Farmers Awareness – ಭತ್ತ, ಮೆಕ್ಕೆಜೋಳ, ಕಬ್ಬು, ರಾಗಿ ಸೇರಿದಂತೆ ಹಲು ಬೆಳೆಗಳನ್ನು ಕಾಡುವ ಬೂದಿ ಹುಳು (ಫಾರ್ಮ್ ಆರ್ಮಿ ವರ್ಮ್) ಕೀಟದಿಂದ ಪಾರಾಗಲು ರೈತರು ಸಮಗ್ರ ಕೀಟ ನಿರ್ವಹಣೆ ಪದ್ದತಿಯನ್ನು ಅನುಸರಿಸಬೇಕೆಂದು ರೈತ ತರಬೇತಿ ಕೇಂದ್ರದ ವಿಜ್ಞಾನಿ ರಾಧಾಕೃಷ್ಣನ್ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ರೈತರಿಗಾಗಿ ಫಾಲ್ ಆರ್ಮಿ ವರ್ಮ್ (ಬೂದಿ ಹುಳು) ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Farmers Awareness – ಬೂದಿ ಹುಳು – ಕೃಷಿಗೆ ದೊಡ್ಡ ತಲೆನೋವು
ಈ ವೇಳೆ ಮಾತನಾಡಿದ ಅವರು, ಫಾಲ್ ಆರ್ಮಿ ವರ್ಮ್ ಒಂದು ವಿದೇಶಿ ಕೀಟವಾಗಿದ್ದು, ಇದು ಮುಖ್ಯವಾಗಿ ಮೆಕ್ಕೆಜೋಳ, ಭತ್ತ, ಕಬ್ಬು, ರಾಗಿ ಮತ್ತು ಇತರ ಹಲವು ಬೆಳೆಗಳನ್ನು ಭಾರಿ ಪ್ರಮಾಣದಲ್ಲಿ ನಾಶಪಡಿಸುತ್ತದೆ. ಈ ಹುಳುವು ತನ್ನ ಆರಂಭಿಕ ಹಂತದಲ್ಲಿ ಸಸ್ಯದ ಎಲೆಗಳನ್ನು ತಿನ್ನುತ್ತಾ, ನಂತರ ಕಾಂಡದ ಒಳಗೆ ಸೇರಿಕೊಂಡು ಬೆಳೆಯ ಸಂಪೂರ್ಣ ನಾಶಕ್ಕೆ ಕಾರಣವಾಗುತ್ತದೆ. ಈ ಕೀಟವು ಅತಿ ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತದೆ ಮತ್ತು ವಲಸೆ ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ, ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಫಾಲ್ ಆರ್ಮಿ ವರ್ಮ್ ನಿಯಂತ್ರಣಕ್ಕೆ ಕೇವಲ ಒಂದು ವಿಧಾನ ಪರಿಣಾಮಕಾರಿ ಅಲ್ಲ. ಹೀಗಾಗಿ, ಸಮಗ್ರ ಕೀಟ ನಿರ್ವಹಣೆ ವಿಧಾನವನ್ನು ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದರು.
Farmers Awareness – ಬೂದಿ ಹುಳು ಬೆಳೆಗಳನ್ನು ಹೇಗೆ ನಾಶಪಡಿಸುತ್ತದೆ?
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಚೇತನಾ ಬೂದಿ ಹುಳು ಬೆಳೆಗಳಿಗೆ ಹೇಗೆ ಹಾನಿ ಮಾಡುತ್ತದೆ ಹಾಗೂ ಅದನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಂಡರು. ಬೂದಿ ಹುಳುಗಳಿಂದ ನಿಮ್ಮ ಬೆಳೆ ಹಾನಿಯಾಗಿದ್ದಾರೆ. ಸಸ್ಯದ ಎಲೆಗಳಲ್ಲಿ ಸಣ್ಣ ಮತ್ತು ದೊಡ್ಡ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಇದು ಹುಳುಗಳು ಎಲೆಗಳನ್ನು ತಿನ್ನುವುದರ ಮೊದಲ ಲಕ್ಷಣ. ಹುಳುಗಳು ತಿಂದು ಹಾಕಿದ ನಂತರ ಅವುಗಳ ಮಲದ ಕಪ್ಪು ಕಣಗಳು ಎಲೆಗಳ ಮೇಲೆ ಕಾಣಸಿಗುತ್ತವೆ. ಮೆಕ್ಕೆಜೋಳದ ಗಿಡಗಳ ಹೃದಯ ಭಾಗವನ್ನು ಹುಳುಗಳು ತಿಂದು ಹಾಕಿ ಗಿಡದ ಬೆಳವಣಿಗೆಯನ್ನು ನಿಲ್ಲಿಸುತ್ತವೆ. Read this also : ಕೃಷಿಯಲ್ಲಿ ಹೊಸ ಕ್ರಾಂತಿ: ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ – ಡಾ.ವಿಶ್ವನಾಥ್
ಈ ಕೀಟದ ಹಾವಳಿಯಿಂದಾಗಿ ಬೆಳೆಯ ಬೆಳವಣಿಗೆ ಕುಂಠಿತವಾಗಿ, ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಇನ್ನೂ ಕೀಟದ ಹಾವಳಿ ಕಾಣಿಸಿಕೊಂಡ ತಕ್ಷಣವೇ ಬಾದಿತ ಸಸ್ಯಗಳನ್ನು ಗುರ್ತಿಸಿ ಅವುಗಳನ್ನು ನಾಶಪಡಿಸಬೇಕು. ಹೊಲಗಳಲ್ಲಿ ಫೆರೊಮೊನ್ ಟ್ರ್ಯಾಪ್‌ಗಳನ್ನು ಬಳಸಿ ಗಂಡು ಪತಂಗಗಳನ್ನು ಆಕರ್ಷಿಸಿ ಹಿಡಿದು ನಾಶಪಡಿಸಬಹುದು. ಟ್ರೈಕೊಗ್ರಾಮ ಎಂಬ ಸೂಕ್ಷ್ಮ ಕೀಟಗಳನ್ನು ಹೊಲಗಳಲ್ಲಿ ಬಿಡುವುದರಿಂದ, ಅವು ಫಾಲ್ ಆರ್ಮಿ ವರ್ಮ್ ಮೊಟ್ಟೆಗಳನ್ನು ನಾಶಪಡಿಸುತ್ತವೆ. ಜೊತೆಗೆ ಮತ್ತಷ್ಟು ಪದ್ದತಿಗಳ ಮೂಲಕ ಬೂದಿಹುಳುಗಳನ್ನು ನಿವಾರಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು ಎಂದರು.
Farmers Awareness – ಕಾರ್ಯಕ್ರಮದಲ್ಲಿ ಹಾಜರಿದ್ದವರು
ಇನ್ನೂ ಕಾರ್ಯಕ್ರಮದಲ್ಲಿ ದಪ್ಪರ್ತಿ ಗ್ರಾ.ಪಂ ಪಿಡಿಒ ರಾಮಾಂಜಿನಪ್ಪ, ವಿದ್ಯಾರ್ಥಿಗಳಾದ ಧನ್ವಂತ್ ಗೌಡ, ಗಿರಿಜಾ, ಅಭಿಷೇಕ್ ಗೌಡ, ದೀಪಕ್, ದಿಶಾ, ನಂದಿ, ಗಣೇಶ್, ಹೇಮಂತ್, ಜಯಂತ್, ಚಿನ್ಮಯಿ, ಅಮೃತಾ, ಭೂಮಿಕಾ, ಚಂದನಾ, ಅಂಬಿಕಾ, ತೇಜಸ್ವಿನಿ, ಅಕುಮ್, ಕೌಶಿಕ್, ಮಧು, ಅಶ್ವಿನಿ, ಮಾಲ್ವಿಕಾ ಸೇರಿದಂತೆ ಸ್ಥಳೀಯರ ರೈತರು ಹಾಜರಿದ್ದರು.