Congress – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿರವರ ವಿರುದ್ದ ಬಿಜೆಪಿ ಮುಖಂಡ ಸಿ.ಮುನಿರಾಜು ಆಧಾರರಹಿತ ಆರೋಪಗಳನ್ನು ಮಾಡುತ್ತಾ ಅವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೇಸ್ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದಾರೆ.
Congress – ಸುಬ್ಬಾರೆಡ್ಡಿಯವರು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದವರು
ಈ ವೇಳೆ ಕೆಡಿಪಿ ಸದಸ್ಯ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಸುಮಾರು ವರ್ಷಗಳಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಎನ್.ಸುಬ್ಬಾರೆಡ್ಡಿಯವರು ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಸಮಾಜ ಸೇವೆಯಿಂದಲೇ ಇಲ್ಲಿನ ಜನರು ಅವರನ್ನು ಸತತವಾಗಿ ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಸಮಾಜ ಸೇವೆಯನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಸೇವೆ ಮಾಡುತ್ತಿರುವ ಶಾಸಕ ಸುಬ್ಬಾರೆಡ್ಡಿ ರವರ ವಿರುದ್ದ ಇತ್ತೀಚಿಗೆ ಅಪಪ್ರಚಾರ ಮಾಡುವಂತಹವರು ಹೆಚ್ಚಾಗುತ್ತಿದ್ದಾರೆ ಎಂದರು.
Congress – ಬಿಜೆಪಿ ಮುಖಂಡ ಸಿ. ಮುನಿರಾಜು ವಿರುದ್ಧ ಗಂಭೀರ ಆರೋಪಗಳು
ಬಿಜೆಪಿ ಮುಖಂಡ ಸಿ.ಮುನಿರಾಜು ಶಾಸಕರ ಏಳಿಗೆಯನ್ನು ಸಹಿಸದೇ ಜನರಿಂದ ದೂರ ಮಾಡಬೇಕೆಂದು ಹಲವು ರೀತಿಯ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಶಾಸಕರ ಪತ್ನಿಗೆ ವಿದೇಶಿ ಮೂಲಗಳಿಂದ ಹಣ ಬಂದಿದೆ ಎಂದೂ, ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಸಾಕ್ಷ್ಯಾಧಾರಗಳಿಲ್ಲದೇ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಶಾಸಕರ ಅಭಿಮಾನಿಗಳಿಗೆ ನೋವನ್ನು ಉಂಟು ಮಾಡಿದೆ. ಈಗಾಗಲೇ ಸರ್ಜಾಪುರದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಸಿ.ಮುನಿರಾಜು ರವರ ಕಾರ್ಯಚಟುವಟಿಕೆಗಳ ಬಗ್ಗೆ ಪೊಲೀಸರು ನಿಗಾ ಇಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
Congress – ಧೈರ್ಯವಿದ್ದರೆ ಚುನಾವಣೆಗೆ ನಿಂತು ಗೆದ್ದು ತೋರಿಸಿ : ರಮೇಶ್
ನಂತರ ಯೂತ್ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವಂತಹ ಬಿಜೆಪಿ ಮುನಿರಾಜು ರವರು, ಶಾಸಕ ಸುಬ್ಬಾರೆಡ್ಡಿರವರ ವಿರುದ್ದ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಹೋಗಿ ಶಾಸಕರು ನೂರಾರು ಎಕರೆ ಜಮೀನು ಅಕ್ರಮವಾಗಿ ಮಾಡಿಕೊಂಡಿದ್ದಾರೆ, ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ, ಐಶಾರಾಮಿ ಕಾರುಗಳು ಹೊಂದಿದ್ದಾರೆ ಎಂದು ಆರೋಪಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ತಮಗೆ ಧೈರ್ಯವಿದ್ದರೇ ನೇರವಾಗಿ ಚುನಾವಣೆಗೆ ನಿಂತು ಗೆದ್ದು ತೋರಿಸಲಿ ಅದನ್ನು ಬಿಟ್ಟು ಈ ರೀತಿಯ ಇಲ್ಲ ಸಲ್ಲದ ಆರೋಪಗಳನ್ನು, ಅಪಪ್ರಚಾರಗಳನ್ನು ಮಾಡುವುದು ಸರಿಯಲ್ಲ. ಕ್ಷೇತ್ರದ ಜನತೆ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ತಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
Read this also : ಇಡಿ ಸ್ವತಂತ್ರ ಸಂಸ್ಥೆ ತನಿಖೆ ಮಾಡಿದರೇ ತಪ್ಪೇನು? ಇಡಿ ದಾಳಿಯ ಕುರಿತು ಶಾಸಕ ಸುಬ್ಬಾರೆಡ್ಡಿ ಮೊದಲ ಪ್ರತಿಕ್ರಿಯೆ…!
Congress – ಹಾಜರಿದ್ದ ಕಾಂಗ್ರೇಸ್ ಮುಖಂಡರು
ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೇಸ್ ಅಧ್ಯಕ್ಷ ನವೀನ್ ರಾಜ್, ಗುಡಿಬಂಡೆ ಯೂತ್ ಕಾಂಗ್ರೇಸ್ ಅಧ್ಯಕ್ಷ ಅಂಬರೀಶ್, ಪಪಂ ಅಧ್ಯಕ್ಷ ವಿಕಾಸ್, ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಪ್ಪರ್ತಿ ನಂಜುಂಡ, ಮುಖಂಡರಾದ ರಾಜಾರೆಡ್ಡಿ, ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ, ಉದಯ್, ವೆಂಕಟನರಸಪ್ಪ, ಆದಿನಾರಾಯಣ, ಶಾರುಖ್, ರಮೇಶ್, ಶಬೀರ್ ಸೇರಿದಂತೆ ಹಲವರು ಹಾಜರಿದ್ದರು.