ರಾಜ್ಯ ರಾಜಕಾರಣದಲ್ಲಿ ವಿರೋಧ ಪಕ್ಷಗಳಿಗೆ ವಾಲ್ಮೀಕಿ ಅಭಿವೃದ್ದಿ ನಿಗಮದ (Valmiki Scam) ಕೋಟ್ಯಂತರ ಹಗರಣ ದೊಡ್ಡ ಅಸ್ತ್ರವಾಗಿದೆ. ಈ ಪ್ರಕರಣದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂಬ ಆಗ್ರಹ ಸಹ ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಿಂದ ಈ ಪ್ರಕರಣದ ಸಂಬಂಧ ED ಧಾಳಿ ಸಹ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ED ಧಾಳಿಯಿಂದ (Valmiki Scam)ರಾಜ್ಯದಲ್ಲಿ ಮತಷ್ಟು ಕರ್ಮಕಾಂಡಗಳು ಹೊರ ಬರಲಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ದಿನೇ ದಿನೇ ಹಗರಣಗಳು ಹೆಚ್ಚಾಗುತ್ತಿವೆ. ವಾಲ್ಮೀಕಿ ನಿಗಮ ಹಗರಣ (Valmiki Scam), ಮುಡಾ ಹಗರಣ (MUDA SCAM) ಹೀಗೆ ಹಲವು ಹಗರಣಗಳು ಸದ್ದು ಮಾಡುತ್ತಿವೆ. ಆದರೆ ಕಾಂಗ್ರೇಸ್ ಸರ್ಕಾರ ಮಾತ್ರ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಎಂಬ ಗಾದೆಯಂತೆ ಕಾಂಗ್ರೇಸ್ ಸರ್ಕಾರ ವರ್ತಿಸುತ್ತಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮವನ್ನು ಕರ್ನಾಟಕದಲ್ಲಿನ ಬುಡಕಟ್ಟು ಸಮುದಾಯ, ಪರಿಶಿಷ್ಟ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿ ಹಾಗೂ ಬಲಪಡಿಸುವ ನಿಟ್ಟಿನಲ್ಲಿ ರಚಿಸಲಾಗಿತ್ತು. ಆದರೆ ಈಗ ಸಮುದಾಯದ ಅಭಿವೃದ್ದಿಯಾಗುತ್ತಿಲ್ಲ ಎಂದರು.
ಇನ್ನೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ SC-ST ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದೆ. ವಾಲ್ಮೀಕಿ ನಿಗಮ ಹಗರಣ ಸಂಬಂಧ ಕೆಲವು ತಿಂಗಳಿನಿಂದ ಬಿಜೆಪಿ ಹೋರಾಟ ಮಾಡುತ್ತಿದೆ. ನಾಗೇಂದ್ರ ರವರ ಮನೆಯ ಮೇಲೆ ಹಾಗೂ ಅವರ ಆಸ್ತಿಗಳ ಮೇಲೆ ED ಧಾಳಿ ನಡೆಸಿದೆ. ಕೆಲವೊಂದು ಮಹತ್ತರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. 18 ಕಡೆ ಧಾಳಿ ನಡೆದಿದೆ. ಯೂನಿಯನ್ ಬ್ಯಾಂಕ್ ನವರು ಸಿಬಿಐಗೆ ದೂರು ನೀಡಿದ ಹಿನ್ನೆಲೆಯಲ್ಲಿ ED ಧಾಳಿ ನಡೆಸಿರಬಹುದು. ಆದರೆ ರಾಜ್ಯ ಗೃಹ ಸಚಿವ ಪರಮೇಶ್ವರ್ ನಾವು ED ಯನ್ನು ಆಹ್ವಾನಿಸಿಲ್ಲ ಎಂದಿದ್ದಾರೆ ಜೊತೆಗೆ ಧಾಳಿ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರ ಈ ದೊಡ್ಡ ಹಗರಣದಲ್ಲಿ ಭಾಗಿಯಾಘಿದೆ ಎಂದು ಆರೋಪಿಸಿದ್ದಾರೆ. ಸದ್ಯ ED ಧಾಳಿಯಿಂದ ಮತಷ್ಟು ಮಂದಿ ಮತಷ್ಟು ಹಗರಣಗಳು ಹೊರಬರಲಿದೆ ಎಂದರು.