Garlic Benefits – ನಮ್ಮ ಮನೆಯಲ್ಲಿಯೇ ಸಿಗುವಂತಹ ಹಲವು ಪದಾರ್ಥಗಳಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಮೊದಲಾದ ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳು, ಇಂಜೆಕ್ಷನ್ ಗಳು, ಆಂಟಿ ಬಯೋಟಿಕ್ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವು ತಜ್ಞರ ಪ್ರಕಾರ ಈ ಔಷಧಗಳನ್ನು ತೆಗೆದುಕೊಳ್ಳುವುದು ಅಷ್ಟೊಂದು ಸೂಕ್ತವಲ್ಲ. ಆದ್ದರಿಂದ ಈ ಔಷಧಗಳ ಬದಲಿಗೆ ಮನೆಯಲ್ಲಿಯೇ ಸಿಗುವಂತಹ ಬೆಳ್ಳುಳ್ಳಿ ಸೇವನೆಯಿಂದ ಇಮ್ಯುನಿಟಿ ವೃದ್ದಿಸಿಕೊಳ್ಳಬಹುದಾಗಿದೆ.
ಬೆಳ್ಳುಳ್ಳಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಮಳೆಗಾಲದಲ್ಲಿ ನಮ್ಮನ್ನು ಆರೋಗ್ಯವಾಗಿರಿಸಲು ತುಂಬಾನೆ ಶಕ್ತಿಯುತವಾಗಿ ಕೆಲಸ ಮಾಡುತ್ತದೆ. ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸುವುದರಿಂದ (Garlic Benefits) ಎಷ್ಟು ರುಚಿಕರವಾಗುತ್ತದೆಯೋ ಆರೋಗ್ಯ ರಕ್ಷಣೆಯಲ್ಲೂ ಸಹ ಈ ಬೆಳ್ಳುಳ್ಳಿಯ ಪಾತ್ರ ತುಂಬಾನೆ ಇದೆ ಎನ್ನಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ರೋಗನಿರೋಧಕ ಶಕ್ತಿಯನ್ನು ವೃದ್ದಿ ಮಾಡಲು ಬೆಳ್ಳುಳ್ಳಿ ತುಂಬಾನೆ ಸಹಕಾರಿಯಾಗಿದೆ. ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಎಂಬ ಪದಾರ್ಥ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ದಿಯಾಗಲು ಸಹಾಯ ಮಾಡುತ್ತದೆ. ಕೆಮ್ಮು, ನೆಗಡಿ ಮೊದಲಾದ ಸಮಸ್ಯೆಗಳಿಂದ ಬೇಗ ಗುಣಮುಖರಾಗಬಹುದು.
ಇನ್ನೂ ನಿಮಗೆ ಆರ್ಥರೈಟೀಸ್ ನೋವು ಇದ್ದರೇ ದಿನಕ್ಕೊಂದು ಬೆಳ್ಳುಳ್ಳಿ ತಿನ್ನುವುದನ್ನು ಆರಂಭಿಸಿ, ಎಣ್ಣೆ ಹಾಗೂ ಬೆಳ್ಳುಳ್ಳಿಯನ್ನು ಬಿಸಿ ಮಾಡಿ ಆ ಎಣ್ಣೆಯನ್ನು ನೋವು ಇರುವ ಭಾಗದಲ್ಲಿ ಹಚ್ಚಿಕೊಳ್ಳಬೇಕು. ಈ ರೀತಿ ಮಾಡಿದರೇ ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಗುತ್ತದೆ. ಪ್ರತಿನಿತ್ಯ ಬೆಳ್ಳುಳ್ಳಿಯ ಒಂದು ಎಸಳು ತಪ್ಪದೇ ತಿನ್ನಬೇಕು. ಇದರಿಂದ ನೆಗಡಿ, ಕೆಮ್ಮು ವಾಸಿಯಾಗುತ್ತದೆ. ಒಂದು ವೇಳೆ ಬೆಳ್ಳುಳ್ಳಿಯನ್ನು ನೇರವಾಗಿ ತಿನ್ನೋಕೆ ಇಷ್ಟವಾಗಿಲ್ಲ ಅಂದ್ರೇ, ನೇರವಾಗಿ ನುಂಗಬಹುದು. ನಿರಂತರವಾಗಿ ನೆಗಡಿಯಿಂದ ಸಮಸ್ಯೆಗೆ ಅನುಭವಿಸುವಂತಹವರು ಕ್ರಮ ತಪ್ಪದೇ ಬೆಳ್ಳುಳ್ಳಿಯನ್ನು ಸೇವನೆ ಮಾಡಬೇಕು. ಅದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಅದರಲ್ಲೂ ಹೃದಯದ ಆರೋಗ್ಯಕ್ಕೆ ಹಾಗೂ ದೀರ್ಘ ಕಾಲದ ವ್ಯಾಧಿಗಳಿಂದ ಗುಣಮುಖರಾಗಲು ಬೆಳ್ಳುಳ್ಳಿ ಸಹಕಾರಿಯಾಗಿದೆ. ಇದೊಂದು ಸಂಗ್ರಹ ಮಾಹಿತಿಯಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ವೈದ್ಯರನ್ನು ಸಂಪರ್ಕ ಮಾಡುವುದು ಸೂಕ್ತ ಎಂದು ಹೇಳಲಾಗಿದೆ.