ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಕೈಲಿದ್ದರೆ ಸಾಕು, ಪ್ರತಿಯೊಬ್ಬರೂ ಒಂದಲ್ಲ ಒಂದು ಕಂಟೆಂಟ್ ಕ್ರಿಯೇಟರ್ ಆಗಲು ಬಯಸುತ್ತಾರೆ. ಇನ್‌ಸ್ಟಾಗ್ರಾಮ್ ರೀಲ್ಸ್ (Instagram Reels) ಹಾವಳಿ ಎಷ್ಟಿದೆಯೆಂದರೆ, ಒಂದು ವಿಡಿಯೋ ವೈರಲ್ ಆಗಬೇಕು ಎನ್ನುವ ಹಪಾಹಪಿಯಲ್ಲಿ ಜನ ಎಲ್ಲಿ ನಿಂತಿದ್ದೇವೆ, ಏನು ಮಾಡುತ್ತಿದ್ದೇವೆ ಎನ್ನುವುದನ್ನೇ ಮರೆತುಬಿಡುತ್ತಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಘಟನೆಯಂತೂ ಇದಕ್ಕೆ ಕನ್ನಡಿ ಹಿಡಿದಂತಿದೆ.

Instagram Reel – ಏನಿದು ಘಟನೆ?
ದೆಹಲಿಯ ನಜಾಫ್‌ಗಢ್ ನಿವಾಸಿ, 22 ವರ್ಷದ ಭಾವನಾ ಎಂಬ ಯುವತಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದಾಗ ಆಯತಪ್ಪಿ ತೆರೆದ ಚರಂಡಿಗೆ ಬಿದ್ದಿದ್ದಾರೆ. ಅರೆಕ್ಷಣ ಮೈಮರೆತಿದ್ದಕ್ಕೆ ಆಕೆ ನೇರವಾಗಿ ಕೊಳಚೆ (Instagram Reels) ನೀರಿನ ಪಾಲಾಗಬೇಕಾಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಜಾಗೃತಿ ಮೂಡಿಸುವ ಉದ್ದೇಶ?
ಸಾಮಾನ್ಯವಾಗಿ ರೀಲ್ಸ್ ಎಂದರೆ ಡ್ಯಾನ್ಸ್ ಅಥವಾ ಸ್ಟಂಟ್ ಎಂದುಕೊಳ್ಳುತ್ತೇವೆ. ಆದರೆ ಭಾವನಾ ಅವರ ಉದ್ದೇಶ ಬೇರೆಯೇ ಇತ್ತು. “ನಾನು ಯಾವುದೇ ಅಪಾಯಕಾರಿ ಸಾಹಸ ಮಾಡಲು ಹೋಗಿರಲಿಲ್ಲ. ನಮ್ಮ ಏರಿಯಾದ ಚರಂಡಿಗಳ ಕಳಪೆ ಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಅಧಿಕಾರಿಗಳ ಗಮನ ಸೆಳೆಯಲು ಬಯಸಿದ್ದೆ” ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ವಿಡಿಯೋ ಮಾಡುವ ಭರದಲ್ಲಿ ಪಕ್ಕದಲ್ಲೇ ಇದ್ದ ತೆರೆದ ಚರಂಡಿಯನ್ನು ಗಮನಿಸದೆ ಆಕೆ ಒಳಕ್ಕೆ ಬಿದ್ದಿದ್ದಾರೆ. Read this also : ವಯಸ್ಸು ಕೇವಲ ಸಂಖ್ಯೆ ಅಷ್ಟೇ! (Viral Video) ವೈರಲ್ ವಿಡಿಯೋದಲ್ಲಿ ಧೂಳೆಬ್ಬಿಸಿದ ‘ಹಿರಿಯ’ ಜೋಡಿಯ ಭರ್ಜರಿ ಡ್ಯಾನ್ಸ್…!
ದೇವರಂತೆ ಬಂದ ದೆಹಲಿ ಪೊಲೀಸರು
ಭಾವನಾ ಚರಂಡಿಗೆ ಬಿದ್ದ ಕೂಡಲೇ ಕಿರುಚಾಡಲು ಶುರುಮಾಡಿದ್ದಾರೆ. ಅದೇ ಸಮಯದಲ್ಲಿ ಅದೃಷ್ಟವಶಾತ್ ದೆಹಲಿ ಪೊಲೀಸರ ಪೆಟ್ರೋಲಿಂಗ್ ವ್ಯಾನ್ ಅಲ್ಲಿಗೆ ಬಂದಿದೆ. ಕಿರುಚಾಟ (Instagram Reels) ಕೇಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹಗ್ಗದ ಸಹಾಯದಿಂದ ಆಕೆಯನ್ನು ಮೇಲಕ್ಕೆತ್ತಿದ್ದಾರೆ. ದೆಹಲಿ ಪೊಲೀಸರು ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರ ಕಿವಿಮಾತು ಮತ್ತು ಆಕ್ರೋಶ
ಈ ವಿಡಿಯೋ (Instagram Reels) ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ:
- “ಜಾಗೃತಿ ಮೂಡಿಸುವುದು ಒಳ್ಳೆಯದು, ಆದರೆ ಸ್ವಂತ ಸುರಕ್ಷತೆ ಮೊದಲು ಮುಖ್ಯವಲ್ಲವೇ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ.
- “ರೀಲ್ಸ್‌ಗಾಗಿ ಪ್ರಾಣವನ್ನೇ ಪಣಕ್ಕಿಡಬೇಡಿ” ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ.
ಗಮನಿಸಿ: ಕಳೆದ ವಾರವಷ್ಟೇ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ಮೋಹಿನಿ ಎಂಬ ಯುವತಿ ಮನೆಯೊಳಗೆ ವಿಡಿಯೋ ಮಾಡುವಾಗ ಅಚಾತುರ್ಯದಿಂದ ಸಾವನ್ನಪ್ಪಿದ್ದರು. ಇಂತಹ ಘಟನೆಗಳು ನಮಗೆ ಎಚ್ಚರಿಕೆಯ ಗಂಟೆಯಾಗಬೇಕಿದೆ.
