Government Job – ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ, ಸರ್ಕಾರಿ ನೌಕರಿ ಎಂದರೇ ಶ್ರೇಷ್ಟ ಹಾಗೂ ಪವಿತ್ರವಾದ ಹುದ್ದೆಯಾಗಿದ್ದು, ಸರ್ಕಾರಿ ನೌಕರರು ತಮ್ಮ ಹುದ್ದೆಗಳ ಪವಿತ್ರತೆಯನ್ನು ಕಾಪಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿಯಿರುವ ಕೋಮುಲ್ ಗಾರ್ಡನ್ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಶಿಕ್ಷಕ ಕೆ.ವಿ.ನಾರಾಯಣಸ್ವಾಮಿ ರವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
Government Job – ನೌಕರರ ಸಮಸ್ಯೆಗಳಿಗೆ ಸಂಘದಿಂದ ಪರಿಹಾರ
ಸರ್ಕಾರಿ ನೌಕರಿ ಎಲ್ಲರಿಗೂ ಸಿಗೊಲ್ಲ. ಸರ್ಕಾರಿ ಹುದ್ದೆ ಕೆಲವರಿಗೆ ಸಿಗುತ್ತದೆ. ಸಿಕ್ಕ ಅವಕಾಶವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ತಾವು ಅಲಂಕರಿಸುವಂತಹ ಹುದ್ದೆಗೆ ನ್ಯಾಯ ಒದಗಿಸಿಕೊಡಬೇಕು. ಇಂದು ಸರ್ಕಾರಿ ನೌಕರರು ಸಾಕಷ್ಟು ಸಮಸ್ಯೆಗಳನ್ನು ಹಾಗೂ ಸವಾಲುಗಳನ್ನು ಸಹ ಎದುರಿಸುತ್ತಿದ್ದಾರೆ. ಅವುಗಳನ್ನು ಬಗೆಹರಿಸಲು ಸರ್ಕಾರಿ ನೌಕರರ ಸಂಘ ನಿರಂತರವಾಗಿ ಶ್ರಮಿಸುತ್ತಿದೆ. ವ್ಯವಸ್ಥೆಯಲ್ಲಿ ತುಂಬಾನೆ ಬದಲಾವಣೆಗಳು ಆಗುತ್ತಿವೆ. ಕೆಲಸದಲ್ಲಿ ತಂತ್ರಜ್ಞಾನ ಸಹ ಹೆಚ್ಚಾಗುತ್ತಿದೆ. ಎಲ್ಲವನ್ನೂ ಅಳವಡಿಸಿಕೊಂಡು ಕೆಲಸ ಮಾಡಬೇಕು.
Government Job – ಶೀಘ್ರ ಒಪಿಎಸ್ ಜಾರಿ
ಸಾವಿರಾರು ಸಂಖ್ಯೆ ನೌಕರರು ಒಪಿಎಸ್ ಜಾರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಒಪಿಎಸ್ ಯೋಜನೆಯನ್ನು ಜಾರಿ ಮಾಡುವಂತೆ ಸಂಘ ಮಾಡುತ್ತದೆ. ಇನ್ನೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದಂತಹ ಕೆ.ವಿ.ನಾರಾಯಣಸ್ವಾಮಿ ರವರು ಇದೀಗ ವಯೋನಿವೃತ್ತಿ ಹೊಂದಿದ್ದು, ನಮ್ಮ ಸಂಘಕ್ಕೂ ಸಹ ನಷ್ಟವಾಗಿದೆ. ಅವರ ಹಾಗೆ ನೌಕರರ ಸಂಘದ ಪದಾಧಿಕಾರಿಗಳು ಸಂಘವನ್ನು ಮುನ್ನೆಡೆಸಿಕೊಂಡು ಹೋಗಬೇಕು ಎಂದರು. Read this also : ಸರ್ಕಾರಿ ನೌಕರರ ಸೇವಾ ಅವಧಿಯಲ್ಲಿ ಕರ್ತವ್ಯ ನಿಷ್ಠೆ ಮುಖ್ಯ: ಕೆ.ವಿ. ನಾರಾಯಣಸ್ವಾಮಿ
Government Job – ಶಾಸಕರ ಮಾತು: ನಿವೃತ್ತಿ ಜೀವನದಲ್ಲೂ ಸಮಾಜಸೇವೆ
ಬಳಿಕ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಇಂದು ನಿವೃತ್ತಿಯಾಗಿರುವ ಕೆ.ವಿ.ನಾರಾಯಣಸ್ವಾಮಿಯವರು, ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಂದು ಅವರ ಕೆಲಸ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಸದಾ ಸರ್ಕಾರಿ ನೌಕರರಿಗಾಗಿ ದುಡಿದ ನಾರಾಯಣಸ್ವಾಮಿ ರವರು ನಿವೃತ್ತಿಯಾದರು ಎಂದು ಸುಮ್ಮನಿರದೇ, ಸಮಾಜದಲ್ಲಿ ತೊಡಗಿಸಿಕೊಂಡು ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅವರ ನಿವೃತ್ತಿ ಜೀವನ ಸುಖಮಯ ಹಾಗೂ ಆರೋಗ್ಯಕರವಾಗಿರಲಿ ಎಂದು ಶುಭ ಹಾರೈಸಿದರು.
Government Job – ನೂತನ ಅಧ್ಯಕ್ಷರ ನೇಮಕ
ಇನ್ನೂ ಇದೇ ಕಾರ್ಯಕ್ರಮದಲ್ಲಿ ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಮುನಿಕೃಷ್ಣಪ್ಪ ಹಾಗೂ ಖಜಾಂಚಿಯಾಗಿ ಪಶು ಸಂಗೋಪನೆ ಇಲಾಖೆಯ ನಟರಾಜ್ ರವರುಗಳಿಗೆ ನೇಮಕಾತಿ ಪತ್ರವನ್ನು ನೌಕರರ ಸಂಘದ ರಾಜ್ಯಾಧ್ಯಕ್ಷರು ನೀಡಿದರು. ನಿವೃತ್ತಿಯಾದ ಕೆ.ವಿ.ನಾರಾಯಣಸ್ವಾಮಿ ರವರನ್ನು ವೇದಿಕೆಯಲ್ಲಿದ್ದ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು, ವಿವಿಧ ಮುಖಂಡರು, ವಿವಿಧ ತಾಲೂಕುಗಳ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಗುಡಿಬಂಡೆ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.