Dengue Fever – ಮಳೆಗಾಲದ ತಂಪಾದ ವಾತಾವರಣ ಮನಸ್ಸಿಗೆ ಹಿತವಾದ ಅನುಭವ ನೀಡುತ್ತದೆ. ಆದರೆ, ಮಳೆಯ ಜೊತೆಗೆ ಕೆಲವೊಂದು ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಅದರಲ್ಲೂ, ನಿಂತ ನೀರು ಇರುವ ಜಾಗಗಳಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುತ್ತವೆ. ಇತ್ತೀಚೆಗೆ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಈ ಲೇಖನದಲ್ಲಿ ಡೆಂಗ್ಯೂ ಲಕ್ಷಣಗಳು, ಅಪಾಯಗಳು ಮತ್ತು ಅದನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳೋಣ.
Dengue Fever ಎಂದರೇನು?
ಡೆಂಗ್ಯೂ ಒಂದು ವೈರಸ್ ಕಾಯಿಲೆಯಾಗಿದ್ದು, ‘ಏಡಿಸ್ ಈಜಿಪ್ಟಿ’ ಎಂಬ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ಈ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಕೇವಲ ಸೊಳ್ಳೆಯ ಕಡಿತದಿಂದ ಮಾತ್ರ ಇದು ಹರಡುತ್ತದೆ. ಮಳೆಗಾಲದಲ್ಲಿ ನಿಂತ ನೀರು ಇರುವ ಸ್ಥಳಗಳಲ್ಲಿ ಈ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಹಾಗಾಗಿ, ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚು.
Dengue Fever – ಪ್ರಮುಖ ಲಕ್ಷಣಗಳು
ಡೆಂಗ್ಯೂ ಜ್ವರದ ಲಕ್ಷಣಗಳು ಸಾಮಾನ್ಯ ಜ್ವರದಂತೆಯೇ ಇರುತ್ತವೆ, ಆದರೆ ಕೆಲವು ನಿರ್ದಿಷ್ಟ ಲಕ್ಷಣಗಳಿಂದ ಇದನ್ನು ಗುರುತಿಸಬಹುದು. ಅವುಗಳೆಂದರೆ:
- ಹೈ ಫೀವರ್ (ಅತಿಯಾದ ಜ್ವರ): ಇದ್ದಕ್ಕಿದ್ದಂತೆ ವಿಪರೀತ ಜ್ವರ ಬರುತ್ತದೆ. ಇದು 2 ರಿಂದ 7 ದಿನಗಳವರೆಗೆ ಇರುತ್ತದೆ.
- ತೀವ್ರ ತಲೆನೋವು: ಮುಖ್ಯವಾಗಿ ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.
- ಮೈಕೈ ನೋವು (Body Pains): ಕೀಲುಗಳು ಮತ್ತು ಸ್ನಾಯುಗಳಲ್ಲಿ ನೋವು ವಿಪರೀತವಾಗಿರುತ್ತದೆ. ಹಾಗಾಗಿ, ಡೆಂಗ್ಯೂಗೆ ‘ಮೂಳೆ ಮುರಿತದ ಜ್ವರ’ (Break Bone Fever) ಎಂದೂ ಕರೆಯಲಾಗುತ್ತದೆ.
- ವಾಂತಿ: ತಲೆ ಸುತ್ತುವುದು, ವಾಂತಿ ಆಗುವುದು ಮತ್ತು ಇದರಿಂದ ನಿರ್ಜಲೀಕರಣ (Dehydration) ಉಂಟಾಗಬಹುದು.
- ದೌರ್ಬಲ್ಯ: ದೇಹ ದುರ್ಬಲಗೊಳ್ಳುತ್ತದೆ, ಸುಸ್ತು ಮತ್ತು ಆಯಾಸ ಹೆಚ್ಚಾಗುತ್ತದೆ. ಕೆಲವು ಸಲ ಚರ್ಮದ ಮೇಲೆ ಕೆಂಪು ದದ್ದುಗಳು ಸಹ ಕಾಣಿಸಿಕೊಳ್ಳಬಹುದು.
