Sunday, August 31, 2025
HomeStateEducation: ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಸೂಚನೆಗಳು...!

Education: ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಸೂಚನೆಗಳು…!

Education – ಆದರ್ಶ ವಿದ್ಯಾಲಯದಲ್ಲಿ 2025-26ನೇ ಸಾಲಿನ ಪ್ರವೇಶ ಪರೀಕ್ಷೆಗೆ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಫೆ.28 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ www.schooleducation.karnataka.gov.in ತಾಣದ ಮೂಲಕ ಅರ್ಜಿ ಸಲ್ಲಿಸಬೇಕು.

Education - Adarsha Vidyalaya 6th Grade Admission 2025-26 - Apply Online

Education – ಅರ್ಜಿ ಸಲ್ಲಿಸುವ ಪ್ರಮುಖ ಮಾಹಿತಿ:

ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ತಾಲೂಕಿನ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಬೇರೆ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ತಹಶೀಲ್ದಾರರಿಂದ ಪಡೆದ ಗುಡಿಬಂಡೆ ತಾಲ್ಲೂಕಿನ ವಾಸ ಸ್ಥಳ ಪ್ರಮಾಣ ಪತ್ರ ಹೊಂದಿರಬೇಕು. SATS ಸಂಖ್ಯೆ ಹೊಂದಿರಬೇಕು, ಸಕ್ಷಮ ಪ್ರಾಧಿಕಾರದಿಂದ (ತಹಶೀಲ್ದಾರ್) ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಪೋಷಕರ ಮೊಬೈಲ್ ಸಂಖ್ಯೆ ನೀಡುವುದು ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

Education - Adarsha Vidyalaya 6th Grade Admission 2025-26 - Apply Online

Education – ಸಾಮಾನ್ಯ ಸೂಚನೆಗಳು :

  1. ಆನ್ ಲೈನ್‌ನ ಮೂಲಕ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಭ್ಯರ್ಥಿಗಳು ಜಾಹಿರಾತು, ಸೂಚನೆಗಳನ್ನು ಅರ್ಥೈಸಿಕೊಂಡು ಅರ್ಹ ಮಾನದಂಡಗಳು ತೃಪ್ತಿಕರವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
  2. 5ನೇ ತರಗತಿ ಓದುತ್ತಿರುವ ಕರ್ನಾಟಕ ರಾಜ್ಯದ ನಿವಾಸಿ ವಿದ್ಯಾರ್ಥಿಗಳಿಗೆ ಮಾತ್ರ ಈ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿದ್ದು, ಇತರೆ ರಾಜ್ಯಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾದ ಅರ್ಹತೆ ಹೊಂದಿರುವುದು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
  3. ಆದರ್ಶ ವಿದ್ಯಾಲಯಗಳಿರುವ ಬ್ಲಾಕ್‌ಗಳಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುವ ಅಭ್ಯರ್ಥಿಗಳಿಗೆ ಮಾತ್ರ ಆನ್ವಯಿಸುತ್ತದೆ. ಆದರೆ ಅಭ್ಯರ್ಥಿಗಳು ಬೇರೆ ಬ್ಲಾಕ್‌ಗಳಲ್ಲಿ ವಾಸಿಸುತ್ತಿದ್ದಲ್ಲಿ ಅಥವಾ ಅಧ್ಯಯನ ಮಾಡುತ್ತಿದ್ದಲ್ಲಿ ಅಧಿಸೂಚನೆಯನ್ವಯ ತಿಳಿಸಿದ ಅಗತ್ಯ ದಾಖಲೆಗಳನ್ನು ಒದಗಿಸಬೇಕು.
  4. ಕರ್ನಾಟಕ ರಾಜ್ಯಕ್ಕೆ ಸೇರಿದ ಅಭ್ಯರ್ಥಿಯು ಯಾವುದಾದರು ಒಂದು ಶಾಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು.
  5. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯ ಪೋಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ನೀಡತಕ್ಕದ್ದು. ಕೆಲವು ಮಾಹಿತಿ/ಸೂಚನೆಗಳನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡಲಾಗುವುದು.
  6. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಯು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ SATS ಸಂಖ್ಯೆಯನ್ನು ತರತಕ್ಕದ್ದು. ಒಂದು ವೇಳೆ ಯಾವುದೇ ವಿದ್ಯಾರ್ಥಿಯು SATS ಸಂಖ್ಯೆಯನ್ನು ಹೊಂದಿಲ್ಲದಿದ್ದಲ್ಲಿ ತಮ್ಮ ಶಾಲೆಯ ಮುಖ್ಯಸ್ಮರನ್ನು ಭೇಟಿಮಾಡಿ ತಮ್ಮ SATS ಸಂಖ್ಯೆಯನ್ನು ಪಡೆದ ನಂತರವೇ ಅರ್ಜಿ ಸಲ್ಲಿಸುವುದು. ಈ ಕೆಳಗೆ ಸೂಚಿಸುರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಲು ಸಿದ್ದಪಡಿಸಿಕೊಂಡಿರುವುದು. ಈ ಎಲ್ಲಾ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಆನ್ ಲೈನ್ ನಲ್ಲಿ ಅಪ್‌ ಲೋಡ್ ಮಾಡುವುದು. ಎಲ್ಲಾ ದಾಖಲೆಗಳು jpg/,jpeg ಮತ್ತು 300kb ಗಾತ್ರದಲ್ಲಿ ಸಿದ್ಧಪಡಿಸಿರಬೇಕು.

