2022-23ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಆಯ್ಕೆಯಾಗಿದ್ದ (Farmers Protest) ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಜಿ.ಸಿ.ವೆಂಕಟೇಶಪ್ಪ ರವರಿಗೆ ಮಂಜೂರಾಗಿದ್ದ ಪ್ಯಾಕ್ ಹೌಸ್ ಕಾಮಗಾರಿಗೆ ಬಿಲ್ ಮಾಡಿಕೊಡಲು ವಿಳಂಭ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕಳೆದ ಎರಡು ದಿನಗಳಿಂದ (Farmers Protest) ಪ್ರತಿಭಟನೆ ನಡೆಸಲಾಗುತ್ತಿದ್ದು, ಆ.30 ರಂದು ಕೆಲ ಸಮಯ ರಸ್ತೆ ತಡೆ ನಡೆಸಿದ ಬಳಿಕ ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿ ಗಾಯತ್ರಿ ಸ್ಥಳಕ್ಕೆ (Farmers Protest) ಬಂದು ರೈತರಿಂದ ಮನವಿ ಸ್ವೀಕರಿಸಿದರು.
Farmers Protest ಪ್ರತಿಭಟನೆ ನಡೆಸಲು ಕಾರಣ:
ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಜಿ.ಸಿ.ವೆಂಕಟೇಶಪ್ಪರವರಿಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಪ್ಯಾಕ್ ಹೌಸ್ ನಿರ್ಮಾಣಕ್ಕೆ ಆಯ್ಕೆಯಾಗಿದ್ದು, (Farmers Protest) ಅದರಂತೆ ತೋಟಗಾರಿಕೆ ಇಲಾಖೆಯಿಂದ ಕಾರ್ಯಾದೇಶ ನೀಡಲಾಗಿತ್ತು. ಅರ್ಜಿ ಆಹ್ವಾನಿಸಿದಾಗ ಹಾಗೂ ಫಲಾನುಭವಿ ಆಯ್ಕೆಯಾದಾಗ ಜಂಟಿ ಪಹಣಿ ಇದ್ದರೇ ಒಪ್ಪಿಗೆ ಪತ್ರ ನೀಡಿ (Farmers Protest) ಅಂತಾ ಹೇಳಿರಲಿಲ್ಲ. ಕಾಮಗಾರಿ ಆರಂಭವಾಗಿ ಅರ್ಧ ಮುಗಿದಿದೆ. ಈ ಸಮಯದಲ್ಲಿ ತಕರಾರು ಬಂದಿದೆ ಎಂದು (Farmers Protest) ಕಾಮಗಾರಿಯ ಬಿಲ್ ಮಾಡುತ್ತಿಲ್ಲ. ಇದರಿಂದ ಸಾಲ (Farmers Protest) ಮಾಡಿಕೊಂಡು ಕಾಮಗಾರಿಯನ್ನು ಮಾಡುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಜಿ.ಸಿ.ವೆಂಕಟೇಶಪ್ಪ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ (Farmers Protest) ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು.
Farmers Protest – ರಸ್ತೆ ತಡೆ ನಡೆಸಿ ಆಕ್ರೋಷ ಹೊರಹಾಕಿದ ರೈತರು:
ಇನ್ನೂ ಆ.28 ರಂದು ಹಮ್ಮಿಕೊಂಡಿದ್ದ ಈ ಪ್ರತಿಭಟನೆ ಆ.30 ರವರೆಗೆ ನಡೆಯಿತು. ಆ.30 ಶುಕ್ರವಾರ ಮದ್ಯಾಹ್ನ ಸಮಯದಲ್ಲಿ ಪಟ್ಟಣದ ಮುಖ್ಯರಸ್ತೆಯನ್ನು ಕೆಲ ಸಮಯ ಬಂದ್ ಮಾಡಿ (Farmers Protest) ಪ್ರತಿಭಟಿಸಲಾಯಿತು. ಬಳಿಕ ಪೊಲೀಸರ ಮನವೊಲಿಕೆ ನಂತರ ರಸ್ತೆ ತಡೆಯನ್ನು ಕೈಬಿಟ್ಟು ಪುನಃ ತೋಟಗಾರಿಕೆ ಇಲಾಖೆಯ ಮುಂಭಾಗ ಪ್ರತಿಭಟನೆ (Farmers Protest) ಮುಂದುವರೆಸಲಾಯಿತು. ಬಳಿಕ ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಬಂದು ರೈತರಿಂದ ಮನವಿ (Farmers Protest) ಸ್ವೀಕರಿಸಿದರು.
Farmers Protest – ರೈತ ಸಂಘದ ಜಿಲ್ಲಾಧ್ಯಕ್ಷ ಹೇಳಿದ್ದು:
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್) ಬಣದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್, (Farmers Protest) ತೋಟಗಾರಿಕೆ ಇಲಾಖೆಯಲ್ಲಿ ಕೆಲವೊಂದು ನಿಯಮಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ನಿಯಮಗಳಿಂದ ಇದೀಗ ಈ ಸಮಸ್ಯೆ ಉದ್ಬವಿಸಿದೆ. ಆದ್ದರಿಂದ ಈ ಸಮಸ್ಯೆಗಳನ್ನು ಸಡಿಲಿಸುವ ನಿಟ್ಟಿನಲ್ಲಿ (Farmers Protest) ತಮ್ಮ ಮೇಲಾಧಿಕಾರಿಗಳಿಗೆ ನಮ್ಮ ಪರವಾಗಿ ವರದಿ ನೀಡಬೇಕು. (Farmers Protest) ಜೊತೆಗೆ ಗಂಧಂನಾಗೇನಹಳ್ಳಿ ಗ್ರಾಮದ ಜಿ.ಸಿ.ವೆಂಕಟೇಶಪ್ಪರವರಿಗೆ ಪ್ಯಾಕ್ ಹೌಸ್ ನಿರ್ಮಾಣದ ಬಿಲ್ ಮಂಜೂರು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯ ಜಿಲ್ಲಾ ನಿರ್ದೇಶಕಿ ಗಾಯತ್ರಿ ಹೇಳಿದ್ದು:
ಬಳಿಕ ತೋಟಗಾರಿಕೆ ಇಲಾಖೆಯ ಜಿಲ್ಲಾ ನಿರ್ದೇಶಕಿ ಗಾಯತ್ರಿ ಮಾತನಾಡಿ, ಈ ನಿಯಮಗಳು ಸರ್ಕಾರದ ಹಂತದಲ್ಲಿ ಸಡಿಲಿಕೆಯಾಗಬೇಕು. ಸದ್ಯ ತಮ್ಮ ಮನವಿಯನ್ನು ನಮ್ಮ ಮೇಲಾಧಿಕಾರಿಗಳಿಗೆ ಖುದ್ದು ನಾನೇ ವರದಿ ನೀಡಿ ತಿಳಿಸುತ್ತೇನೆ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ (Farmers Protest) ತೋಟಗಾರಿಕೆ ಇಲಾಖೆಯ ಕೃಷ್ಣಮೂರ್ತಿ, ರೈತ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಅನೇಕ ರೈತರು ಹಾಜರಿದ್ದರು.