Friday, September 5, 2025
HomeStateChristmas Day - ಗುಡಿಬಂಡೆ ತಾಲ್ಲೂಕಿನ ವಿವಿಧ ಕಡೆ ಸಡಗರದ ಕ್ರಿಸ್ ಮಸ್ ಆಚರಣೆ...!

Christmas Day – ಗುಡಿಬಂಡೆ ತಾಲ್ಲೂಕಿನ ವಿವಿಧ ಕಡೆ ಸಡಗರದ ಕ್ರಿಸ್ ಮಸ್ ಆಚರಣೆ…!

Christmas Day – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಣೆ ಮಾಡಿದರು. ಬುಧವಾರ ತಾಲ್ಲೂಕು ವ್ಯಾಪ್ತಿಯಲ್ಲಿನ ಚರ್ಚ್‍ಗಳಲ್ಲಿ ಹಬ್ಬದ ವಾತಾವರಣ ತುಂಬಿತ್ತು. ಮನೆಯಲ್ಲಿ ಹೊಸ ಬಟ್ಟೆ ತೊಟ್ಟು, ಹಾಡು ಹೇಳಿ, ಸಿಹಿ ತಿಂಡಿ ಮಾಡಿ ಹಬ್ಬ ಆಚರಿಸಿದರೆ, (Christmas Day) ಮತ್ತೊಂದೆಡೆ ಕೆಲವರು ಮನೆಯಲ್ಲಿಯೇ ಕ್ರಿಸ್ತನ ಸರಳವಾಗಿ ಆಚರಣೆ ಮಾಡಿಕೊಂಡಿದ್ದಾರೆ.

Christmas Day celebration in Gudibande 2

ಬಹುತೇಕರು ಹತ್ತಿರದ ಚರ್ಚ್ ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ (Christmas Day) ಪಾಲ್ಗೊಂಡು, ಕ್ಯಾಂಡಲ್ ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿದ್ದ ಸ್ನೇಹಿತರು-ಬಂಧುಗಳೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬಕ್ಕಾಗಿ ಪಟ್ಟಣದ ವಿವಿಧ ಚರ್ಚ್‍ಗಳು ವಿದ್ಯುತ್ ದೀಪದ (Christmas Day) ಅಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಪ್ರಮುಖವಾಗಿ ಬಾಪೂಜಿನಗರದಲ್ಲಿರುವ (Christmas Day) ಇಮ್ಮಾನುವೇಲ್ ಕ್ರಿಶ್ಚಿಯನ್  ಚರ್ಚ್ ನಲ್ಲಿ ಚಿಕ್ಕಬಳ್ಳಾಪುರ ದ ಪಾಸ್ಟರ್ ಸನ್ನಿ ಥಾಮಸ್ ಏಸು ಕ್ರಿಸ್ತನ ಸಂದೇಶವನ್ನು ನೀಡಿದರು. ಕ್ರಿಸ್ ಮಸ್ ಅಂಗವಾಗಿ ಚರ್ಚ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಸ್ತ ಬಾಂಧವರು ಸೇರಿದಂತೆ ಇತರರು ನೆರೆದು (Christmas Day) ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ದೃಶ್ಯ ಕಂಡಿತು.

Christmas Day celebration in Gudibande 1

ವಿವಿಧ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆದವು. (Christmas Day) ಕ್ಯಾಂಡಲ್ ಹಚ್ಚಿ,  ಕೇಕ್ ಕತ್ತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು ಚರ್ಚ್ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಪರಿಸರ ವೇದಿಕೆ ವತಿಯಿಂದ ಗಿಡ ನೀಡುವ ಮೂಲಕ ಶುಭಾಶಯ ಕೋರಿದರು. ಈ ವೇಳೆ (Christmas Day) ಚರ್ಚ್ ನ ಪಾಸ್ಟರ್ ಗಳಾದ ಡಿ.ವಿ.ರಾಜು, ಅನ್ನಿ ತಾಮಸ್, ಅಮರಾವತಿ, ಪರಿಸರ ವೇದಿಕೆಯ ಜಿಲ್ಲಾಧ್ಯಕ್ಷ ಗುಂಪುಮರದ ಆನಂದ್, ತಾಲ್ಲೂಕು ಅಧ್ಯಕ್ಷ ಬಿ. ಮಂಜುನಾಥ,  ಗಾಂಧಿ ಶ್ರೀನಿವಾಸ್ ಸೇರಿದಂತೆ ವಿವಿಧ ಗ್ರಾಮಗಳ ಕ್ರೈಸ್ಥ ಸಮುದಾಯದವರು ಭಾಗವಹಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular