ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಏನೆಲ್ಲಾ ಮಾಡಬೇಕೋ ಎಲ್ಲವನ್ನೂ ಮಾಡಿಬಿಡುತ್ತಾರೆ. ಕೆಲವರು ಮೋಸ, ವಂಚನೆ, ದರೋಡೆ ಗಳ ಮೂಲಕ ಹಣ ಸಂಪಾದನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಇದೀಗ ಮಹಿಳೆಯೊಬ್ಬರು ಹಣದ ದುರಾಸೆಯಿಂದ ಮಾಡಬಾರದ ಕೆಲಸ ಮಾಡಿದ್ದಾರೆ. ಬರೋಬ್ಬರಿ 50 ಮಂದಿಯನ್ನು ಮದುವೆಯಾಗಿ ವಂಚನೆ ಮಾಡಿದ್ದಾಳೆ. 50 ಮಂದಿಯನ್ನು ವಂಚಿಸಿದ ಮಹಿಳೆ (Fraud Lady) ಇದೀಗ ಜೈಲು ಪಾಲಾಗಿದ್ದಾಳೆ.
ಅಂದಹಾಗೆ ಈ ಘಟನೆ ನಡೆದಿರೋದು ತಮಿಳುನಾಡಿನಲ್ಲಿ. 30 ವರ್ಷದ ಸಂಧ್ಯಾ ಎಂಬ ಮಹಿಳೆಯೇ 50 ಮಂದಿಯನ್ನು ಮದುವೆಯಾಗಿರುವ ಚಲಾಕಿ ಮಹಿಳೆ. ಆರೋಪಿ ಮಹಿಳೆ ತಮಿಳುನಾಡಿನ ತಿರುಪುರದಲ್ಲಿನ 35 ವರ್ಷ ಅವಿವಾಹಿತ ಯುವಕನೋರ್ವ ಆನ್ ಲೈನ್ ಫ್ಲಾಟ್ ಫಾರ್ಮ್ ’ದಿ ತಮಿಳು ವೇ’ ಎಂಬ ತಾಣದ ಮೂಲಕ ಸಂಧ್ಯಾ ಪರಿಚಯವಾಗಿದ್ದಾಳೆ. ಬಳಿಕ ಆಕೆಯನ್ನು ಮದುವೆಯಾಗಿದ್ದ. ಮದುವೆಯಾದ ಕೆಲವು ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ತುಂಬಾನೆ ಬದಲಾವಣೆ ಕಂಡು ಬಂದಿದೆ. ಬಳಿಕ ಆಕೆಯ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದರು. ಆಧಾರ್ ಕಾರ್ಡ್ ದಾಖಲೆಯಲ್ಲಿ ಸಂಧ್ಯಾಳ ಪತಿಯ ಹೆಸರು ಬೇರೆಯದ್ದೇ ಇತ್ತು. ಬಳಿಕ ತಾನು ವಂಚನೆಗೆ ತುತ್ತಾಗಿರುವುದು ತಿಳಿದು ಬಂದಿದ್ದು, ಸೀದಾ ಹೋಗಿ ತಾರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಆ ಯುವಕ ನೀಡಿದ ದೂರಿನ ಮೇರೆಗೆ ಪೊಲೀಸರು ಸಂಧ್ಯಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆಯ ವಂಚನೆಗಳು ಬೆಳಕಿಗೆ ಬಂದಿದೆ. ಸಂಧ್ಯಾಳಿಗೆ 10 ವರ್ಷದ ಹಿಂದೆಯೇ ಮದುವೆಯಗಿದ್ದಳು. ಈಕೆಗೆ ಒಂದು ಮಗು ಸಹ ಇದೆ. ಬಳಿಕ ಆಕೆ ಮೊದಲ ಪತಿಯಿಂದ ಬೇರೆಯಾಗಿದ್ದಾಳೆ. ಹಣ ಮಾಡುವ ಉದ್ದೇಶದಿಂದ ಅವಿವಾಹಿತ ಪುರಷರನ್ನೆ ಟಾರ್ಗೆಟ್ ಮಾಡಿ, ಮದುವೆಯಾದ ಸ್ವಲ್ಪ ದಿನದಲ್ಲೇ ದುಡ್ಡ ಹಾಗೂ ಬಂಗಾರವನ್ನು ಕದ್ದು ಪರಾರಿಯಾಗುತ್ತಿದ್ದಳು. ಈ ರೀತಿಯಾಗಿ ಪೊಲೀಸರು ಸೇರಿದಂತೆ 50 ಮಂದಿಯನ್ನು ವಂಚನೆ ಮಾಡಿದ್ದಾಳಂತೆ. ಸದ್ಯ ಆಕೆಯ ಮೋಸದಾಟ ಬೆಳಕಿಗೆ ಬಂದಿದ್ದು, ಪೊಲೀಸರ ಅತಿಥಿಯಾಗಿದ್ದಾಳೆ ಎಂದು ತಿಳಿದುಬಂದಿದೆ.