ವಿದ್ಯಾನಗರಿ ಧಾರವಾಡದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲೆಂದು ಬಂದಿದ್ದ ಬಳ್ಳಾರಿ ಮೂಲದ ಯುವತಿಯೊಬ್ಬರು ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟಿದ್ದಾರೆ. ಆದರೆ, ಸಾವಿಗೂ ಮುನ್ನ ಯುವತಿ ಬರೆದಿಟ್ಟಿರುವ ಎರಡು ಪ್ರತ್ಯೇಕ ಡೆತ್ನೋಟ್ಗಳು (Death Notes) ಈಗ ಕಣ್ಣೀರು ತರಿಸುವಂತಿವೆ. ಧಾರವಾಡದ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ (Crime) ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಬಳ್ಳಾರಿ ಮೂಲದ ಪಲ್ಲವಿ (24) ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

Crime – ಎರಡೆರಡು ಡೆತ್ ನೋಟ್ ಪತ್ತೆ!
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ, ಪಲ್ಲವಿಯ ಪ್ಯಾಂಟ್ ಜೇಬಿನಲ್ಲಿ ಒಂದು ಡೆತ್‌ನೋಟ್ ಪತ್ತೆಯಾಗಿದೆ. ಮತ್ತೊಂದು ಪತ್ರ ಆಕೆ ಉಳಿದುಕೊಂಡಿದ್ದ ಕೋಣೆಯಲ್ಲಿ ಸಿಕ್ಕಿದೆ. ಈ ಎರಡೂ ಪತ್ರಗಳಲ್ಲಿನ ಒಕ್ಹೋರ ಆಕೆಯ ನೋವಿನ ಕಥೆಯನ್ನು ಹೇಳುವಂತಿದೆ. ತನ್ನ ಸಾವಿಗೆ ಪೋಷಕರೇ ಕಾರಣ ಎಂಬರ್ಥದಲ್ಲಿ ಪಲ್ಲವಿ ನೋವು ತೋಡಿಕೊಂಡಿದ್ದಾಳೆ. ಪ್ಯಾಂಟ್ ಕಿಸೆಯಲ್ಲಿ ಸಿಕ್ಕ ಪತ್ರದಲ್ಲಿ, “ನನಗೆ ನೀವು ಯಾವತ್ತೂ ಪ್ರೀತಿ ನೀಡಿಲ್ಲ. ನನ್ನನ್ನು ಹಾಸ್ಟೆಲ್ನಲ್ಲೇ ಬೆಳೆಸಿದ್ದೀರಿ. ನನ್ನ ಇಷ್ಟ-ಕಷ್ಟಗಳನ್ನು, ಬೇಕು-ಬೇಡಗಳನ್ನು ನೀವು ಕೇಳಲಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದೆ” ಎಂದು ಪೋಷಕರ ವಿರುದ್ಧ (Crime) ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
Crime – ಪ್ರಿಯಕರನಿಗೆ ಕ್ಷಮೆ ಯಾಚಿಸಿದ ಪಲ್ಲವಿ
ಇನ್ನು ಕೋಣೆಯಲ್ಲಿ ಸಿಕ್ಕ ಪತ್ರದಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗನ ಬಳಿ ಪಲ್ಲವಿ ಕ್ಷಮೆ ಕೇಳಿದ್ದಾಳೆ. “ನಮ್ಮ ಮನೆಯವರು ನಿನ್ನೊಡನೆ ಬದುಕಲು ನನಗೆ ಅವಕಾಶ ಕೊಡಲಿಲ್ಲ. ಇದು ನನ್ನ ಮನಸ್ಸಿಗೆ ತುಂಬಾ ಆಘಾತ ತಂದಿದೆ. ನನ್ನನ್ನು ಕ್ಷಮಿಸು, ಈ ನನ್ನ ಸಾವಿಗೆ ನಾನೇ ಕಾರಣ” ಎಂದು ಬರೆದಿಟ್ಟು ಇಹಲೋಕ (Crime) ತ್ಯಜಿಸಿದ್ದಾಳೆ. Read this also : ಕಾಲು ಮಸಾಜ್ ಮಾಡ್ತೀನಿ ಅಂತ ಪತ್ನಿಯನ್ನ ಮಲಗಿಸಿ ಹಾವಿನಿಂದ ಕಚ್ಚಿಸಿದ್ರು! 3 ವರ್ಷಗಳ ಬಳಿಕ ಹೊರಬಿತ್ತು ಕಾಂಗ್ರೆಸ್ ನಾಯಕಿಯ ಮರ್ಡರ್ ರಹಸ್ಯ..!
ಅಸಲಿ ಕಾರಣವೇನು?
ಪಲ್ಲವಿ ಹಾಗೂ ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್ಲು ಗ್ರಾಮದ ಯುವಕನೊಬ್ಬ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯವನ್ನು ಪಲ್ಲವಿ ಧೈರ್ಯವಾಗಿ ಮನೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ, ಕುಟುಂಬಸ್ಥರು ಈ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ತಾಯಿಯ ಸಂಬಂಧಿಕರೊಬ್ಬರ ಜೊತೆ ಪಲ್ಲವಿಯ ಮದುವೆ ನಿಶ್ಚಯ ಕೂಡ ಮಾಡಲಾಗಿತ್ತು. ಪ್ರೀತಿ ಕೈತಪ್ಪಿದ ನೋವು ಮತ್ತು ಇಷ್ಟವಿಲ್ಲದ ಮದುವೆಯ ಒತ್ತಡದಿಂದ ನೊಂದ ಆಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು (Crime) ತನಿಖೆ ವೇಳೆ ತಿಳಿದುಬಂದಿದೆ.

ಪೊಲೀಸ್ ಆಯುಕ್ತರ ಸ್ಪಷ್ಟನೆ
ಇನ್ನು ಈ ಘಟನೆಯ ಬಗ್ಗೆ ಕೆಲವರು ತಪ್ಪು ಮಾಹಿತಿ ಹಬ್ಬಿಸುತ್ತಿರುವುದಕ್ಕೆ ಹುಬ್ಬಳ್ಳಿಯ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. “ಯುವತಿ ನೇಮಕಾತಿ (Recruitment) ಪ್ರಕ್ರಿಯೆ ನಡೆಯದ ಕಾರಣ ಅಥವಾ ಉದ್ಯೋಗ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಪಲ್ಲವಿ ಸಾವಿಗೂ, ಉದ್ಯೋಗದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಯಾವುದೇ ಕಾರಣಕ್ಕೂ ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಬಾರದು ತಪ್ಪು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
