ಆಧಾರ್ ಬಳಕೆದಾರರಿಗೆ ಬಿಗ್ ಅಪ್ಡೇಟ್ ಇಲ್ಲಿದೆ. ಆಧಾರ್ ಕಾರ್ಡ್ ಆನ್ ಲೈನ್ ಮೂಲಕ ಅಪ್ಡೇಟ್ ಮಾಡಲು ಉಚಿತವಾಗಿ ಅಪ್ಡೇಟ್ ಮಾಡಲು ಸೆ.14 ಕೊನೆಯ (Aadhaar Update) ಗಡುವು ನೀಡಲಾಗಿತ್ತು. ಇದೀಗ ಡಿ.14 ರವರೆಗೂ ಅವಧಿಯನ್ನು ವಿಸ್ತರಿಸಿದೆ. ಈ ಸಂಬಂಧ ಯುಐಡಿಎಐ ತನ್ನ ಸೋಷಿಯಲ್ ಮಿಡಿಯಾ ಹಾಗೂ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಆ ಮೂಲಕ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ. ಆಧಾರ್ ಹೊಂದಿರುವ ಕೋಟ್ಯಂತರ ಜನರು (Aadhaar Update) ಉಚಿತವಾಗಿ ಆನ್ ಲೈನ್ ಮೂಲಕ ತಮ್ಮ ಆಧಾರ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ದೇಶದಲ್ಲಿ ಕೋಟ್ಯಂತರ ಮಂದಿ ಆಧಾರ್ ಕಾರ್ಡ್ (Aadhaar Update)ಹೊಂದಿದ್ದಾರೆ. ತಮ್ಮ ಆಧಾರ್ ನಲ್ಲಿರುವ ಕೆಲವೊಂದನ್ನು ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಹಿಂದೆ ಸೆ.14 ರೊಳಗೆ ಉಚಿತ ಅಪ್ಡೇಟ್ ಬಳಿಕ ಹಣ ಪಾವತಿಸಬೇಕಿತ್ತು. ಆದರೆ ಆಧಾರ್ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತೊಮ್ಮೆ ಈ ಗಡುವನ್ನು ವಿಸ್ತರಣೆ ಮಾಡಿದೆ. ಡಿ.14 ರವರೆಗೂ ಉಚಿತವಾಗಿ ಆನ್ ಲೈನ್ ಮೂಲಕ ತಮ್ಮ (Aadhaar Update)ಆಧಾರ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಈ ಸಂಬಂಧ ಆಧಾರ್ ತನ್ನ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಉಚಿತ ಸರ್ವಿಸ್ ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ ಲಭ್ಯ ಇರುತ್ತದೆ. ಜನರು ಆಧಾರ್ನಲ್ಲಿ ತಮ್ಮ ದಾಖಲೆಗಳನ್ನು ಅಪ್ಡೇಟೆಡ್ ಆಗಿ ಇಟ್ಟುಕೊಳ್ಳಲು ಯು.ಐ.ಡಿ.ಎ.ಐ ಉತ್ತೇಜಿಸುತ್ತದೆ (Aadhaar Update)ಎಂದು ತನ್ನ ಪೋಸ್ಟ್ನಲ್ಲಿ ತಿಳಿಸಿದೆ.
ಲಿಂಕ್ ಇಲ್ಲಿದೆ ನೋಡಿ: https://x.com/UIDAI/status/1834789297196560606
2011 ರಿಂದ 2015 ರ ಅವಧಿಯಲ್ಲಿ ಆಧಾರ್ ಕಾರ್ಡ್ (Aadhaar Update) ಮಾಡಿಸಿದ ಆಧಾರ್ ಕಾರ್ಡ್ ದಾರರು ತಮ್ಮ ಆಧಾರ್ ಅನ್ನು ಒಮ್ಮೆ ಸಹ ಅಪ್ಡೇಟ್ ಮಾಡದೇ ಇರುವವರೂ ಕೂಡಲೇ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಅಪ್ಡೇಟ್ ನಲ್ಲಿ ಪ್ರಮುಖವಾಗಿ ವಿಳಾಸ, ಫೋನ್ ನಂಬರ್, ಫೋಟೋ, ಇಮೇಲ್ ಐಡಿ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಅಪ್‌ಡೇಟ್ (Aadhaar Update) ಮಾಡಿಕೊಳ್ಳಬೇಕು. ವಿಳಾಸ ಸೇರಿದಂತೆ ಯಾವುದೇ ಮಾಹಿತಿಯಲ್ಲಿ ಬದಲಾವಣೆ ಇದ್ದರೆ ಸೂಕ್ತ ದಾಖಲೆ ಸಲ್ಲಿಸಿ ಅಪ್‌ಡೇಟ್ ಮಾಡಿಕೊಳ್ಳಬೇಕು. ಇನ್ನೂ ತಾವು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕವೂ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ. ಇದೀಗ ಡಿ.14 ರವರೆಗೂ ಉಚಿತವಾಗಿ ತಮ್ಮ ಆಧಾರ್ (Aadhaar Update) ಅನ್ನು ಆನ್ ಲೈನ್ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ಆನ್ ಲೈನ್ ಮೂಲಕ ಈ ರೀತಿಯಾಗಿ ನಿಮ್ಮ ಆಧಾರ್ ಅಪ್ಡೇಟ್ ಮಾಡಿ:
ಹಂತ 1: UIDAI ವೆಬ್‌ಸೈಟ್ ಗೆ ಭೇಟಿ ನೀಡಿ:
- ಅಧಿಕೃತ UIDAI ವೆಬ್ಸೈಟ್ಗೆ ಹೋಗಿ: https://uidai.gov.in
ಹಂತ 2: ಅಪ್ಡೇಟ್ ಪೋರ್ಟಲ್ ಗೆ ಪ್ರವೇಶಿಸಿ:
- ಮೇನು ಬಾರಿನಲ್ಲಿ “My Aadhaar” ಆಪ್ಷನ್ ಕ್ಲಿಕ್ ಮಾಡಿ.
