Devaraj Arasu Jayanti – ಹಿಂದುಳಿದ ವರ್ಗದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಗಾಗಿ ಶ್ರಮಿಸಿದ ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ದಿ ಡಿ.ದೇವರಾಜು (Devaraj Arasu Jayanti) ಅರಸು ರಂತಹ ಮಹಾನ್ ವ್ಯಕ್ತಿಯನ್ನು ಸದಾ ಸ್ಮರಿಸುವುದಲ್ಲದೆ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ತಿಳಿಸಿದರು.
ಮಾಜಿ ಮುಖ್ಯಮಂತ್ರಿ (Devaraj Arasu Jayanti) ದಿ ಡಿ.ದೇವರಾಜು ಅರಸು ರವರ 109ನೇ ಜನ್ಮದಿನಾಚರಣೆ ಮತ್ತು ಶ್ರೀ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅಂಗವಾಗಿ ಪಟ್ಟಣದ ದೇವರಾಜು ಅರಸು ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು (Devaraj Arasu Jayanti) ಉದ್ಘಾಟಿಸಿ ಮಾತನಾಡಿದ ಅವರು ಅರಸು ರವರು ತಮ್ಮ ದೂರದೃಷ್ಠಿಯಿಂದ ರೂಪಿಸಿದ ಕಾಯ್ದೆಗಳನ್ನು ಜಾರಿಗೆ ತಂದ ಪರಿಣಾಮ ಇಂದು ಹಿಂದುಳಿದ ಹಾಗೂ ದಲಿತರರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದರು.
ಹಿಂದುಳಿದ (Devaraj Arasu Jayanti) ಹಾಗೂ ದಲಿತ ಸಮಾಜದಲ್ಲಿನ ಬಡವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ದಿಪಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖಪಾತ್ರವನ್ನು ವಹಿಸಿದಲ್ಲದೆ ದೇಶದ ಶೋಷಿತರ, ಸಮಾನತೆಗಾಗಿ ಶ್ರಮಿಸುವ ಮೂಲಕ ಅಂಬೇಡ್ಕರ್ ರವರು ವಿಶ್ವಕ್ಕೆ (Devaraj Arasu Jayanti) ಮಾದರಿಯಾದರು. ಅದೇ ರೀತಿಯಲ್ಲಿ ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಸಮಾನತೆಗಾಗಿ ಶ್ರಮಿಸಿ ಕರ್ನಾಟಕ ರಾಜ್ಯಕ್ಕೆ ಅರಸು ರವರು ಮಾಧರಿಯಾಗಿದ್ದಾರೆ ಎಂದರು.
ಬ್ರಹ್ಮಶ್ರೀ ನಾರಾಯಣಗುರು ರವರು ಅನಿಷ್ಠ ಪದ್ದತಿಗಳಲ್ಲಿ ಒಂದಾಗಿರುವ ಜಾತಿ ಪದ್ದತಿ ಸಮಾಜದಿಂದ ತೊಲಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಹಾಗೂ ಶೋಷಿತ ಸಮುದಾಯಗಳನ್ನ ಎಚ್ಚತ್ತುಕೊಳ್ಳುವಂತೆ ಮಾಡುವಲ್ಲಿ ಪ್ರಮುಖಪಾತ್ರವಹಿಸಿದ್ದಾರೆ, ಸಮಾಜದ ಏಳಿಗೆಗೆಗಾಗಿ ಶ್ರಮಿಸಿದ ಇಂತಹ ಮಹನೀಯರ ಆದರ್ಶಗಳನ್ನ ಹಾಗೂ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಇದೇ ವೇಳೆ ಮುಖ್ಯಭಾಷಣಕಾರರಾಗಿ ಡಾ.ನಯಾಜ್ ಅಹಮ್ಮದ್ ರವರು ಮಾಜಿ ಮುಖ್ಯಮಂತ್ರಿ ದಿವಂಗತ (Devaraj Arasu Jayanti) ದೇವರಾಜು ಅರಸು ಮತು ಬ್ರಹ್ಮಶ್ರೀ ನಾರಾಯಣಗುರು ರವರ ಸಮಾಜಮುಖಿ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಇದೇ ವೇಳೆ ಬಿಸಿಎಂ ಹಾಸ್ಟಲ್‍ನಲ್ಲಿ ವ್ಯಾಸಂಗ ಮಾಡಿ ಹೆಚ್ಚು (Devaraj Arasu Jayanti) ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಗೌರವಿಸಲಾಯಿತು ಹಾಗೂ ಬಿಸಿಎಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ (Devaraj Arasu Jayanti) ಪುರಸಭೆ ಮುಖ್ಯಾಧಿಕಾರಿ ಎ.ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣಾದಿಕಾರಿ ಶಿವಪ್ಪ, ಸಿಡಿಪಿಒ ರಾಮಚಂದ್ರಪ್ಪ, ಪುರಸಭೆ ಸದಸ್ಯ ಗಡ್ಡಂ ರಮೇಶ್, ಈಡಿಗ ಸಮುದಾಯದ ಮುಖಂಡರಾದ ಜಯಪ್ರಕಾಶ್ ನಾರಾಯಣ್, ಯಲ್ಲಂಪಲ್ಲಿ ವೆಂಕಟೇಶ್, ಆನಂದ್, ಪುರಸಭೆ ಉಪಾಧ್ಯಕ್ಷ ಎ.ಶ್ರೀನಿವಾಸ್ ಮತ್ತಿತರರು ಇದ್ದರು.