ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಅಡುಗೆ ಮನೆಯಿಂದ ಹಿಡಿದು ಅಂತರಿಕ್ಷದವರೆಗೆ ಎಲ್ಲೆಡೆ ತಮ್ಮ ಮುದ್ರೆ ಒತ್ತುತ್ತಿದ್ದಾರೆ. ಫಾಲ್ಗುಣಿ ನಾಯರ್ ಅಥವಾ ರೋಶ್ನಿ ನಡಾರ್ ಅವರಂತೆ ನೀವೂ ಕೂಡ ಉದ್ಯಮ ಲೋಕದಲ್ಲಿ ಮಿಂಚಬೇಕೆಂಬ ಕನಸು ಕಂಡಿದ್ದೀರಾ? ಹಾಗಿದ್ದರೆ (Government Schemes for Women) ಬಂಡವಾಳದ ಚಿಂತೆ ಬಿಡಿ!

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮತ್ತು ಅವರಲ್ಲಿನ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಸರ್ಕಾರವು ಹಲವಾರು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಮಾತ್ರವಲ್ಲದೆ, ಉದ್ಯಮ ನಡೆಸಲು ಅಗತ್ಯವಿರುವ ತರಬೇತಿಯೂ ಇಲ್ಲಿ ಲಭ್ಯ.
Government Schemes for Women – ಟಾಪ್ 7 ಯೋಜನೆಗಳ ವಿವರ ಇಲ್ಲಿದೆ
1. ಪಿಎಂ ಮುದ್ರಾ ಯೋಜನೆ (PM Mudra Loan)
ಸಣ್ಣ ಉದ್ಯಮ ಆರಂಭಿಸಲು ಬಯಸುವವರಿಗೆ ಇದು ಅತ್ಯುತ್ತಮ ಯೋಜನೆ. ಇಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸಿಗುವುದು ವಿಶೇಷ. ಇತ್ತೀಚಿನ ಅಪ್ಡೇಟ್ ಪ್ರಕಾರ, ಸಾಲದ ಮಿತಿಯನ್ನು 20 ಲಕ್ಷ ರೂಪಾಯಿಗೆ ಏರಿಸಲಾಗಿದೆ.
- ಶಿಶು ಲೋನ್: ₹50,000 ವರೆಗೆ.
- ಕಿಶೋರ್ ಲೋನ್: ₹50,000 ರಿಂದ ₹5 ಲಕ್ಷದವರೆಗೆ.
- ತರುಣ್ ಲೋನ್: ₹5 ಲಕ್ಷದಿಂದ ₹10 ಲಕ್ಷದವರೆಗೆ.
- ತರುಣ್ ಪ್ಲಸ್: ₹10 ಲಕ್ಷದಿಂದ ₹20 ಲಕ್ಷದವರೆಗೆ.
- ಅರ್ಜಿ ಸಲ್ಲಿಸಲು: https://www.mudra.org.in
2. ಲಖಪತಿ ದೀದಿ ಯೋಜನೆ (Lakhpati Didi Yojana)
ಗ್ರಾಮೀಣ ಭಾಗದ ಮಹಿಳೆಯರನ್ನು ‘ಲಖಪತಿ’ಯನ್ನಾಗಿ ಮಾಡುವುದೇ ಈ ಯೋಜನೆಯ ಗುರಿ. ಇದರಲ್ಲಿ ಮೊದಲು ನಿಮಗೆ ತಾಂತ್ರಿಕ ಮತ್ತು ಉದ್ಯಮ ನಿರ್ವಹಣೆಯ ತರಬೇತಿ ನೀಡಲಾಗುತ್ತದೆ. ನಂತರ ₹1 ಲಕ್ಷದಿಂದ ₹5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಪಡೆಯಬಹುದು. ಅರ್ಜಿ ಸಲ್ಲಿಸಲು: www.lakhpatididi.gov.in ವೆಬ್ ಸೈಟ್ ಗೆ ಭೇಟಿ ನ
3. ಸ್ಟ್ಯಾಂಡ್ ಅಪ್ ಇಂಡಿಯಾ (Stand Up India Scheme)
ನೀವು ದೊಡ್ಡ ಮಟ್ಟದ ಉದ್ಯಮ ಅಥವಾ ಫ್ಯಾಕ್ಟರಿ ಸ್ಥಾಪಿಸುವ ಯೋಚನೆಯಲ್ಲಿದ್ದರೆ ಇದು ನಿಮಗಾಗಿ. ಈ ಯೋಜನೆಯಡಿ ₹10 ಲಕ್ಷದಿಂದ ₹1 ಕೋಟಿವರೆಗೆ ಸಾಲ ಸಿಗುತ್ತದೆ. (Government Schemes for Women) ವಿಶೇಷವೆಂದರೆ, ಸಾಲ ಮರುಪಾವತಿಸಲು 7 ವರ್ಷ ಕಾಲಾವಕಾಶವಿದ್ದು, ಮೊದಲ 18 ತಿಂಗಳುಗಳ ಕಾಲ ಕಂತು ಪಾವತಿಯಿಂದ ವಿನಾಯಿತಿ (Moratorium) ಇರುತ್ತದೆ. ಅರ್ಜಿ ಸಲ್ಲಿಸಲು: https://www.standupmitra.in/
4. ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP)
ಇದು ಸಬ್ಸಿಡಿ ಆಧಾರಿತ ಯೋಜನೆಯಾಗಿದ್ದು, ಹೊಸ ಉದ್ಯಮ ಆರಂಭಿಸಲು ₹50 ಲಕ್ಷದವರೆಗೆ ಸಾಲ ಸಿಗುತ್ತದೆ. ಮಹಿಳೆಯರಿಗೆ ಒಟ್ಟು ಯೋಜನಾ ವೆಚ್ಚದ ಮೇಲೆ ಶೇ. 15 ರಿಂದ ಶೇ. 35 ರಷ್ಟು ಸಬ್ಸಿಡಿ ಹಣ ಸಿಗುವುದು ಈ (Government Schemes for Women) ಯೋಜನೆಯ ದೊಡ್ಡ ಪ್ಲಸ್ ಪಾಯಿಂಟ್. ಅರ್ಜಿ ಸಲ್ಲಿಸಲು: https://www.kviconline.gov.in

5. ಉದ್ಯೋಗಿನಿ ಯೋಜನೆ (Udyogini Scheme)
ಸಣ್ಣ ವ್ಯಾಪಾರ, ಬ್ಯೂಟಿ ಪಾರ್ಲರ್ ಅಥವಾ ಟೈಲರಿಂಗ್ ಶಾಪ್ ಆರಂಭಿಸಲು ಬಯಸುವ ಮಹಿಳೆಯರಿಗೆ ಇದು ವರದಾನ. ₹1 ಲಕ್ಷದಿಂದ ₹3 ಲಕ್ಷದವರೆಗೆ ಯಾವುದೇ ಆಸ್ತಿ ಅಡಮಾನವಿಲ್ಲದೆ (Collateral Free) ಸಾಲ ಸಿಗುತ್ತದೆ. ಅರ್ಜಿ ಸಲ್ಲಿಸಲು: www.myscheme.gov.in ಅಥವಾ ಹತ್ತಿರದ ಬ್ಯಾಂಕ್ಗಳನ್ನು ಸಂಪರ್ಕಿಸಿ. Read this also : ಸಣ್ಣ ಉದ್ದಿಮೆದಾರರಿಗೆ ಗುಡ್ ನ್ಯೂಸ್: 20 ಲಕ್ಷದವರೆಗೆ ಅಡಮಾನ ರಹಿತ ಸಾಲ! RBI ಹೊಸ ಘೋಷಣೆಗಳೇನು?
6. ಅನ್ನಪೂರ್ಣ ಯೋಜನೆ (Annapurna Scheme)
ನಿಮ್ಮ ಕೈರುಚಿ ಜಗತ್ತಿಗೆ ಪರಿಚಯಿಸಬೇಕೆ? (Government Schemes for Women) ಕ್ಯಾಟರಿಂಗ್ ಅಥವಾ ಹೋಟೆಲ್ ಉದ್ಯಮ ಆರಂಭಿಸಲು ಈ ಯೋಜನೆ ಸಹಕಾರಿ. ಅಡುಗೆ ಮನೆ ಉಪಕರಣಗಳು ಮತ್ತು ಪಾತ್ರೆಗಳನ್ನು ಖರೀದಿಸಲು ₹50,000 ವರೆಗೆ ಸುಲಭವಾಗಿ ಸಾಲ ಪಡೆಯಬಹುದು. ಅರ್ಜಿ ಸಲ್ಲಿಸಲು: www.myscheme.gov.in ನಲ್ಲಿ ಸರ್ಚ್ ಮಾಡಿ ಅರ್ಜಿ ಸಲ್ಲಿಸಬಹುದು.
7. SHE Marts (ಹೊಸ ಯೋಜನೆ)
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಬಜೆಟ್ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದಾರೆ. ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉಪ್ಪಿನಕಾಯಿ, ಕರಕುಶಲ ವಸ್ತುಗಳು ಅಥವಾ ಬಟ್ಟೆಗಳನ್ನು ಮಾರಾಟ ಮಾಡಲು ಈ ‘SHE Marts’ ಒಂದು ದೊಡ್ಡ ಮಾರುಕಟ್ಟೆ ವೇದಿಕೆಯಾಗಲಿದೆ. ಈ ಹೊಸ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ.
ಗಮನಿಸಿ: ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಳಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸದ ಪುರಾವೆ ಮತ್ತು ಉದ್ಯಮದ ಯೋಜನಾ ವರದಿ (Project Report) ಸಿದ್ಧವಿರಲಿ.
