ಶಾಂತಿ ಮತ್ತು ವಿದ್ಯಾಕಾಶಿಗೆ ಹೆಸರಾದ ಧಾರವಾಡದಲ್ಲಿ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯೋಗದ ಕನಸು ಹೊತ್ತು ಮನೆಯಿಂದ ಹೊರಟಿದ್ದ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು (Paramedical Student Zakia Mulla) ಹೆಣವಾಗಿ ಪತ್ತೆಯಾಗಿದ್ದು, ಇಡೀ ಜಿಲ್ಲೆಯನ್ನೇ ಈ ಘಟನೆ ನಡುಗುವಂತೆ ಮಾಡಿದೆ. ಸದಾ ಗಿಜಿಗುಡುವ ನಗರದ ಹೊರವಲಯದಲ್ಲಿ ನಡೆದ ಈ ನಿಗೂಢ ಹತ್ಯೆ ಈಗ ಹತ್ತಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Paramedical Student Zakia Mulla – ನಡೆದಿದ್ದೇನು?
ಧಾರವಾಡದ ಗಾಂಧಿ ಚೌಕ್ ನಿವಾಸಿಯಾಗಿದ್ದ ಝಕಿಯಾ ಮುಲ್ಲಾ (19) ಕೊಲೆಯಾದ ದುರ್ದೈವಿ. ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದ ಝಕಿಯಾ, ಮಂಗಳವಾರ ಸಂಜೆ ಮನೆಯಿಂದ ಹೊರಟಿದ್ದಳು. “ಲ್ಯಾಬ್‌ಗೆ ಹೋಗಿ ಬರುತ್ತೇನೆ” ಎಂದು ಪೋಷಕರಿಗೆ ಹೇಳಿ ಹೋದ ಮಗಳು ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರಲ್ಲಿ ಆತಂಕ ಶುರುವಾಗಿತ್ತು. ಆದರೆ ಬುಧವಾರ ಮುಂಜಾನೆ ಮಗಳು ಹೆಣವಾಗಿ ಪತ್ತೆಯಾಗುತ್ತಾಳೆ ಎಂಬ ಕಲ್ಪನೆ ಅವರಿಗಿರಲಿಲ್ಲ. Read this also : ಬೆಂಗಳೂರಿನಲ್ಲಿ ಮಹಿಳೆಗೆ (Bengaluru Woman) ಕಹಿ ಅನುಭವ: 10-12 ವರ್ಷದ ಮಕ್ಕಳಿಂದ ಅಸಭ್ಯ ವರ್ತನೆ, ‘ಇದು ಸರಿಯಲ್ಲ’ ಎಂದು ವಿಡಿಯೋ ಹಂಚಿಕೊಂಡ ಯುವತಿ!
ಶಾಸಕರ ಡೈರಿ ಸಮೀಪವೇ ಶವ ಪತ್ತೆ!
ನಗರದ ಹೊರವಲಯದ ಮನಸೂರು ರಸ್ತೆಯಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ‘ವಿನಯ್ ಡೈರಿ’ ಸಮೀಪ ಇಂದು ಮುಂಜಾನೆ ಯುವತಿಯ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಪೂರ್ವಯೋಜಿತ ಕೊಲೆ ಎಂಬಂತೆ ಕಾಣುತ್ತಿದೆ. ಬೇರೆಲ್ಲೂ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಲ್ಲಿಗೆ ತಂದು (Paramedical Student Zakia Mulla)ಶವವನ್ನು ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ
ತಮ್ಮ ಮಗಳು ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೋಷಕರ ಗೋಳು ನೋಡುಗರ ಕಣ್ಣಲ್ಲಿ ನೀರು ತರಿಸುವಂತಿತ್ತು. “ಓದಿಸಿ ದೊಡ್ಡವಳನ್ನಾಗಿ ಮಾಡಿದ್ದೆವು, ಕೆಲಸ ಹುಡುಕುತ್ತಿದ್ದ ಮಗಳಿಗೆ ಇಂತಹ ಸ್ಥಿತಿ ಬರಬಾರದಿತ್ತು” (Paramedical Student Zakia Mulla) ಎಂದು ಅವರು ಕಣ್ಣೀರಿಟ್ಟಿದ್ದಾರೆ. ಹಂತಕರನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ತನಿಖೆ ಚುರುಕುಗೊಳಿಸಿದ ಪೊಲೀಸರು
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. (Paramedical Student Zakia Mulla) ಹತ್ಯೆಗೆ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದೆ. ಝಕಿಯಾ ಕೊನೆಯದಾಗಿ ಯಾರೊಂದಿಗೆ ಮಾತನಾಡಿದ್ದಳು? ಅವಳ ಮೊಬೈಲ್ ಲೊಕೇಶನ್ ಎಲ್ಲಿದೆ ಎಂಬ ಬಗ್ಗೆ ತಾಂತ್ರಿಕ ತಂಡ ಮಾಹಿತಿ ಕಲೆಹಾಕುತ್ತಿದೆ. ಇದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಕೊಲೆಯೇ ಅಥವಾ ಬೇರೆನಾದರೂ ಹಳೆಯ ದ್ವೇಷವಿದೆಯೇ ಎಂಬ ಆಯಾಮದಲ್ಲಿಯೂ ತನಿಖೆ ಸಾಗುತ್ತಿದೆ.
