ಪ್ರಾಣಿ ಪ್ರಪಂಚ ಎಂದರೆ ಹಾಗೆಯೇ, ಅಲ್ಲಿ ಯಾವಾಗ ಏನು ನಡೆಯುತ್ತದೆ ಎಂದು ಹೇಳುವುದು ಕಷ್ಟ. ಅದರಲ್ಲೂ ಆನೆಗಳು (Elephants) ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅವುಗಳ ಆಟ-ಪಾಠ, ತುಂಟಾಟಗಳನ್ನು ನೋಡುತ್ತಿದ್ದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆನೆಗಳಿಗೆ (Viral Video) ಸಂಬಂಧಿಸಿದ ವಿಡಿಯೋಗಳು ಸದಾ ಸದ್ದು ಮಾಡುತ್ತಿರುತ್ತವೆ. ಆದರೆ, ಆನೆಗಳು ಯಾವಾಗಲೂ ಶಾಂತವಾಗಿರುತ್ತವೆ ಎಂದುಕೊಂಡರೆ ಅದು ತಪ್ಪು!

ಸಾಮಾನ್ಯವಾಗಿ ಆನೆಗಳು ಅಷ್ಟು ಬೇಗ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆದರೆ ಯಾರಾದರೂ ಸುಖಾಸುಮ್ಮನೆ ಕೆಣಕಲು ಬಂದರೆ ಮಾತ್ರ ಅವುಗಳು ಸುಮ್ಮನಿರುವುದಿಲ್ಲ. ಇದೀಗ ಅಂತಹದ್ದೇ ಒಂದು ಮಜವಾದ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.
Viral Video – ವಿಡಿಯೋದಲ್ಲೇನಿದೆ?
ಲೆಕ್ ಚೈರ್ಲಟ್ (lek_chailert) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಆನೆಗಳ ಹಿಂಡು ಒಂದು ಕಡೆ ನಿಂತಿರುವುದನ್ನು ನಾವು ನೋಡಬಹುದು. ಅಲ್ಲಿಗೆ ಬಂದ ಬಿಳಿ ಬಣ್ಣದ ನಾಯಿಯೊಂದು ಅಚಾನಕ್ಕಾಗಿ ಆನೆಯನ್ನು ನೋಡಿ ಜೋರಾಗಿ ಬೊಗಳಲು ಶುರು ಮಾಡುತ್ತದೆ.
ಪ್ರಾರಂಭದಲ್ಲಿ ಈ ಗಜರಾಜ ನಾಯಿಯ ಬೊಗಳುವಿಕೆಯನ್ನು ಸಾಧಾರಣವಾಗಿ ತಗೆದುಕೊಂಡು ಸುಮ್ಮನಿರುತ್ತದೆ. “ಹೋಗಲಿ ಬಿಡು ಚಿಕ್ಕ ಪ್ರಾಣಿ” ಎಂದು ನಿರ್ಲಕ್ಷ್ಯ ಮಾಡುತ್ತದೆ. ಆದರೆ ಈ ಶ್ವಾನರಾಯ ಮಾತ್ರ ಸುಮ್ಮನಾಗದೇ ಮತ್ತೆ ಮತ್ತೆ ಆನೆಯ ಹತ್ತಿರ ಹೋಗಿ ಬೊಗಳುತ್ತಾ ಕಿರಿಕ್ ಮಾಡುತ್ತದೆ. ನಾಯಿಯ ಅತಿಯಾದ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಆನೆಯು, ಕೊನೆಗೆ ತನ್ನ ಕಾಲಿನಿಂದ ಒಂದೇ ಒಂದು ‘ಬ್ಯಾಕ್ ಕಿಕ್’ (Viral Video) ನೀಡುವ ಮೂಲಕ ನಾಯಿಗೆ ಸರಿಯಾದ ಬುದ್ಧಿ ಕಲಿಸಿದೆ. Read this also : ಅಮ್ಮನ ಪ್ರೀತಿ ಅಂದ್ರೆ ಇದೇ ಅಲ್ವಾ? ಮರಿಯಾನೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ತಾಯಿ ಆನೆ…!

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಈಗಾಗಲೇ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆನೆಯ ಈ ಚಮತ್ಕಾರಿ (Viral Video) ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ : Click Here
- ಒಬ್ಬ ಬಳಕೆದಾರರು “ನೋಡಲು ತುಂಬಾನೇ ಮುದ್ದಾಗಿದೆ“ ಎಂದು ಹೇಳಿದ್ದರೆ.
- ಇನ್ನೊಬ್ಬರು ತಮಾಷೆಯಾಗಿ “01% ದಾಳಿ ಹಾಗೂ 0% ಡ್ಯಾಮೇಜ್“ ಎಂದು ಕಾಮೆಂಟ್ ಮಾಡಿದ್ದಾರೆ. ಅಂದರೆ ಆನೆ ನಾಯಿಗೆ ತೊಂದರೆ ನೀಡುವ ಉದ್ದೇಶ ಹೊಂದಿರಲಿಲ್ಲ, ಕೇವಲ ಹೆದರಿಸಿ ಓಡಿಸಿತು ಎಂಬುದು ಅವರ ಅಭಿಪ್ರಾಯ.
- ಮತ್ತೊಬ್ಬರು ಆನೆಯ ಶೈಲಿಯನ್ನು ನೋಡಿ “ನನಗೆ ಈ ರೀತಿಯ ಬ್ಯಾಕ್ಕಿಕ್ ಇಷ್ಟ“ ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ, ಎಷ್ಟೇ ಸಾಧುವಾಗಿದ್ದರೂ ತನ್ನನ್ನು ಕೆಣಕಿದರೆ ಆನೆಗಳು ಸುಮ್ಮನಿರುವುದಿಲ್ಲ ಎಂಬುದು ಈ (Viral Video) ವಿಡಿಯೋ ಮೂಲಕ ಸಾಬೀತಾಗಿದೆ.