Dengue Fever – ಡೆಂಗ್ಯೂ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು
- ತಪ್ಪು ಕಲ್ಪನೆ 1: ಡೆಂಗ್ಯೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
- ವಾಸ್ತವ: ಇದು ಕೇವಲ ಸೊಳ್ಳೆಯ ಕಡಿತದಿಂದ ಮಾತ್ರ ಹರಡುತ್ತದೆ.
- ತಪ್ಪು ಕಲ್ಪನೆ 2: ಆ್ಯಂಟಿಬಯೋಟಿಕ್ಸ್ನಿಂದ ಡೆಂಗ್ಯೂ ಗುಣಪಡಿಸಬಹುದು.
- ವಾಸ್ತವ: ಡೆಂಗ್ಯೂಗೆ ಯಾವುದೇ ವಿಶೇಷ ಆ್ಯಂಟಿಬಯೋಟಿಕ್ ಚಿಕಿತ್ಸೆ ಇಲ್ಲ. ವೈದ್ಯರ ಸಲಹೆಯಂತೆ ವಿಶ್ರಾಂತಿ ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಮುಖ್ಯ. Read this also : ಸಂಜೆ ಹೊತ್ತು ಮೊಸರು ತಿನ್ನುತ್ತಿದ್ದೀರಾ? ಹಾಗಾದ್ರೆ ಈ ವಿಷಯಗಳು ನಿಮಗೆ ತಿಳಿದಿರಲೇಬೇಕು…!
Dengue Fever – ಡೆಂಗ್ಯೂಗೆ ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು
ಡೆಂಗ್ಯೂ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ವೈದ್ಯರ ಸಲಹೆ ಪಡೆಯದೆ ಯಾವುದೇ ಔಷಧಿ ತೆಗೆದುಕೊಳ್ಳುವುದು ಅಪಾಯಕಾರಿ. ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದರಿಂದ ಡೆಂಗ್ಯೂ ಜ್ವರವನ್ನು ತಡೆಗಟ್ಟಬಹುದು:
- ನೀರು ನಿಲ್ಲದಂತೆ ನೋಡಿಕೊಳ್ಳಿ: ನಿಮ್ಮ ಮನೆಯ ಸುತ್ತಮುತ್ತ ಹಳೆಯ ಟೈರ್‌ಗಳು, ಮಡಿಕೆಗಳು, ಬಕೆಟ್‌ಗಳು, ಕೂಲರ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
- ಸೊಳ್ಳೆಗಳಿಂದ ರಕ್ಷಣೆ: ರಾತ್ರಿ ಮಲಗುವಾಗ ಸೊಳ್ಳೆ ಪರದೆ (Mosquito Net) ಬಳಸಿ. ಸೊಳ್ಳೆ ನಿವಾರಕ ಕ್ರೀಮ್‌ಗಳು ಅಥವಾ ಲೋಷನ್‌ಗಳನ್ನು ಬಳಸಿ.
- ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್ ಇರುವ ಆಹಾರ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ದ್ರವಾಹಾರ ಸೇವನೆ: ಕಾಯಿಸಿ ಆರಿಸಿದ ನೀರು, ಹರ್ಬಲ್ ಕಷಾಯಗಳು, ಹಣ್ಣಿನ ರಸಗಳನ್ನು ಕುಡಿಯುವುದರಿಂದ ನಿರ್ಜಲೀಕರಣ ತಪ್ಪಿಸಬಹುದು.
ಡೆಂಗ್ಯೂ ಯಾರಿಗೆ ಹೆಚ್ಚು ಅಪಾಯಕಾರಿ?
ಮಕ್ಕಳು, ವೃದ್ಧರು, ಹಾಗು ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಇವರಲ್ಲಿ ಡೆಂಗ್ಯೂ ಗಂಭೀರ ರೂಪಕ್ಕೆ ತಿರುಗುವ ಸಾಧ್ಯತೆ ಹೆಚ್ಚು. ಮಳೆಗಾಲ ಎಷ್ಟೇ ಸುಂದರವಾಗಿದ್ದರೂ ನಾವು ಜಾಗರೂಕರಾಗಿರುವುದು ಅವಶ್ಯಕ. ಡೆಂಗ್ಯೂ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಮತ್ತು ಸೊಳ್ಳೆಗಳ ನಿವಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ನಾವು ಡೆಂಗ್ಯೂನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.