ಕೇಂದ್ರ ಸರ್ಕಾರದ ರಕ್ಷಣಾ ವಲಯದಲ್ಲಿ ಉದ್ಯೋಗ ಪಡೆಯಬೇಕು ಎಂಬುದು ನಿಮ್ಮ ಕನಸೇ? ಹಾಗಾದರೆ ನಿಮಗೊಂದು ಸಿಹಿಸುದ್ದಿ ಇಲ್ಲಿದೆ. ಪ್ರತಿಷ್ಠಿತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 2025ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 764 ಹಿರಿಯ ತಾಂತ್ರಿಕ ಸಹಾಯಕ ಮತ್ತು ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷವೆಂದರೆ ಈ (DRDO Recruitment 2025) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಬನ್ನಿ, ಈ ಉದ್ಯೋಗದ ಕುರಿತಾದ ಸಂಪೂರ್ಣ ಮಾಹಿತಿ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ.

DRDO Recruitment 2025 – ನೇಮಕಾತಿ ಮುಖ್ಯಾಂಶಗಳು
- ಸಂಸ್ಥೆಯ ಹೆಸರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)
- ಹುದ್ದೆಯ ಹೆಸರು: ಹಿರಿಯ ತಾಂತ್ರಿಕ ಸಹಾಯಕ (Senior Technical Assistant), ತಂತ್ರಜ್ಞ (Technician)
- ಒಟ್ಟು ಹುದ್ದೆಗಳು: 764
- ಉದ್ಯೋಗ ಸ್ಥಳ: ಅಖಿಲ ಭಾರತ (All India)
- ಅರ್ಜಿ ವಿಧಾನ: ಆನ್‌ಲೈನ್
ಯಾರು ಅರ್ಜಿ ಸಲ್ಲಿಸಬಹುದು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ BE/B.Tech (ಇಂಜಿನಿಯರಿಂಗ್) ಪದವಿಯನ್ನು ಪೂರ್ಣಗೊಳಿಸಿರಬೇಕು. (DRDO Recruitment 2025)
ವಯೋಮಿತಿ ಎಷ್ಟಿರಬೇಕು?
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು. (ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇರಲಿದ್ದು, ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ). Read this also : SSLC ಪಾಸಾದವರಿಗೆ ಬಂಪರ್ ಆಫರ್! SSC ಯಲ್ಲಿ 25,487 ಕಾನ್‌ಸ್ಟೆಬಲ್ ಹುದ್ದೆಗಳು; ಕೂಡಲೆ ಅರ್ಜಿ ಸಲ್ಲಿಸಿ..!
ಆಕರ್ಷಕ ವೇತನ ಶ್ರೇಣಿ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗೆ ಅನುಗುಣವಾಗಿ ಮಾಸಿಕ ₹19,900 ರಿಂದ ₹1,12,000 ರವರೆಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ. ಇದು ಕೇಂದ್ರ ಸರ್ಕಾರಿ ಉದ್ಯೋಗವಾಗಿರುವುದರಿಂದ ಇತರ ಭತ್ಯೆಗಳು ಕೂಡ ಲಭ್ಯವಿರುತ್ತವೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
- ಅರ್ಜಿ ಶುಲ್ಕ: ಅಭ್ಯರ್ಥಿಗಳಿಗೆ ಅರ್ಜಿ (DRDO Recruitment 2025) ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ (No Application Fee). ಇದು ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವಾಗಿದೆ.
- ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-12-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2025

ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ DRDO ಅಧಿಕೃತ ವೆಬ್‌ಸೈಟ್ https://drdo.gov.in/drdo/ ಗೆ ಭೇಟಿ ನೀಡಿ.
- ಮುಖಪುಟದಲ್ಲಿ ‘Careers’ ಅಥವಾ ‘Recruitment’ ವಿಭಾಗವನ್ನು ಆಯ್ಕೆ ಮಾಡಿ.
- ಹಿರಿಯ ತಾಂತ್ರಿಕ ಸಹಾಯಕ/ತಂತ್ರಜ್ಞ ಹುದ್ದೆಯ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿ.
- ನಂತರ ‘Apply Online’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿಯನ್ನು ‘Submit’ ಮಾಡಿ ಮತ್ತು ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಗಮನಿಸಿ: ಆಸಕ್ತ ಅಭ್ಯರ್ಥಿಗಳು (DRDO Recruitment 2025) ಡಿಸೆಂಬರ್ 31ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಇಂದೇ ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳಿ.
ಪ್ರಮುಖ ಲಿಂಕ್ಗಳು:
| ಅಪ್ಲೇ ಆನ್ಲೈನ್ | Click Here |
| ಅಧಿಕೃತ ವೆಬ್‌ಸೈಟ್ | Click Here |
