ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂತೆಬೀದಿಯ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ (Devotional Event) ಶ್ರಾವಣ ಮಾಸದ ನಾಲ್ಕನೇ ಶನಿವಾರ ಸಕಲ ಪೂಜಾ ಕೈಂಕರ್ಯಗಳೊಂದಿಗೆ ಅಪಾರ ಸಂಖ್ಯೆಯ ಭಕ್ತರ ಸಮೂಹದಲ್ಲಿ ನೆರವೇರಿತು. ರಥವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. (Devotional Event) ಈ ದೈವಿಕ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಭಕ್ತಾಧಿಗಳು ಈ ಸಮಯದಲ್ಲಿ ಭಾಗವಹಿಸಿದ್ದರು.
ಅದ್ದೂರಿಯಾಗಿ ಸಾಗಿದ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವ
ಮುಜರಾಯಿ ಇಲಾಖೆ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ (Devotional Event) ಅಭಿವೃದ್ದಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಾಲ್ಕನೇ ಶನಿವಾರ ಬ್ರಹ್ಮ ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಕೃಷ್ಣಗಂಧೋತ್ಸವ ಮತ್ತು ಬ್ರಹ್ಮ ರಥೋತ್ಸವಕ್ಕೆ (Devotional Event) ವಸಂತ ಸೇವೆ ನೆರವೇರಿದ ಬಳಿಕ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳಿರಿಸಿ ಹೋಮ,ಹವನ, ಪೂಜಾ ಕೈಕರ್ಯಗಳುನ್ನು ನೆರವೇರಿಸಲಾಯಿತು. (Devotional Event) ರಥವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.
ಮೊಳಗಿದ ಗೋವಿಂದ ಗೋವಿಂದ ನಾಮಸ್ಮರಣೆ:
ರಥೋತ್ಸವಕ್ಕೆ ಬಂದಿದ್ದ ನೂರಾರು ಭಕ್ತರು ಗೋವಿಂದ ಗೋವಿಂದ (Devotional Event) ಎಂಬ ನಾಮವನ್ನು ಜಪಿಸುತ್ತಾ ರಥವನ್ನು ಎಳೆದು, ದೇವರ ದರ್ಶನವನ್ನು ಪಡೆದರು. (Devotional Event) ಬ್ರಹ್ಮರಥವು ಪಟ್ಟಣದ ಮಾರುತಿ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀಲಕ್ಷ್ಮಿ ಆದಿನಾರಾಯಣಸ್ವಾಮಿ ದೇವಾಲಯವರೆಗೆ ಬಳಿಕ ಸಂಜೆ ಮಾರುತಿ ವೃತ್ತದ ವರೆಗೆ ಎಳೆದು ನಿಲ್ಲಿಸಲಾಯಿತು. (Devotional Event) ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ರಥದ ಮೇಲೆ ಬಾಳೆಹಣ್ಣು, ಹೂವು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. (Devotional Event) ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಟಿಸಲಾಗಿತ್ತು.
ಈ ಸಂದರ್ಭದಲ್ಲಿ (Devotional Event) ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ತಹಶೀಲ್ದಾರ್ ಸಿಗ್ಬತುಲ್ಲ, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಬೇಗ್, ಸಬ್ ಇನ್ಸ್ ಪೆಕ್ಟರ್ ಗಣೇಶ್, ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷರು, ಕಾರ್ಯದರ್ಶಿ ಗಳು, ನಿರ್ದೇಶಕರು, ಸದಸ್ಯರು, ಕಂದಾಯ ಇಲಾಖಾಧಿಕಾರಿಗಳು, (Devotional Event) ಪೊಲೀಸ್ ಸಿಬ್ಬಂದಿ ವಿವಿಧ ಇಲಾಖಾ ಅಧಿಕಾರಿಗಳು, ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.