Friday, January 23, 2026
HomeStateಧಾರವಾಡ : ಮದುವೆಯಾಗಬೇಕಿದ್ದವನೇ ಪ್ರೇಯಸಿಯ ಹಂತಕ! ಝಕಿಯಾ ಮುಲ್ಲಾ (Zakia Mulla) ಕೊ*ಲೆ ಕೇಸ್‌ಗೆ ಬಿಗ್...

ಧಾರವಾಡ : ಮದುವೆಯಾಗಬೇಕಿದ್ದವನೇ ಪ್ರೇಯಸಿಯ ಹಂತಕ! ಝಕಿಯಾ ಮುಲ್ಲಾ (Zakia Mulla) ಕೊ*ಲೆ ಕೇಸ್‌ಗೆ ಬಿಗ್ ಟ್ವಿಸ್ಟ್..!

ಧಾರವಾಡ ನಗರದ ಹೊರವಲಯದಲ್ಲಿ ನಡೆದ 19 ವರ್ಷದ ಯುವತಿ ಝಕಿಯಾ ಮುಲ್ಲಾ (Zakia Mulla) ಹತ್ಯೆ ಪ್ರಕರಣ ಈಗ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಕೆಲಸ ಹುಡುಕಲು ಹೋದ ಯುವತಿ ಶವವಾಗಿ ಪತ್ತೆಯಾದ ಬೆನ್ನಲ್ಲೇ, ಈ ಕೊಲೆಯ ಹಿಂದೆ ಪ್ರೀತಿ ಮತ್ತು ನಂಬಿಕೆಯ ದ್ರೋಹದ ಕರಾಳ ಕಥೆ ಬಯಲಾಗಿದೆ. ಮದುವೆಯಾಗಿ ನೂರಾರು ಕನಸು ಕಾಣಬೇಕಿದ್ದ ಜೋಡಿಗಳ ನಡುವೆ ನಡೆದ ಆ ಒಂದು ಕ್ಷಣದ ಆಕ್ರೋಶ ಇಂದು ಒಂದು ಜೀವವನ್ನು ಬಲಿಪಡೆದಿದೆ.

19-year-old Zakia Mulla murder case investigation by Dharwad Rural Police

Zakia Mulla – ಪ್ರೀತಿಯೇ ಮುಳುವಾಯಿತೇ?

ಝಕಿಯಾ ಮತ್ತು ಸಾಬೀರ್ ಮುಲ್ಲಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲದೆ ಇವರು ಸಂಬಂಧಿಕರೂ ಆಗಿದ್ದರು. ಇವರ ಪ್ರೀತಿಗೆ ಮನೆಯವರ ಒಪ್ಪಿಗೆಯೂ ಸಿಕ್ಕಿತ್ತು. ಮುಂದಿನ ತಿಂಗಳೇ ಇವರಿಬ್ಬರ ನಿಶ್ಚಿತಾರ್ಥ ನಡೆಯಬೇಕಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮದುವೆಯಾಗಿ ಹೊಸ ಜೀವನ ಆರಂಭಿಸಬೇಕಿದ್ದ ಪ್ರಿಯಕರನೇ ಇಂದು ಕೊಲೆಗಡುಕನಾಗಿ ಕಟಕಟೆಯಲ್ಲಿ ನಿಂತಿದ್ದಾನೆ.

ಅಂದು ಸಂಜೆ ನಡೆದಿದ್ದೇನು?

ಜನವರಿ 20ರ ಸಂಜೆ ಝಕಿಯಾ ಮತ್ತು ಸಾಬೀರ್ ಇಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದರು. ಮನಸೂರು ರಸ್ತೆಯ ಡೈರಿ ಬಳಿ ಹೋಗಿದ್ದಾಗ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಸಣ್ಣದಾಗಿ ಶುರುವಾದ ಜಗಳ ವಿಕೋಪಕ್ಕೆ ಹೋಗಿದೆ. ಸಿಟ್ಟಿನ ಭರದಲ್ಲಿ ಸಾಬೀರ್, ಝಕಿಯಾ ಧರಿಸಿದ್ದ ವೇಲ್‌ನಿಂದಲೇ ಆಕೆಯ (Zakia Mulla) ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾನೆ.

ಪೊಲೀಸರನ್ನೇ ಹಾದಿ ತಪ್ಪಿಸಲು ಯತ್ನಿಸಿದ ಹಂತಕ!

ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ ಸಾಬೀರ್‌ನ ನಟನೆ. ಕೊಲೆ ಮಾಡಿದ ನಂತರ ಆತ ಗಾಬರಿಯಾಗುವ ಬದಲು, ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದ. ಪೊಲೀಸರು ಸ್ಥಳಕ್ಕೆ ಬಂದಾಗಲೂ ಏನೂ ತಿಳಿಯದವನಂತೆ ನಾಟಕವಾಡಿದ್ದಾನೆ. ಆದರೆ ಆತನ ವಿಚಿತ್ರ ನಡವಳಿಕೆ ಪೊಲೀಸರಿಗೆ ಅನುಮಾನ ಮೂಡಿಸಿತ್ತು.

19-year-old Zakia Mulla murder case investigation by Dharwad Rural Police

ಪೊಲೀಸ್ ಕಾರ್ಯಾಚರಣೆ: ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸಾಬೀರ್‌ನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ (Zakia Mulla) ವಿಚಾರಣೆ ನಡೆಸಿದಾಗ, ಅಸಲಿ ಸತ್ಯವನ್ನು ಆತ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. Read this also : ಧಾರವಾಡದಲ್ಲಿ ಬೆಚ್ಚಿಬೀಳಿಸುವ ಘಟನೆ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ (Paramedical Student Zakia Mulla) ನಿಗೂಢ ಕೊಲೆ, ವಿನಯ್ ಡೈರಿ ಬಳಿ ಪತ್ತೆಯಾದ ಶವ!

ಮರಣೋತ್ತರ ಪರೀಕ್ಷೆ ಅಂತ್ಯ

ಮೃತ ಝಕಿಯಾಳ (Zakia Mulla) ದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರ ಸಮ್ಮುಖದಲ್ಲಿ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಒಂದು ಸಣ್ಣ ಜಗಳ ಮತ್ತು ಆ ಕ್ಷಣದ ಸಿಟ್ಟು ಹೇಗೆ ಎರಡು ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular