ಅವೈಜ್ಞಾನಿಕ ಮಾನದಂಡಗಳ ಕಾರಣದಿಂದ ಇಂದು ತಾಲೂಕಿನಾದ್ಯಂತ ಸುಮಾರು 600 ಕ್ಕೂ ಅಧಿಕ ಬಿಪಿಎಲ್ ರೇಷನ್ ಕಾರ್ಡ್‌ಗಳು ಎಪಿಎಲ್ ರೇಷನ್ ಕಾರ್ಡ್‌ಗಳಾಗಿ ಬದಲಾಗಿದೆ. ಇದರಿಂದ ಬಡವರ ಬದುಕು ಅತಂತ್ರವಾಗಿದೆ. ಕೂಡಲೇ ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳನ್ನು ಯತಾವತ್ತಾಗಿ ಮುಂದುವರೆಸಬೇಕು ಇಲ್ಲವಾದಲ್ಲಿ (CPM Protest) ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ ಎಚ್ಚರಿಕೆ ನೀಡಿದರು.

CPM Protest – ಲಕ್ಷಾಂತರ ಸಂಬಳ ಪಡೆಯುವವರಿಗಿಲ್ಲದ ನಿಯಮ ಬಡವರಿಗೇಕೆ?
ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸಿಪಿಎಂ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಮಾನದಂಡಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುವ ಶಾಸಕರಿಗಿಲ್ಲದ ನಿಯಮ, ವರ್ಷಕ್ಕೆ ಕೇವಲ 1.20 ಲಕ್ಷ ರೂ. ಆದಾಯವಿರುವ ಬಡ ಕುಟುಂಬಗಳಿಗೆ ಅನ್ವಯವಾಗುತ್ತಿರುವುದು ದುರಂತ. ಹಿಂದುಳಿದ ಗುಡಿಬಂಡೆ (CPM Protest) ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರು ಮತ್ತು ಹೈನುಗಾರರನ್ನೇ ಅವಲಂಬಿಸಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದುಪಡಿಸಿರುವುದು ಅವರ ಶಿಕ್ಷಣ ಮತ್ತು ಆರೋಗ್ಯದ ಹಕ್ಕನ್ನು ಕಸಿದುಕೊಂಡಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳ ಅಬ್ಬರ!
ಮತ್ತೊಬ್ಬ ಮುಖಂಡ ಉಪ್ಪಾರಹಳ್ಳಿ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 669 ಪಡಿತರ ಚೀಟಿಗಳು ರದ್ದಾಗಿವೆ ತಾಲ್ಲೂಕು ಕಚೇರಿಗೆ ಆಹಾರ ನಿರೀಕ್ಷಕರು ತಿಂಗಳಿಗೆ ಒಂದೆರಡು ಬಾರಿ ಮಾತ್ರ (CPM Protest) ಬರುತ್ತಿರುವುದರಿಂದ ದಲ್ಲಾಳಿಗಳ ಹಾವಳಿ ಮಿತಿಮೀರಿದೆ. ಹೊಸ ಪಡಿತರ ಚೀಟಿಗಾಗಿ ಬಡವರಿಂದ 4 ಸಾವಿರದಿಂದ ದಿಂದ 5 ಸಾವಿರ ರೂಪಾಯಿಗಳವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
Read this also : ಪರ್ಸನಲ್ ಲೋನ್ (Personal Loan) ಪಡೆದ ವ್ಯಕ್ತಿ ಮೃತಪಟ್ಟರೆ ಆ ಸಾಲವನ್ನು ಕುಟುಂಬದವರು ತೀರಿಸಬೇಕಾ? ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ ನೋಡಿ!

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು
ರದ್ದಾಗಿರುವ 669 ಪಡಿತರ ಚೀಟಿಗಳನ್ನು ಕೂಡಲೇ ಪುನಃಸ್ಥಾಪಿಸಬೇಕು, ತಾಲ್ಲೂಕಿಗೆ ಕಾಯಂ ಆಹಾರ ನಿರೀಕ್ಷಕರನ್ನು ನೇಮಕ ಮಾಡಬೇಕು. ಪಡಿತರ ಚೀಟಿ ಹಂಚಿಕೆಯಲ್ಲಿ ನಡೆಯುತ್ತಿರುವ (CPM Protest) ಭ್ರಷ್ಟಾಚಾರಕ್ಕೆ ತಡೆ ಹಾಕಬೇಕು. ಸ್ಥಳೀಯ ಶಾಸಕರು ಈ ಕೂಡಲೇ ಮಧ್ಯಪ್ರವೇಶಿಸಿ ಬಡವರಿಗೆ ನ್ಯಾಯ ಒದಗಿಸವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕರು ಮನವಿ ಪತ್ರ ಸ್ವೀಕರಿಸಿ, ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಈ ವೇಳೆ (CPM Protest) ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ವೆಂಕಟರಾಜು, ಮುಖಂಡರಾದ ರಮಣ, ಶಿವಪ್ಪ, ಶ್ರೀನಿವಾಸರೆಡ್ಡಿ, ಆದಿನಾರಾಯಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.
