HomeSpecialViral Video : ಮಗನಿಗಾಗಿ ಮಿಡಿದ ತಾಯಿ ಹೃದಯ, ಹುತಾತ್ಮ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ...

Viral Video : ಮಗನಿಗಾಗಿ ಮಿಡಿದ ತಾಯಿ ಹೃದಯ, ಹುತಾತ್ಮ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ವಿಡಿಯೋ ವೈರಲ್..!

ಚಳಿಗಾಲ ಬಂತೆಂದರೆ ಸಾಕು, ನಾವೆಲ್ಲರೂ ಬೆಚ್ಚಗಿನ ಹೊದಿಕೆ, ಸ್ವೆಟರ್‌ಗಳ ಮೊರೆ ಹೋಗುತ್ತೇವೆ. ಮನೆಯಿಂದ ಹೊರಬರಲು ನೂರು ಬಾರಿ ಯೋಚಿಸುತ್ತೇವೆ. ಆದರೆ, ಇಲ್ಲೊಬ್ಬ ತಾಯಿಗೆ ತನ್ನ ಮಗ ಇನ್ನು ಈ ಜಗತ್ತಿನಲ್ಲಿ ಇಲ್ಲ ಎಂಬ ಅರಿವಿದ್ದರೂ, ಆತನ ಪ್ರತಿಮೆಗೆ ಚಳಿಯಾಗಬಾರದೆಂದು ಕಂಬಳಿ ಹೊದಿಸಿರುವ ಹೃದಯಸ್ಪರ್ಶಿ ಘಟನೆ ಜಮ್ಮುವಿನಲ್ಲಿ ನಡೆದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿರುವ ಈ ವಿಡಿಯೋ ಪ್ರತಿಯೊಬ್ಬರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.

Rajasthan viral video shows over 60 people traveling in a 16 seater jeep

Viral Video – ಯಾರು ಈ ವೀರ ಯೋಧ?

ಜಮ್ಮುವಿನ ಹೀರಾ ನಗರ ಸೆಕ್ಟರ್‌ನ ಹುತಾತ್ಮ ಕಾನ್‌ಸ್ಟೆಬಲ್ ಗುರ್ನಾಮ್ ಸಿಂಗ್ (Gurnam Singh) ಭಾರತೀಯ ಸೈನ್ಯದ ಹೆಮ್ಮೆಯ ಪುತ್ರ. 2016ರ ಅಕ್ಟೋಬರ್ 21-22ರ ರಾತ್ರಿ ಪಾಕಿಸ್ತಾನಿ ಉಗ್ರರ ಒಳನುಸುಳುವಿಕೆಯನ್ನು ತಡೆಯುವಾಗ ಗುರ್ನಾಮ್ ವೀರಮರಣ ಅಪ್ಪಿದ್ದರು. ಸಾವಿಗೂ ಮುನ್ನ ಅವರು ಒಬ್ಬ ಭಯೋತ್ಪಾದಕನನ್ನು ಕೊಂದು, ಪಾಕಿಸ್ತಾನಿ ಸೇನೆಯ ಭಾರಿ ಶೆಲ್ ದಾಳಿಯ ನಡುವೆಯೂ ಗಡಿಯನ್ನು ರಕ್ಷಿಸಿದ್ದರು.

ಪ್ರತಿಮೆಯಲ್ಲಿ ಮಗನನ್ನು ಕಂಡ ತಾಯಿ

ಗುರ್ನಾಮ್ ಸಿಂಗ್ ಅವರ ತಾಯಿ ಜಸ್ವಂತ್ ಕೌರ್ ಅವರಿಗೆ ಆ ಪ್ರತಿಮೆ ಕೇವಲ ಕಲ್ಲಿನ ವಿಗ್ರಹವಲ್ಲ; ಬದಲಿಗೆ ಉಸಿರಾಡುತ್ತಿರುವ ಮಗ. ಹೊರಗೆ ಕೊರೆಯುವ ಚಳಿ ಶುರುವಾದ ಕೂಡಲೇ, ತಾಯಿ ಮನಸ್ಸು ಮಗನ ಬಗ್ಗೆ ಹಪಹಪಿಸಿದೆ. ತಾನು ಮನೆಯಲ್ಲಿ ಬೆಚ್ಚಗಿರುವಾಗ, ಮಗ ಅಲ್ಲಿ ಚಳಿಯಲ್ಲಿ ನಡುಗಬಾರದೆಂದು ಓಡಿ ಹೋಗಿ ಪ್ರತಿಮೆಯ ಸುತ್ತಲೂ ಪ್ರೀತಿಯಿಂದ ಕಂಬಳಿ (Viral Video) ಹೊದಿಸಿದ್ದಾರೆ.