Education - Adarsha Vidyalaya 6th Grade Admission 2025-26 - Apply Online

  1. ಆನ್ ಲೈನ್ ನಲ್ಲಿ ಅಪ್‌ ಲೋಡ್ ಮಾಡುವ ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಓದುವ ಹಾಗೂ ಕಾಣುವ ರೀತಿ ಅಳವಡಿಸುವುದು.
  2. ಅಸ್ಪಷ್ಟ ದಾಖಲೆಗಳೊಂದಿಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗುವುದು.
  3. ಅಪೂರ್ಣವಾಗಿ ತುಂಬಿದ ಹಾಗೂ ಸಲ್ಲಿಸದೇ ಇರುವ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
  4. ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯ ಸ್ವೀಕೃತಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು.
  5. ಅರ್ಜಿ ಅಥವಾ ದಾಖಲೆಯನ್ನು ಅಂಚೆಯ ಮೂಲಕ ಸಲ್ಲಿಸುವಂತಿಲ್ಲ. ಆನ್ನೈನ್ ಅರ್ಜಿ ಮಾತ್ರ ಸ್ವೀಕರಿಸಲಾಗುತ್ತದೆ.
  6. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಸಿದ್ದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
  7. ಅರ್ಜಿಯಲ್ಲಿ ಭರ್ತಿ ಮಾಡಿದ ಎಲ್ಲಾ ವಿವರಗಳು ಸರಿಯಾಗಿದೆ ಎಂದು ಪರಿಶೀಲಿಸಿಕೊಳ್ಳತಕ್ಕದ್ದು. ಒಂದು ವೇಳೆ ಯಾವುದಾದರು ಲೋಪದೋಷಗಳು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು.
  8. ಅಭ್ಯರ್ಥಿಯು ಪ್ರವೇಶ ಪರಿಕ್ಷೆಯನ್ನು ಬರೆಯುವ ಪೂರ್ವದಲ್ಲಿ ಅಥವಾ ದಾಖಲಾತಿ ಮಾಡುವ ಮುನ್ನ ತಮ್ಮ ದಾಖಲೆಗಳು ಸೂಕ್ತವಿರುವುದರ ಕುರಿತು ಪರೀಶಿಲಿಸಿಕೊಳ್ಳತಕ್ಕದ್ದು. ಸರಿಯಾದ ದಾಖಲೆ ಸಲ್ಲಿಸದಿದ್ದಲ್ಲಿ ವಿದ್ಯಾರ್ಥಿಯ ಆಯ್ಕೆಯನ್ನು ತಿರಸ್ಕರಿಸಲಾಗುವುದು. ಇದನ್ನು ಪ್ರಶ್ನಿಸುವ ಹಕ್ಕು ಇರುವುದಿಲ್ಲ.
  9. ಅರ್ಜಿಯ ಸಂಖ್ಯೆ/SATS ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸುವುದರ ಮೂಲಕ ಅರ್ಜಿಯ ಸ್ವೀಕೃತಿಯನ್ನು ವೀಕ್ಷಿಸಬಹುದು.
  10. ಪ್ರವೇಶ ಪತ್ರವನ್ನು ಮಾರ್ಗಸೂಚಿಯಲ್ಲಿ ಸೂಚಿಸಿದ ದಿನಾಂಕಗಳ ಅವಧಿಯಲ್ಲಿ ಅರ್ಜಿಯ ಸಂಖ್ಯೆ /SATS ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸುವುದರ ಮೂಲಕ ಪಡೆಯಬಹುದಾಗಿದೆ.
  11. ಯಾವುದೇ ಹೆಚ್ಚಿನ ಮಾಹಿತಿಗಾಗಿ ssakarnataka@outlook.com ಮೂಲಕ ಮಾಹಿತಿಯನ್ನು ಸಲ್ಲಿಸಿ ಪಡೆಯಬಹುದಾಗಿದೆ.
    18. ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಹತ್ತಿರದ ಸ್ಥಳದಲ್ಲಿ ಯಾದೃಚ್ಛಿಕವಾಗಿ ಹಂಚಲಾಗುತ್ತದೆ. ಆದರ್ಶ ಶಾಲೆಯನ್ನು ಆಯ್ಕೆ ಮಾಡಿಕೊಂಡ ತಾಲ್ಲೂಕಿನಲ್ಲಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲಾಗುತ್ತದೆ. ಅದನ್ನು ಮಾರ್ಪಡಿಸಲಾಗುವುದಿಲ್ಲ.
  12. ಎಎಂಎಸ್ ಕಳುಹಿಸಲು ಮೂರನೇ ವ್ಯಕ್ತಿಯ ಎಸ್‌ಎಂಎಸ್ ಗೇಟ್‌ವೇಗಳನ್ನು ಬಳಸಲಾಗುತ್ತದೆ. ಈ ಗೇಟ್‌ವೇಗಳಲ್ಲಿನ ವೈಫಲ್ಯಗಳು ಇಲಾಖೆಯ ಜವಾಬ್ದಾರಿಯಾಗಿರುವುದಿಲ್ಲ. ಆದ್ದರಿಂದ, ಪಾಲುದಾರರು ವೆಬ್‌ಸೈಟ್ ನೋಡುತ್ತಲೇ ವಿದ್ಯಾಲಯದೊಂದಿಗೆ ಸಂಪರ್ಕದಲ್ಲಿರಬೇಕು ಇರಬೇಕು.
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular