HomeNationalGalgotias University Student Fight : ನೋಯ್ಡಾದ ಗಲ್ಗೋಟಿಯಾಸ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿನಿಯರ 'ಬೀದಿ ಕಾಳಗ': ಜುಟ್ಟು...

Galgotias University Student Fight : ನೋಯ್ಡಾದ ಗಲ್ಗೋಟಿಯಾಸ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿನಿಯರ ‘ಬೀದಿ ಕಾಳಗ’: ಜುಟ್ಟು ಹಿಡಿದು ಬಡಿದಾಡಿಕೊಂಡ ಯುವತಿಯರು!

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಓದಿಗಿಂತ ಹೆಚ್ಚಾಗಿ ಇತ್ತೀಚೆಗೆ ಇಂತಹ ‘ಕಲಹ’ಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಹೌದು, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ (Galgotias University Student Fight) ಆವರಣದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಾಡುಹಗಲೇ ಬಡಿದಾಡಿಕೊಂಡಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Galgotias University student fight between two girls inside campus in Greater Noida caught on video

Galgotias University Student Fight – ಪ್ರೇಮ ಪುರಾಣವೇ ಜಗಳಕ್ಕೆ ಮುಖ್ಯ ಕಾರಣವೇ?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಈ ಜಗಳಕ್ಕೆ ಮೂಲ ಕಾರಣ ಒಬ್ಬ ಯುವಕ. ತನ್ನ ಆಪ್ತ ಗೆಳತಿಯ ಬಾಯ್ ಫ್ರೆಂಡ್ ಮೇಲೆ ಮತ್ತೊಬ್ಬಳು ವಿದ್ಯಾರ್ಥಿನಿ ಇಷ್ಟ ಪಟ್ಟಿದ್ದಾಳೆ ಎನ್ನುವ ವಿಚಾರವೇ ಈ “ಮಹಾ ಯುದ್ಧ”ಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗುತ್ತಿದೆ. ಮೊದಲು ಮಾತಿನ ಚಕಮಕಿಯಿಂದ ಆರಂಭವಾದ ಜಗಳ, ನಂತರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಕೆನ್ನೆಗೆ ಬಾರಿಸಿ ಜುಟ್ಟು ಹಿಡಿದು ಎಳೆದಾಡಿದ ಯುವತಿಯರು

ವೈರಲ್ ವಿಡಿಯೋದಲ್ಲಿ ಇಬ್ಬರು ಯುವತಿಯರು ಪರಸ್ಪರ ಕೆನ್ನೆಗೆ ಬಾರಿಸಿಕೊಳ್ಳುವುದು ಮತ್ತು ಒಬ್ಬರ ಕೂದಲನ್ನು ಮತ್ತೊಬ್ಬರು ಹಿಡಿದು ಎಳೆದಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ (Galgotias University Student Fight) ಕಿತ್ತಾಟ ನಡೆಯುತ್ತಿರುವಾಗ ಸುತ್ತಮುತ್ತಲಿದ್ದ ಕೆಲವು ವಿದ್ಯಾರ್ಥಿಗಳು ಜಗಳ ಬಿಡಿಸಲು ಪ್ರಯತ್ನಿಸುತ್ತಿದ್ದರೆ, ಇನ್ನುಳಿದವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ ನಗುತ್ತಿರುವುದು ಮತ್ತು ಚೀರುತ್ತಿರುವುದು ಕಂಡುಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

ನೆಟ್ಟಿಗರ ವ್ಯಂಗ್ಯಭರಿತ ಕಾಮೆಂಟ್‌ಗಳ ಸುರಿಮಳೆ

“ಘರ್ ಕೆ ಕಲೇಷ್” ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಈ ಘಟನೆಯನ್ನು ಕಂಡು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ “ಗಲ್ಗೋಟಿಯಾಸ್ ಕ್ಯಾಂಪಸ್ ಈಗ ನೆಟ್‌ಫ್ಲಿಕ್ಸ್‌ಗಿಂತ ಹೆಚ್ಚು ಎಂಟರ್‌ಟೈನಿಂಗ್ ಆಗಿದೆ” ಎಂದು ಲೇವಡಿ ಮಾಡಿದ್ದರೆ, ಮತ್ತೊಬ್ಬರು “ಇಲ್ಲಿನ ವಿದ್ಯಾರ್ಥಿಗಳು ರೋಬೋಟ್ ತಯಾರು ಮಾಡಬೇಕಿತ್ತು, ಆದರೆ ಇಲ್ಲಿ ಬೆಸ್ಟಿಯ ಬಾಯ್‌ಫ್ರೆಂಡ್ ಮೇಲೆ ಕ್ರಶ್ ಬೆಳೆಸಿಕೊಳ್ಳುತ್ತಿದ್ದಾರೆ” ಎಂದು ಕಾಲೆಳೆದಿದ್ದಾರೆ. Read this also : Rewa Cardiologist Viral Fight : ಹೃದಯ ತಜ್ಞನಿಗಾಗಿ ‘ಹೃದಯ’ಗಳ ಕಾಳಗ! ಪ್ರೇಯಸಿ-ಪತ್ನಿ ಜುಟ್ಟು ಹಿಡಿದು ಬೀದಿ ಗಲಾಟೆ: ವಿಡಿಯೋ ವೈರಲ್

Galgotias University student fight between two girls inside campus in Greater Noida caught on video

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಇನ್ನೂ ಸಿಗದ ಸ್ಪಷ್ಟನೆ

ಈ ಘಟನೆಯು ವಿಶ್ವವಿದ್ಯಾಲಯದ (Galgotias University Student Fight) ಕ್ಯಾಂಪಸ್ ಒಳಗಡೆಯೇ ನಡೆದಿದೆ ಎಂದು ಹೇಳಲಾಗುತ್ತಿದ್ದರೂ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ದಾರಿಯಲ್ಲಿ ಹೋಗುವವರು ಚಿತ್ರೀಕರಿಸಿದ ಈ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಶಿಕ್ಷಣ ಕಲಿಯಬೇಕಾದ ಜಾಗದಲ್ಲಿ ಇಂತಹ ಸಾರ್ವಜನಿಕ ಕಿತ್ತಾಟಗಳು ನಡೆಯುತ್ತಿರುವುದು ಅನೇಕರ ಅಸಮಾಧಾನಕ್ಕೂ ಕಾರಣವಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular