“ಭಕ್ತಿ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಅದು ಮೂಕ ಪ್ರಾಣಿಗಳಿಗೂ ಅನ್ವಯಿಸುತ್ತದೆ” ಎಂಬ ಮಾತಿಗೆ ಪುಷ್ಠಿ ನೀಡುವಂತಹ ಅದ್ಭುತ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಾರಾಷ್ಟ್ರದ ಶನಿ ದೇವಸ್ಥಾನದಲ್ಲಿ ಬೆಕ್ಕೊಂದು ಪ್ರದಕ್ಷಿಣೆ ಹಾಕಿದ ವಿಡಿಯೋ (Video) ವೈರಲ್ ಆದ ಬೆನ್ನಲ್ಲೇ, ಈಗ ಬಿಜನೌರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ನಡೆಸುತ್ತಿರುವ ಭಕ್ತಿ ಪರವಶತೆ ಭಕ್ತರನ್ನು ದಂಗಾಗಿಸಿದೆ.

Video : ಸೋಮವಾರದಿಂದ ಶುರುವಾದ ಅಚ್ಚರಿ!
ಬಿಜನೌರ್ ಜಿಲ್ಲೆಯ ನಗೀನಾ ತೆಹಸಿಲ್ ವ್ಯಾಪ್ತಿಯ ನಂದಪುರ ಗ್ರಾಮದ ಪುರಾತನ ಹನುಮಾನ್ ದೇವಸ್ಥಾನದಲ್ಲಿ ಈ ಪವಾಡ ಸದೃಶ ದೃಶ್ಯ ಕಂಡುಬಂದಿದೆ. ಸೋಮವಾರ ಬೆಳಗಿನ ಜಾವ 4 ಗಂಟೆಗೆ ದೇವಸ್ಥಾನದ ಆವರಣ ಪ್ರವೇಶಿಸಿದ ಶ್ವಾನವೊಂದು, ಅಂದಿನಿಂದ ಇಂದಿನವರೆಗೆ ಸತತ 48 ಗಂಟೆಗಳ ಕಾಲ ದಣಿವರಿಯಿಲ್ಲದೆ ಪ್ರದಕ್ಷಿಣೆ ಹಾಕುತ್ತಿದೆ.
ಅಚ್ಚರಿಯ ವಿಷಯವೆಂದರೆ, ಈ ಶ್ವಾನವು ಆಹಾರ ಅಥವಾ ವಿಶ್ರಾಂತಿಗಾಗಿ ಎಲ್ಲಿಯೂ ನಿಲ್ಲುತ್ತಿಲ್ಲ. ಅತ್ಯಂತ ಶಾಂತವಾಗಿ, ಅಲ್ಲಿಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ನೀಡದೆ ತನ್ನ ಪಾಡಿಗೆ ತಾನು ಹನುಮಂತನ ವಿಗ್ರಹಕ್ಕೆ (Video) ಸುತ್ತು ಬರುತ್ತಿದೆ.
‘ಕಾಲಭೈರವನೇ ಬಂದಿದ್ದಾನೆ’ ಎನ್ನುತ್ತಿದ್ದಾರೆ ಭಕ್ತರು
ಹಿಂದೂ ಧರ್ಮದ ನಂಬಿಕೆಯಂತೆ ನಾಯಿಯನ್ನು ಕಾಲಭೈರವನ ವಾಹನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಹನುಮಂತನ ಸನ್ನಿಧಿಯಲ್ಲಿ ಈ ಶ್ವಾನದ ವಿಚಿತ್ರ ವರ್ತನೆಯನ್ನು ಕಂಡ ಗ್ರಾಮಸ್ಥರು, ಇದು ಸಾಕ್ಷಾತ್ ಭೈರವನಾಥನೇ ಹನುಮಂತನ ದರ್ಶನಕ್ಕೆ ಬಂದಿದ್ದಾನೆ ಎಂದು ಭಾವಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, (Video) ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಈ ‘ಪವಾಡ’ವನ್ನು ಕಣ್ಣಾರೆ ಕಾಣಲು ಆಗಮಿಸುತ್ತಿದ್ದಾರೆ. Read this also : ದಾನದ ವಿಚಾರದಲ್ಲಿ ಸೋನುಗೆ ಸಾಟಿಯೇ ಇಲ್ಲ; 22 ಲಕ್ಷ ನೀಡಿ ಗೋಮಾತೆಯ ಸೇವೆಗೆ ಸೈ ಎಂದ ನಟ..!
ಚಳಿಯಿಂದ ರಕ್ಷಿಸಲು ಗ್ರಾಮಸ್ಥರ ಸಾಹಸ
ಪ್ರಸ್ತುತ ಉತ್ತರ ಭಾರತದಲ್ಲಿ ಮೈ ನಡುಗಿಸುವ ಚಳಿ ಇರುವುದರಿಂದ, ಗ್ರಾಮಸ್ಥರು ಈ ಶ್ವಾನದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ದೇವಸ್ಥಾನ ಸಮಿತಿಯವರು ಶ್ವಾನಕ್ಕೆ ಚಳಿ ತಗುಲದಂತೆ ಆವರಣದ ಸುತ್ತಲೂ ಪಾಲಿಥಿನ್ ಹಾಳೆಗಳನ್ನು ಅಳವಡಿಸಿದ್ದಾರೆ. “ಇದು ಶುದ್ಧ ನಂಬಿಕೆಯ ವಿಷಯ. ಹಿರಿಯರ ಪ್ರಕಾರ ಈ ಪುರಾತನ ದೇವಸ್ಥಾನದಲ್ಲಿ ಇಂತಹ ಘಟನೆ ಹಿಂದೆಂದೂ ನಡೆದಿಲ್ಲ,” ಎಂದು ಸ್ಥಳೀಯ ಮುಖಂಡರಾದ ಅನೂಪ್ ಬಾಲ್ಮೀಕಿ ಅವರು ತಿಳಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!
ಈ ಶ್ವಾನದ ಭಕ್ತಿಯ ವಿಡಿಯೋ (Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು, “ಮನುಷ್ಯರಿಗಿಂತ ಮೂಕ ಪ್ರಾಣಿಗಳೇ ಶ್ರೇಷ್ಠ, ಅವುಗಳ ಭಕ್ತಿ ನಿಸ್ವಾರ್ಥವಾದುದು” ಎಂದು ಕಮೆಂಟ್ ಮಾಡುತ್ತಿದ್ದಾರೆ. ವಿಜ್ಞಾನ ಏನೇ ಹೇಳಿದರೂ, ಭಕ್ತರ ಪಾಲಿಗೆ ಮಾತ್ರ ಇದು ದೈವಿಕ ಶಕ್ತಿಯ ಸಂಕೇತವಾಗಿ ಕಂಡುಬರುತ್ತಿದೆ.
