾಮನ ಹೆಸರೆಂದರೆ ಪಂಚಪ್ರಾಣ! ಆದ್ದರಿಂದ, ಈ ದಿನ ಕನಿಷ್ಠ 108 ಬಾರಿ ರಾಮ್-ರಾಮ್” ಎಂದು ಜಪಿಸಿ. ನಿಮ್ಮ ಮೇಲಿರುವ ಮಂಗಳ ದೋಷದ ತೀವ್ರತೆ ಇದರಿಂದ ಕಡಿಮೆಯಾಗುತ್ತದೆ. Read this also : ಮೇಷ ರಾಶಿಗೆ ಶುಕ್ರನ ಎಂಟ್ರಿ: ನಿಮ್ಮ ಜೀವನದಲ್ಲಿ ಅದೃಷ್ಟವೋ ಅಥವಾ ಸಂಕಷ್ಟವೋ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್!
  • ನೈವೇದ್ಯ ಮತ್ತು ದಾನದ ಶಕ್ತಿ: ಬಜರಂಗಬಲಿಗೆ ಕೆಂಪು ಗುಲಾಬಿ ಹಾಗೂ ಬೂಂದಿ ಅಥವಾ ಕಡಲೆಹಿಟ್ಟಿನ (ಬೇಸನ್) ಲಡ್ಡುಗಳನ್ನು ಅರ್ಪಿಸಿ. ಮಂಗಳ ಗ್ರಹವನ್ನು ಶಾಂತಗೊಳಿಸಲು ಇದು ಸುಲಭ ಉಪಾಯ. ಇದರ ಜೊತೆಗೆ, ಅಗತ್ಯವಿರುವವರಿಗೆ ಕೆಂಪು ಬೇಳೆ ಮತ್ತು ಬೆಲ್ಲವನ್ನು ದಾನ ಮಾಡಿ. ಇತರರಿಗೆ ಸಹಾಯ ಮಾಡುವ ಗುಣ (Hanuman Jayanti 2026) ಹನುಮಂತನಿಗೆ ಬಹಳ ಪ್ರಿಯ!

Hanuman Jayanti 2026 Blessings and Powerful Remedies

  • ಬಜರಂಗ ಬಾಣ ಮತ್ತು ಹನುಮಾನ್ ಚಾಲೀಸಾ: ಕೆಲಸ ಕಾರ್ಯಗಳಲ್ಲಿ ಅಥವಾ ಮದುವೆಯಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ ಭಕ್ತಿಯಿಂದ ‘ಬಜರಂಗ ಬಾಣ’ ಪಠಿಸಿ. ಇನ್ನು ದೇವಸ್ಥಾನಕ್ಕೆ ಹೋಗಿ ಎಲ್ಲರ ಜೊತೆಗೂಡಿ ‘ಹನುಮಾನ್ ಚಾಲೀಸಾ’ ಪಠಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಓಡಿಹೋಗಿ ಧನಾತ್ಮಕತೆ ನೆಲೆಸುತ್ತದೆ.

ನೆನಪಿಡಿ: ದೈವದ ಆರಾಧನೆಯಲ್ಲಿ ವಿಧಿ-ವಿಧಾನಗಳಿಗಿಂತ (Hanuman Jayanti 2026) ನಿಮ್ಮಲ್ಲಿರುವ ‘ಭಕ್ತಿ’ ಮತ್ತು ‘ನಂಬಿಕೆ’ ಮುಖ್ಯ. ಈ ಹನುಮ ಜಯಂತಿಯಂದು ಸಂಕಟಮೋಚನ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಲಿ ಎಂದು ಆಶಿಸೋಣ.

by Baluhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular