Delhi Metro – ದೆಹಲಿ ಮೆಟ್ರೋ ರೈಲಿನಲ್ಲಿ ಮಹಿಳೆಯರ ಗುಂಪೊಂದು ಭಜನೆ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಘಟನೆಯು ಜನದಟ್ಟಣೆಯ ಸಮಯದಲ್ಲಿ ನಡೆದಿದ್ದು, ರೈಲಿನಲ್ಲಿ ಪ್ರಯಾಣಿಕರು ತುಂಬಿದ್ದರು. ಸೀರೆ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ್ದ ಮಹಿಳೆಯರು, ಡೋಲಕ್ ಮತ್ತು ಕರ್ತಾಳದಂತಹ ವಾದ್ಯಗಳೊಂದಿಗೆ ಜೋರಾಗಿ ಭಜನೆಗಳನ್ನು ಹಾಡುತ್ತಿದ್ದರು.
ಸಾಮಾನ್ಯವಾಗಿ ಶಾಂತವಾಗಿರುವ ಮೆಟ್ರೋ ಪ್ರಯಾಣವು ಈ ಭಜನೆಯಿಂದ ಗದ್ದಲಮಯವಾಗಿತ್ತು. ಭಜನೆ ನಡೆಯುತ್ತಿದ್ದಾಗ, ಹೆಚ್ಚಿನ ಪ್ರಯಾಣಿಕರು ಈ ಅನಿರೀಕ್ಷಿತ ಪ್ರದರ್ಶನದಿಂದ ಅಷ್ಟೇನೂ ತೊಂದರೆಗೊಳಗಾಗದೆ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮಗ್ನರಾಗಿದ್ದರು. ಆದರೆ, ಈ ವಿಡಿಯೋ ಆನ್‌ಲೈನ್‌ಗೆ ಬಂದ ನಂತರ, ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಜೋರಾದ ಭಜನೆಗೆ ನೆಟಿಜನ್‌ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Delhi Metro – CISF ಅಧಿಕಾರಿಯ ತಕ್ಷಣದ ಕ್ರಮ:
ಈ ವಿಡಿಯೋದಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಸಿಬ್ಬಂದಿಯೊಬ್ಬರು ಬೋಗಿಗೆ ಪ್ರವೇಶಿಸಿ ಭಜನೆ ಚಟುವಟಿಕೆಯನ್ನು ನಿಲ್ಲಿಸಿದ್ದಾರೆ. ಇತರ ಪ್ರಯಾಣಿಕರಿಗೆ ಯಾವುದೇ ಅನಾನುಕೂತತೆ ಅಥವಾ ಕಿರಿಕಿರಿಯನ್ನು ಉಂಟುಮಾಡದಂತೆ ಅವರು ನೋಡಿಕೊಂಡರು. ಮೆಟ್ರೋದಲ್ಲಿ ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದ್ದ ಅವರು ತಕ್ಷಣ ಮಧ್ಯಪ್ರವೇಶಿಸಿದರು.
Read this also : Bengaluru Metro : ಬೆಂಗಳೂರು ಮೆಟ್ರೋದಲ್ಲಿ ಜೋಡಿಯ ಅಸಭ್ಯ ವರ್ತನೆ: ವೈರಲ್ ಆದ ವಿಡಿಯೋ, ಕ್ರಮಕ್ಕೆ ಒತ್ತಾಯ…!
ಸಾರ್ವಜನಿಕರಿಗೆ ತೊಂದರೆ ಅಥವಾ ಅನಾನುಕೂತೆಯನ್ನು ಉಂಟುಮಾಡಿದ್ದಕ್ಕಾಗಿ ಆ ಸಮವಸ್ತ್ರಧಾರಿ CISF ಜವಾನ್ ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡರು. ನಂತರ ಆ ಗುಂಪು ತಮ್ಮ ಪ್ರದರ್ಶನವನ್ನು ನಿಲ್ಲಿಸಿ ಅಧಿಕಾರಿಗೆ ಕ್ಷಮೆಯಾಚಿಸಿತು. ಯಾವುದೇ ಲಿಖಿತ ದೂರು ಅಥವಾ ದಂಡವಿಲ್ಲದೆ ಈ ಘಟನೆ ಸುಖಾಂತ್ಯಗೊಂಡಿತು.
Video here : Click Here
Delhi Metro – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಈ ವಿಡಿಯೋ ವೈರಲ್ ಆದ ಬಳಿಕ, ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಪ್ರದರ್ಶನದ ಸೂಕ್ತತೆಯ ಬಗ್ಗೆ ಜನರ ಅಭಿಪ್ರಾಯಗಳು ವಿಭಿನ್ನವಾಗಿ ಕಂಡುಬಂದವು. ಕೆಲವರು, “ಸಾರ್ವಜನಿಕ ಸ್ಥಳಗಳಲ್ಲಿ ಭಜನೆಯಿಂದ ಕಿರಿಕಿರಿ ಉಂಟಾಗಬಾರದು, ಇದಕ್ಕೆ ನಾಗರಿಕ ಪ್ರಜ್ಞೆ ಬೇಕು” ಎಂದು ಟೀಕಿಸಿದರೆ, ಮತ್ತವರು, “ಧರ್ಮವನ್ನು ಮನೆಯಲ್ಲಿ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಮಾತ್ರ ಪಾಲಿಸಬೇಕು” ಎಂದು ಪ್ರಶ್ನಿಸಿದರು. ಆದರೆ, ಕೆಲವರು ಈ ಚಟುವಟಿಕೆಯನ್ನು ಬೆಂಬಲಿಸಿ, “ಅವರು ಧೂಮಪಾನ ಅಥವಾ ಇಸ್ಪೀಟೆಲೆ ಆಡುತ್ತಿಲ್ಲ, ಭಜನೆಯ ಮೂಲಕ ಮನರಂಜನೆ ನೀಡಿದ್ದಾರೆ” ಎಂದು ಪ್ರತಿಕ್ರಿಯಿಸಿದರು. ಒಬ್ಬ ಬಳಕೆದಾರ, “ಈಗ ಮೆಟ್ರೋದಲ್ಲಿ ಎಲ್ಲವೂ ಆರಂಭವಾಗಿದೆ!” ಎಂದು ಚುಟುಕು ಟೀಕೆ ಮಾಡಿದ್ದಾರೆ.