ಸಾಮಾನ್ಯವಾಗಿ ಕುಡುಕರು ರಸ್ತೆಯಲ್ಲಿ ಬಿದ್ದು ಹೊರಳಾಡುವುದು ಅಥವಾ ಸಾರ್ವಜನಿಕವಾಗಿ ರಗಳೆ ಮಾಡುವುದನ್ನು ನಾವು ಕೇಳಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ ಎಂಬಂತೆ ವರ್ತಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಬಸ್ ನಿಲ್ದಾಣ, ಮೆಟ್ರೋ ಅಥವಾ ಜನನಿಬಿಡ ರಸ್ತೆಗಳಲ್ಲಿ ಕುಡಿದು ಮತಿ (Drunk Woman) ಗೆಟ್ಟು ವರ್ತಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತಹದ್ದೇ ಒಂದು ಶಾಕಿಂಗ್ ಘಟನೆ ಈಗ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ.

Drunk Woman – ವೈನ್ ಶಾಪ್‌ನಲ್ಲಿ ಯುವತಿಯ ರಣಾಂಗಣ!
ಬಾಪಟ್ಲಾದ ಪೇಟಾ ಪ್ರದೇಶದಲ್ಲಿರುವ ಶ್ರೀನಿವಾಸ್ ವೈನ್ಸ್ ಮಳಿಗೆಗೆ ಯುವತಿಯೊಬ್ಬಳು ಎಂಟ್ರಿ ಕೊಟ್ಟಿದ್ದಾಳೆ. ಬಂದವಳೇ ಸಮಾಧಾನದಿಂದ ಇರದೆ, ಅಲ್ಲಿನ ಸಿಬ್ಬಂದಿಯೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಅಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಸಿಬ್ಬಂದಿಯ ಕಾಲರ್ ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದಾಳೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಒಂದು ಕ್ಷಣ ದಂಗಾಗಿದ್ದಾರೆ.
Read this also : ಅರ್ಬನ್ ಕಂಪನಿ ಮಸಾಜ್ ಬುಕ್ ಮಾಡಿದ ಮಹಿಳೆಗೆ ಶಾಕ್ : ಮನೆಗೆ ಬಂದು ಗ್ರಾಹಕಿಯ ಮೇಲೆ ಹಲ್ಲೆ ಮಾಡಿದ ಸಿಬ್ಬಂದಿ!
ಗಲಾಟೆಗೆ ಅಸಲಿ ಕಾರಣವೇನು?
ಈ ರಂಪಾಟಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಎರಡು ರೀತಿಯ ಚರ್ಚೆಗಳು ನಡೆಯುತ್ತಿವೆ. ಯುವತಿ ಕೇಳಿದ ನಿರ್ದಿಷ್ಟ ಮದ್ಯದ ಬ್ರ್ಯಾಂಡ್ ಸ್ಟಾಕ್ ಇಲ್ಲ ಎಂದು ಸಿಬ್ಬಂದಿ ಹೇಳಿದ್ದಕ್ಕೆ ಅವಳು ಕೆರಳಿ ಕೆಂಡವಾಗಿದ್ದಾಳೆ ಎನ್ನಲಾಗುತ್ತಿದೆ. ಇನ್ನು ಕೆಲವರು ಹೇಳುವ ಪ್ರಕಾರ, ಆಕೆ ಆಗಲೇ ಪೂರ್ತಿಯಾಗಿ ಕುಡಿದಿದ್ದಳು. ಹಣ ನೀಡದೆ ಮತ್ತೆ ಮದ್ಯದ ಬಾಟಲಿ ನೀಡುವಂತೆ ಪಟ್ಟು ಹಿಡಿದಿದ್ದಾಳೆ. ಸಿಬ್ಬಂದಿ ನಿರಾಕರಿಸಿದ್ದಕ್ಕೆ ಈ ರೀತಿ (Drunk Woman) ರಂಪಾಟ ಮಾಡಿದ್ದಾಳೆ ಎನ್ನಲಾಗಿದೆ.
ವೈರಲ್ ಆದ ವಿಡಿಯೋ: ನೆಟ್ಟಿಗರ ಕಾಮೆಂಟ್ಸ್
ಈ ಇಡೀ ಘಟನೆಯನ್ನು ಅಲ್ಲಿನ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ:

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- “ಇವಳ ಸಿಟ್ಟು ನೋಡಿದರೆ ಬಿಟ್ಟರೆ ಅಲ್ಲಿರುವವರನ್ನೇ ಪೀಸ್ ಪೀಸ್ ಮಾಡುವಂತಿದ್ದಾಳೆ!” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
- “ಮದ್ಯದ ಅಮಲಿನಲ್ಲಿ ಸಾರ್ವಜನಿಕವಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ” ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬಾಪಟ್ಲಾದ ಈ ‘ಲೇಡಿ ಲಿಕ್ಕರ್ ಲವರ್’ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾಳೆ. ಕುಡಿತದ ಅಮಲಿನಲ್ಲಿ ಏನೇನು ಮಾಡಬಾರದು ಅನ್ನೋದಕ್ಕೆ ಈ ವಿಡಿಯೋ ಒಂದು ತಾಜಾ ಉದಾಹರಣೆ.
