ಭಾರತ ದೇಶ ಸಾವಿರಾರು ವರ್ಷಗಳ ಹಿಂದೆ ಸಂಪತ್ತಭರಿತವಾದ ದೇಶವಾಗಿತ್ತು. ರಸ್ತೆಯಲ್ಲಿಯೇ ಬಂಗಾರ, ವಜ್ರ, ವೈಡೂರ್ಯಗಳನ್ನು ಮಾರಾಟ ಮಾಡಿದಂತಹ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಹ ನಾವು ಕೇಳಿದ್ದೇವೆ. ಇದೀಗ ರಾಯಲಸೀಮೆ ಭಾಗದ ಕರ್ನೂಲು ಜಿಲ್ಲೆಯ ಭಾಗದಲ್ಲಿ ವಜ್ರ ಬೇಟೆ ಶುರುವಾಗಿದೆ. ಈ ಭಾಗದ ಜಮೀನಿನಲ್ಲಿ ವಜ್ರಗಳು ದೊರೆಯುತ್ತಿದ್ದು, ಸ್ಥಳೀಯರು ವಜ್ರ ಬೇಟೆಗೆ ಮುಗಿಬಿದಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ಮಳೆ ಬಂದರೇ ಸಾಕು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗುತ್ತಾರೆ. ಕರ್ನೂಲು ಜಿಲ್ಲೆಯ ಈ ಭಾಗದಲ್ಲಿ ಮಾತ್ರ ಮಳೆ ಬಿದ್ದ ಕೂಡಲೇ ವಜ್ರಬೇಟೆ ಶುರುವಾಗುತ್ತದೆ. ಜಿಲ್ಲೆಯ ಜೊನ್ನಗಿರಿ, ತುಗ್ಗಲಿ ಸೇರಿದಂತೆ ಹಲವು ಕಡೆ ಮಳೆಯಾದರೇ ಸಾಕು ಹೊಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರ ಬದಲಿಗೆ ಜಮೀನುಗಳಲ್ಲಿ ವಜ್ರಗಳ ಹುಡುಕಾಟ ಶುರು ಮಾಡುತ್ತಾರೆ. ಬೆಳಿಗಿನಿಂದ ಸಂಜೆಯವರೆಗೂ ಹೊಲಗಳಲ್ಲಿಯೇ ಇದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ವಜ್ರಗಳ ಹುಡುಕಾಟ ನಡೆಸುತ್ತಾರೆ. ಕರ್ನೂಲು ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಸುರಿದ್ದು, ನೂರಾರು ಮಂದಿ ವಜ್ರಗಳ ಹುಡುಕಾಟ ಶುರು ಮಾಡಿದ್ದಾರೆ. ಎರಡೂ ತೆಲುಗು ರಾಜ್ಯಗಳು ಹಾಗೂ ಕರ್ನಾಟಕ, ತಮಿಳುನಾಡಿನಿಂದಲೂ ಜನರು ಈ ಭಾಗಗಳಿಗೆ ಹೋಗಿ ವಜ್ರಗಳ ಹುಡುಕಾಟ ಶುರುಮಾಡುತ್ತಾರೆ. ಜೊತೆಗೆ ಈ ಆಸ್ತಿ ನಮ್ಮದು ಯಾರೂ ಅಕ್ರಮ ಪ್ರವೇಶ ಮಾಡಬಾರದು ಎಂದು ಬೋರ್ಡ್‌ಗಳನ್ನು ಸಹ ಹಾಕಿದ್ದಾರಂತೆ.
ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ರಾಜಮನೆತನಾದ ವಿಜಯನಗರ ಸಾಮ್ರಾಜ್ಯದಲ್ಲಿ ತರಕಾರಿಗಳಂತೆ ಬಂಗಾರ, ವಜ್ರ, ವೈಡೂರ್ಯಗಳನ್ನು ಮಾರುತ್ತಿದ್ದರು. ಈ ಸಾಮ್ರಾಜ್ಯದ ಸಂಪತ್ತು ಮುಳಗಡೆಯಾದಂತಹ ಕರ್ನೂಲ್, ಅನಂತಪುರ ಜಿಲ್ಲೆಗಳ ವ್ಯಾಪ್ತಿಯ ಕೆಲವು ಜಮೀನುಗಳಲ್ಲಿ ವಜ್ರದ ಹರಳುಗಳು ಸಿಗುತ್ತಿವೆ ಎಂದು ಹುಡಾಕಾಟ ನಡೆಸಲು ಜನರು ಮುಗಿಬಿದಿದ್ದಾರೆ. ಕರ್ನೂಲ್ ಹಾಗೂ ಅನಂತಪುರದ ವ್ಯಾಪ್ತಿಯ ಕೆಲವು ಕಡೆ ಬಂಗಾರ, ವಜ್ರ, ಮುತ್ತು, ರತ್ನಗಳ ಸಂಪತ್ತು ಮುಳುಗಿತ್ತಂತೆ. ಪ್ರತಿ ವರ್ಷ ಮಳೆಗಾಲದಲ್ಲಿ ವಜ್ರದ ಹರಳುಗಳು ಪತ್ತೆಯಾಗುತ್ತಿದ್ದ, ಅವುಗಳನ್ನೂ ಆರಿಸಿಕೊಳ್ಳು ಸ್ಥಳೀಯ ಜನರು ಹೊಲದಲ್ಲಿಯೇ ಮಕ್ಕಾಂ ಹೂಡಿದ್ದಾರೆ. ಇನ್ನೂ ಈ ಹುಡುಕಾಟದಲ್ಲಿ ಅನೇಕರಿಗೆ ವಜ್ರಗಳ ಹರಳುಗಳು ಸಿಕ್ಕಿದ್ದು, ಅವುಗಳನ್ನು ಮಾರಿ ಶ್ರೀಮಂತರು ಸಹ ಆಗಿದ್ದಾರೆ ಎಂದು ಹೇಳಲಾಗಿದೆ.