“ನಾನು ಒಬ್ಬ ತಾಯಿ. ಈ ಕೊರೆಯುವ ಚಳಿಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವಾಗ, ನನ್ನ ಮಗನ ಪ್ರತಿಮೆಯನ್ನು ಚಳಿಗೆ ಒಡ್ಡಲು ನನಗೇಗೆ ಮನಸ್ಸು ಬರಲಿ?” ಎಂದು ಅವರು ಹೇಳಿದ ಮಾತುಗಳು ದೇಶದ ಜನರ ಹೃದಯವನ್ನು ಕರಗಿಸುತ್ತಿವೆ. Read this also : ಬಡತನದ (Poverty) ಬೇಗೆಯಲ್ಲೂ ಅಪ್ಪನ ಮಮತೆಯ ಆಸರೆ: ಈ ಪುಟ್ಟ ಬಾಲಕನ ದೃಶ್ಯ ನಿಮ್ಮ ಕಣ್ಣಾಲಿಗಳನ್ನು ತೇವಗೊಳಿಸುವುದು ಖಚಿತ..!

ಗಡಿ ಕಾಯುವ ಸೈನಿಕರ ತ್ಯಾಗಕ್ಕೆ ಬೆಲೆ ಇದೆಯೇ?

ಈ ಘಟನೆಯ ಕುರಿತು ಗುರ್ನಾಮ್ ಅವರ ಸಹೋದರ ಕುಲ್ವಿಂದರ್ ಸಿಂಗ್ ಹೆಮ್ಮೆಯಿಂದ ಹೀಗೆ ಹೇಳುತ್ತಾರೆ: “ನೀವು ತ್ರಿವರ್ಣ ಧ್ವಜ ಹಾರಾಡುವುದನ್ನು ನೋಡಿದರೆ, ಅದು ಕೇವಲ ಗಾಳಿಯಿಂದಲ್ಲ; ಗುರ್ನಾಮ್ ಅಂತಹ ಸಾವಿರಾರು ಸೈನಿಕರ ಕೊನೆಯ ಉಸಿರಿನಿಂದ ಅದು ಹಾರಾಡುತ್ತಿದೆ.” ಅವರ ನೆರೆಮನೆಯ (Viral Video) ಅಶ್ವಿನಿ ಎಂಬುವವರು ಹೇಳುವಂತೆ, ನಮಗೆ ಗುರ್ನಾಮ್ ಒಬ್ಬ ವೀರ ಸೈನಿಕನಿರಬಹುದು. ಆದರೆ ಅವರ ತಾಯಿಗೆ ಮಾತ್ರ ಆತ ಇಂದಿಗೂ ಅವರ ಅಸ್ತಿತ್ವದ ಒಂದು ಅವಿಭಾಜ್ಯ ಅಂಗ.

Rajasthan viral video shows over 60 people traveling in a 16 seater jeep

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 
ತಾಯಿಯ ಪ್ರೀತಿಗೆ ಸಾಟಿಯಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿರುವ ಜನರು “ತಾಯಿಯ ಪ್ರೀತಿಗೆ ಸಾವಿಲ್ಲ”, “ವೀರ ಸೈನಿಕನಿಗೆ ಮತ್ತು ಆ ವೀರ ಮಾತೆಗೆ ನಮ್ಮದೊಂದು ಸಲ್ಯೂಟ್” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ದೇಶದ ಗಡಿ ಕಾಯುವ ಸೈನಿಕರ ಮೇಲೆ ನಮಗೆಷ್ಟು ಗೌರವವಿದೆಯೋ, ಅಷ್ಟೇ (Viral Video) ಗೌರವ ಅವರನ್ನು ಹೆತ್ತ ತಾಯಂದಿರ ಮೇಲೂ ಇರಬೇಕು ಎಂಬುದಕ್ಕೆ ಈ ಘಟನೆ ಒಂದು ಸಾಕ್ಷಿ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular