ವರ್ಷದ ಕೊನೆಯ ತಿಂಗಳು ಬಂದೇ ಬಿಡ್ತು. ಡಿಸೆಂಬರ್ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳು, ರಜೆಗಳು ಮತ್ತು ಹೊಸ ವರ್ಷದ ಸಂಭ್ರಮ ಶುರುವಾಗುತ್ತದೆ. ನೀವೇನಾದರೂ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳನ್ನು ಇಟ್ಟುಕೊಂಡಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮಗೆ ತುಂಬಾನೇ ಮುಖ್ಯ. (Bank Holidays) ಏಕೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, 2025ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 19 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ!

Bank Holidays – ವರ್ಷಾಂತ್ಯದಲ್ಲಿ ಬ್ಯಾಂಕ್ ರಜೆಗಳ ಜಾತ್ರೆ!
ಹೌದು, ವಾರದ ರಜೆಗಳು, ಹಬ್ಬದ ರಜೆಗಳು ಹಾಗೂ ಪ್ರಾದೇಶಿಕ ರಜೆಗಳು ಸೇರಿದಂತೆ ಒಟ್ಟು 19 ದಿನ ಬ್ಯಾಂಕ್‌ಗಳು ಬಾಗಿಲು ತೆರೆಯುವುದಿಲ್ಲ. ಆದರೆ, ಗ್ರಾಹಕರೇ ಗಾಬರಿಯಾಗುವ ಅವಶ್ಯಕತೆಯಿಲ್ಲ. ಏಕೆಂದರೆ ಈ 19 ದಿನಗಳ ರಜೆ ದೇಶಾದ್ಯಂತ ಏಕಕಾಲಕ್ಕೆ ಅನ್ವಯವಾಗುವುದಿಲ್ಲ. ಕೆಲವು ರಜೆಗಳು ಆಯಾ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೂ ರಾಷ್ಟ್ರೀಯ ರಜೆಗಳು ಮತ್ತು ವೀಕೆಂಡ್ ರಜೆಗಳ ಬಗ್ಗೆ ಮಾಹಿತಿ ಇಟ್ಟುಕೊಳ್ಳುವುದು ಒಳ್ಳೆಯದು.
Bank Holidays – ಕರ್ನಾಟಕದಲ್ಲಿ ಯಾವಾಗ ರಜೆ ಇರುತ್ತೆ?
ಸಾಮಾನ್ಯವಾಗಿ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರದಂದು ದೇಶದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದರ ಜೊತೆಗೆ ಡಿಸೆಂಬರ್ 25 ರಂದು ಬರುವ ‘ಕ್ರಿಸ್‌ಮಸ್’ ಹಬ್ಬದಂದು ದೇಶದ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಉಳಿದಂತೆ ಆಯಾ ರಾಜ್ಯದ ಸ್ಥಳೀಯ ಹಬ್ಬಗಳಿಗೆ ತಕ್ಕಂತೆ ರಜೆಗಳು ಬದಲಾಗುತ್ತವೆ.
ಗ್ರಾಹಕರಿಗೆ ನೆರವಾಗುತ್ತೆ ‘ಡಿಜಿಟಲ್ ಬ್ಯಾಂಕಿಂಗ್’
ಬ್ಯಾಂಕ್‌ಗಳಿಗೆ ರಜೆ ಇದ್ದರೂ ನಿಮ್ಮ ಹಣಕಾಸಿನ ವ್ಯವಹಾರಕ್ಕೆ ಯಾವುದೇ ತೊಂದರೆಯಾಗಲ್ಲ. ಎಟಿಎಂ (ATM), ಗೂಗಲ್ ಪೇ (UPI), ಮೊಬೈಲ್ ಬ್ಯಾಂಕಿಂಗ್ (Bank Holidays) ಮತ್ತು ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ 24/7 ಕಾರ್ಯನಿರ್ವಹಿಸುತ್ತವೆ. ತುರ್ತು ಸಂದರ್ಭಗಳಲ್ಲಿ ನೀವು ಈ ಸೇವೆಗಳನ್ನು ಬಳಸಿಕೊಳ್ಳಬಹುದು. Read this also : ಟಾಪ್-ಅಪ್ ಲೋನ್ (Top-up Loan) ತೆಗೆದುಕೊಂಡರೆ ಎಚ್ಚರ! ಇಲ್ಲಿದೆ ನಿಮಗೆ ಗೊತ್ತಿರಲೇಬೇಕಾದ 7 ರಹಸ್ಯಗಳು..!
Bank Holidays – ಡಿಸೆಂಬರ್ 2025ರ ರಜಾ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ
- ಡಿಸೆಂಬರ್ 07: ಭಾನುವಾರ
- ಡಿಸೆಂಬರ್ 13: ಎರಡನೇ ಶನಿವಾರ
- ಡಿಸೆಂಬರ್ 14: ಭಾನುವಾರ
- ಡಿಸೆಂಬರ್ 21: ಭಾನುವಾರ
- ಡಿಸೆಂಬರ್ 27: ನಾಲ್ಕನೇ ಶನಿವಾರ
- ಡಿಸೆಂಬರ್ 28: ಭಾನುವಾರ

ಪ್ರಮುಖ ಹಬ್ಬ ಮತ್ತು ಪ್ರಾದೇಶಿಕ ರಜೆಗಳು
- ಡಿಸೆಂಬರ್ 01: ರಾಜ್ಯ ಸ್ಥಾಪನಾ ದಿನ (ಇಟಾನಗರ ಮತ್ತು ಕೊಹಿಮಾದಲ್ಲಿ ರಜೆ).
- ಡಿಸೆಂಬರ್ 03: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ (ಗೋವಾದ ಪಣಜಿಯಲ್ಲಿ ರಜೆ).
- ಡಿಸೆಂಬರ್ 12 & 18: ಪುಣ್ಯತಿಥಿ ಆಚರಣೆಗಳು (ಶಿಲ್ಲಾಂಗ್‌ನಲ್ಲಿ ರಜೆ).
- ಡಿಸೆಂಬರ್ 19: ಗೋವಾ ವಿಮೋಚನಾ ದಿನ (ಪಣಜಿಯಲ್ಲಿ ರಜೆ).
- ಡಿಸೆಂಬರ್ 24: ಕ್ರಿಸ್‌ಮಸ್ ಈವ್ (ಐಜ್ವಾಲ್, ಕೊಹಿಮಾ, ಶಿಲ್ಲಾಂಗ್‌ನಲ್ಲಿ ರಜೆ).
- ಡಿಸೆಂಬರ್ 25: ಕ್ರಿಸ್‌ಮಸ್ (ಕರ್ನಾಟಕ ಸೇರಿದಂತೆ ದೇಶಾದ್ಯಂತ ಬ್ಯಾಂಕ್ ರಜೆ).
- ಡಿಸೆಂಬರ್ 26 & 27: ಕ್ರಿಸ್‌ಮಸ್ ಆಚರಣೆ (ಈಶಾನ್ಯ ರಾಜ್ಯಗಳಾದ ಐಜ್ವಾಲ್, ಕೊಹಿಮಾ, ಶಿಲ್ಲಾಂಗ್‌ನಲ್ಲಿ ರಜೆ).
- ಡಿಸೆಂಬರ್ 31: ಹೊಸ ವರ್ಷದ ಈವ್ (ಐಜ್ವಾಲ್ ಮತ್ತು ಇಂಫಾಲ್‌ನಲ್ಲಿ ರಜೆ).
ಆದ್ದರಿಂದ ಗ್ರಾಹಕರೇ, ಡಿಸೆಂಬರ್‌ನಲ್ಲಿ ಬ್ಯಾಂಕ್‌ಗೆ (Bank Holidays) ಹೋಗುವ ಮುನ್ನ ಈ ಪಟ್ಟಿಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ರಜಾದಿನಗಳನ್ನು ನೋಡಿಕೊಂಡು ನಿಮ್ಮ ಬ್ಯಾಂಕ್ ಕೆಲಸಗಳನ್ನು ಇಂದೇ ಪ್ಲಾನ್ ಮಾಡಿಕೊಳ್ಳುವುದು ಉತ್ತಮ!