- “Update Your Aadhaar” ವಿಭಾಗದಲ್ಲಿ, “Update Demographics Data & Check Status” ಆಯ್ಕೆಮಾಡಿ.
ಹಂತ 3: ನಿಮ್ಮ ಖಾತೆಗೆ ಲಾಗಿನ್ ಮಾಡಿ:
- ಆಧಾರ್ ಸ್ವಯಂ-ಸೇವಾ ಅಪ್ಡೇಟ್ ಪೋರ್ಟಲ್ ತೆರೆದುಕೊಳ್ಳುತ್ತದೆ.
- “Login” ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು CAPTCHA ಕೋಡ್ ನಮೂದಿಸಿ, ನಂತರ “Send OTP” ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. OTP ನಮೂದಿಸಿ ಲಾಗಿನ್ ಮಾಡಿ.
ಹಂತ 4: ಅಪ್ಡೇಟ್ ಆಯ್ಕೆಯನ್ನು ಆಯ್ಕೆಮಾಡಿ
- ಲಾಗಿನ್ ಆದ ನಂತರ, ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಲು ಹಲವಾರು ಆಯ್ಕೆಗಳು ಕಾಣಸಿಕೊಳ್ಳುತ್ತದೆ. ನೀವು ಯಾವ ವಿವರಗಳನ್ನು ಅಪ್ಡೇಟ್ ಮಾಡಬೇಕೆಂದು ಬಯಸುತ್ತೀರೋ (ಮನೆ ವಿಳಾಸ, ಹೆಸರು, ಜನ್ಮದಿನಾಂಕ ಮುಂತಾದವು) ಅದನ್ನು ಆಯ್ಕೆಮಾಡಿ. ಬಳಿಕ ನಿಮ್ಮ ವಿವರಗಳನ್ನು ನಮೂದಿಸಿ
ಹಂತ 5: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
- ದೃಢೀಕರಣಕ್ಕಾಗಿ ಅಗತ್ಯ ದಾಖಲೆಗಳನ್ನು (ಹೆಸರು, ವಿಳಾಸ ದೃಢೀಕರಣ) ಅಪ್‌ಲೋಡ್ ಮಾಡಲು ಮಾಡಬೇಕು.
- ನೀವು ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ.
- ಎಲ್ಲಾ ಮಾಹಿತಿ ಸರಿಯಾಗಿ ನಮೂದಿಸಿದರೆ, “Submit” ಮೇಲೆ ಕ್ಲಿಕ್ ಮಾಡಿ.
- ಬಳಿಕ ಒಂದು ದೃಢೀಕರಣ ಸ್ಲಿಪ್ ರಚನೆಯಾಗುತ್ತದೆ. ಈ ಸ್ಲಿಪ್ ಅನ್ನು ಭವಿಷ್ಯ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಿ. ಇದರಲ್ಲಿ ಅಪ್ಡೇಟ್ ರಿಕ್ವೆಸ್ಟ್ ನಂಬರ್ (URN) ಇರುತ್ತದೆ, ಇದನ್ನು ನೀವು ನಿಮ್ಮ ಅಪ್ಡೇಟ್ ಸ್ಥಿತಿಯನ್ನು ತಿಳಿದುಕೊಳ್ಳಲು ಬಳಸಬಹುದು.