ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಧುರಂಧರ್ 2’ (Dhurandhar 2) ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ ಈಗಾಗಲೇ 750 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿರುವ ಈ ಸಿನಿಮಾ, ಈಗ ವಿದೇಶದಲ್ಲಿ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದೆ. ಯುನೈಟೆಡ್ ಕಿಂಗ್‌ಡಮ್‌ನ ಚಿತ್ರಮಂದಿರವೊಂದರಿಂದ ಹೊರಬಂದ ಪಾಕಿಸ್ತಾನಿ ಮೂಲದ ಕುಟುಂಬವೊಂದು ಚಿತ್ರದ ವಿರುದ್ಧ ಕಿಡಿಕಾರಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ಹರಡುತ್ತಿದೆ.

Dhurandhar 2 – ಚಿತ್ರಮಂದಿರದ ಹೊರಗೆ ಪಾಕ್ ಕುಟುಂಬದ ಆಕ್ರೋಶ
ವೈರಲ್ ಆಗಿರುವ ವಿಡಿಯೋದಲ್ಲಿ ಸಿನಿಮಾ ನೋಡಿ ಹೊರಬರುತ್ತಿರುವ ಪಾಕಿಸ್ತಾನಿ ವ್ಯಕ್ತಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಕಳಪೆ ಮತ್ತು ಥರ್ಡ್ ಕ್ಲಾಸ್ ಸಿನಿಮಾ ಎಂದು ಅವರು ಗುಡುಗಿದ್ದಾರೆ. ಅವರ ಜೊತೆಗಿದ್ದ ಮಹಿಳೆಯೊಬ್ಬರು ಇಡೀ ಚಿತ್ರವನ್ನು ಅಸಂಬದ್ಧ ಎಂದು ಕರೆದಿದ್ದು, ಕಳಪೆ ಎಂಬ ಪದಕ್ಕಿಂತಲೂ ಕೆಟ್ಟ ಪದವಿದ್ದರೆ ಅದು ಈ ಸಿನಿಮಾಗೆ ಒಪ್ಪುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೇವಲ ವಿಮರ್ಶೆಗೆ ಸೀಮಿತವಾಗದ ಈ ಗುಂಪು, ಥಿಯೇಟರ್ ಆವರಣದಲ್ಲೇ ‘ಮೇಜರ್ ಇಕ್ಬಾಲ್ ಜಿಂ***ಬಾದ್’ ಮತ್ತು ‘ಪಾಕಿಸ್ತಾನ್ ಜಿಂದ***ಬಾದ್’ ಎಂದು ಘೋಷಣೆಗಳನ್ನು ಕೂಗಿರುವುದು ವಿಡಿಯೋದಲ್ಲಿದೆ. Read this also : Operation Sindoor: ದೇವರೇ ನಮ್ಮನ್ನು ಕಾಪಾಡು: ಸಂಸತ್ತಿನಲ್ಲಿ ಕಣ್ಣೀರಿಟ್ಟ ಪಾಕ್ ಸಂಸದ – ಭಾರತದ ಕಾರ್ಯಾಚರಣೆಯಿಂದ ತತ್ತರಿಸಿದ ಪಾಕಿಸ್ತಾನ….!
ಸತ್ಯ ಬಯಲಾದಾಗ ಆಕ್ರೋಶ ಸಹಜ ಎಂದ ಭಾರತೀಯ ನೆಟ್ಟಿಗರು
ಈ ವಿಡಿಯೋ (Video Here) ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಂತೆ ಭಾರತೀಯ ನೆಟ್ಟಿಗರು ಪಾಕ್ ಕುಟುಂಬವನ್ನು ಲೇವಡಿ ಮಾಡುತ್ತಿದ್ದಾರೆ. ಪಾಕಿಸ್ತಾನಿಗಳಿಗೆ ಈ ಸಿನಿಮಾ ಇಷ್ಟವಾಗಿಲ್ಲ ಎಂದರೆ ನಿರ್ದೇಶಕ (Dhurandhar 2) ಆದಿತ್ಯ ಧರ್ ಅವರು ಸರಿಯಾದ ಹಾದಿಯಲ್ಲಿದ್ದಾರೆ ಮತ್ತು ಭಯೋತ್ಪಾದನೆಯ ಕರಾಳ ಮುಖವನ್ನು ಸರಿಯಾಗಿಯೇ ಬಯಲಿಗೆಳೆದಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ, ಅದಕ್ಕೇ ಅವರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಐಎಸ್ಐ ಕುತಂತ್ರದ ಅನಾವರಣಕ್ಕೆ ನಡುಗಿದ ಪಾಕಿಸ್ತಾನಿಗಳು
ಸಿನಿಮಾದಲ್ಲಿ (Dhurandhar 2) ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ಐಎಸ್ಐ ಮಾಡುತ್ತಿರುವ ತಪ್ಪುಗಳನ್ನು ಎಳೆಎಳೆಯಾಗಿ ತೋರಿಸಲಾಗಿದೆ. ಇದನ್ನು ಕಂಡು ಹತಾಶರಾಗಿರುವ ಅಲ್ಲಿನ ಜನರಿಗೆ ಈ ಸಿನಿಮಾ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿರುವ ಹೊತ್ತಲ್ಲೇ ಈ ರೀತಿಯ ವಿರೋಧಗಳು ವ್ಯಕ್ತವಾಗುತ್ತಿರುವುದು ಚಿತ್ರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
