ಹೊಸ ಹಣಕಾಸು ವರ್ಷ (Financial Year 2026) ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಏಪ್ರಿಲ್ 1 ರಿಂದ ಸಾಮಾನ್ಯ ಜನರ ಜೀವನ ಮತ್ತು ಜೇಬಿನ ಮೇಲೆ ನೇರ ಪರಿಣಾಮ ಬೀರುವ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರುತ್ತಿವೆ. ಡಿಜಿಟಲ್ ಪೇಮೆಂಟ್‌ನಿಂದ ಹಿಡಿದು ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸುವವರೆಗೆ ಆರ್‌ಬಿಐ (RBI) ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

Financial Year 2026 – ನೀವು ತಿಳಿಯಲೇಬೇಕಾದ ಆ 5 ಪ್ರಮುಖ ಬದಲಾವಣೆಗಳು ಇಲ್ಲಿವೆ:
-
ಡಿಜಿಟಲ್ ಪಾವತಿಯಲ್ಲಿ ಹೆಚ್ಚಿನ ಸುರಕ್ಷತೆ (OTP ಅವಶ್ಯಕತೆಯಿಲ್ಲ!)
ಆರ್‌ಬಿಐ ಈಗ ಡಿಜಿಟಲ್ ವಹಿವಾಟುಗಳನ್ನು ಮತ್ತಷ್ಟು (Financial Year 2026) ಸುರಕ್ಷಿತಗೊಳಿಸಲು ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ (2FA) ನಿಯಮವನ್ನು ಕಡ್ಡಾಯಗೊಳಿಸಿದೆ.
- ಇನ್ಮುಂದೆ ಕೇವಲ OTP ಗಾಗಿ ಕಾಯುವ ಅವಶ್ಯಕತೆಯಿಲ್ಲ.
- OTP ಜೊತೆಗೆ ನಿಮ್ಮ ಪಿನ್ (PIN), ಪಾಸ್‌ವರ್ಡ್, ಬಯೋಮೆಟ್ರಿಕ್ (ಫಿಂಗರ್‌ಪ್ರಿಂಟ್ ಅಥವಾ ಫೇಸ್ ಲಾಕ್) ಅಥವಾ ಸೆಕ್ಯೂರಿಟಿ ಟೋಕನ್ ಬಳಸಬಹುದು.
- ವಹಿವಾಟು ನಡೆಸುವಾಗ ಈ ಎರಡೂ ಹಂತಗಳನ್ನು ಪೂರೈಸಿದರೆ ಮಾತ್ರ ಹಣ ವರ್ಗಾವಣೆಯಾಗುತ್ತದೆ.
-
ಪ್ಯಾನ್ ಕಾರ್ಡ್ (PAN Card) ಅರ್ಜಿಗೆ ಹೊಸ ಟ್ವಿಸ್ಟ್
ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರು ಈಗ (Financial Year 2026) ಸ್ವಲ್ಪ ಎಚ್ಚರಿಕೆ ವಹಿಸಬೇಕು. ಈ ಹಿಂದೆ ಆಧಾರ್ ಕಾರ್ಡ್ ಒಂದಿದ್ದರೆ ಸಾಕಿತ್ತು, ಆದರೆ ಈಗ:
- ಆಧಾರ್ ಜೊತೆಗೆ ಮತ್ತೊಂದು ಹೆಚ್ಚುವರಿ ಅಧಿಕೃತ ದಾಖಲೆಯನ್ನು (OVD) ಸಲ್ಲಿಸುವುದು ಕಡ್ಡಾಯ.
- ನಿಮ್ಮ ಆಧಾರ್ನಲ್ಲಿರುವಂತೆಯೇ ಸ್ಪೆಲ್ಲಿಂಗ್ಗಳು ಪ್ಯಾನ್ ಅರ್ಜಿಯಲ್ಲೂ ಇರಬೇಕು. ಒಂದು ಅಕ್ಷರ ವ್ಯತ್ಯಾಸವಾದರೂ ನಿಮ್ಮ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. Read this also : ಏಪ್ರಿಲ್ನಲ್ಲಿ ಬ್ಯಾಂಕ್ ಕೆಲಸಗಳಿವೆಯೇ? ಇಲ್ಲಿದೆ 10 ದಿನಗಳ ರಜೆ ಪಟ್ಟಿ! ಮಿಸ್ ಮಾಡದೇ ಚೆಕ್ ಮಾಡಿ

-
ಫಾಸ್ ಟ್ಯಾಗ್ (FASTag) ಬೆಲೆ ಏರಿಕೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ತುಸು (Financial Year 2026) ಹೊರೆಯಾಗಲಿದೆ. NHAI ವಾರ್ಷಿಕ ಪಾಸ್ ದರವನ್ನು ಪರಿಷ್ಕರಿಸಿದೆ.
- ಈ ಹಿಂದೆ 3,000 ರೂ. ಇದ್ದ ವಾರ್ಷಿಕ ಪಾಸ್ ದರ ಈಗ 3,075 ರೂ. ಗೆ ಏರಿಕೆಯಾಗಿದೆ.
-
ಕ್ರೆಡಿಟ್ ಕಾರ್ಡ್ ಮತ್ತು ಎಟಿಎಂ ನಿಯಮಗಳು
HDFC ಸೇರಿದಂತೆ ಪ್ರಮುಖ ಬ್ಯಾಂಕುಗಳು ತಮ್ಮ ಸೇವಾ ದರಗಳನ್ನು ಪರಿಷ್ಕರಿಸಿವೆ.
- ರಿವಾರ್ಡ್ ಪಾಯಿಂಟ್ಸ್: ಕೆಲವು (Financial Year 2026) ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್ಸ್ ಗಳಿಸುವ ಮಿತಿಯಲ್ಲಿ ಬದಲಾವಣೆಯಾಗಿದೆ.
- ಬ್ಯಾಂಕ್ ಶುಲ್ಕಗಳು: ಎಟಿಎಂ ವಿತ್‌ಡ್ರಾಯಲ್ ಮಿತಿ ಮೀರಿದರೆ ದಂಡ, ಬ್ಯಾಂಕ್ ಲಾಕರ್ ಬಾಡಿಗೆ ಮತ್ತು ಎಫ್‌ಡಿ (FD) ಬಡ್ಡಿದರಗಳಲ್ಲಿ ಸಣ್ಣ ಬದಲಾವಣೆಗಳನ್ನು ನಿರೀಕ್ಷಿಸಬಹುದು.

-
ಗ್ರಾಹಕರಿಗೆ ಆರ್‌ಬಿಐನಿಂದ ರಕ್ಷಣೆ
ಡಿಜಿಟಲ್ ವಂಚನೆಗೊಳಗಾಗುವ (Financial Year 2026) ಗ್ರಾಹಕರಿಗೆ ಆರ್‌ಬಿಐ ಸಿಹಿ ಸುದ್ದಿ ನೀಡಿದೆ. ಸಿಸ್ಟಂ ದೋಷದಿಂದಾಗಿ ಏನಾದರೂ ಹಣ ಕಳೆದುಕೊಂಡರೆ, ಆ ನಷ್ಟವನ್ನು ಸಂಬಂಧಪಟ್ಟ ಬ್ಯಾಂಕುಗಳೇ ಭರಿಸಬೇಕಾಗುತ್ತದೆ. ಅಲ್ಲದೆ, ಗ್ರಾಹಕರ ದೂರುಗಳನ್ನು ಅತೀ ವೇಗವಾಗಿ ಇತ್ಯರ್ಥಪಡಿಸಲು ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಗಮನಿಸಿ: ಹಣಕಾಸಿನ ವಿಚಾರದಲ್ಲಿ ಯಾವುದೇ ಗೊಂದಲವಿದ್ದರೆ ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಅಥವಾ ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ. ಸಣ್ಣ ನಿರ್ಲಕ್ಷ್ಯವೂ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.
