ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷಷ್ಟಿಸಿದಂತಹ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ರಿಯಾಕ್ಟ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಆ ಪ್ರಕರಣದಲ್ಲಿ ನನಗೆ ಸಂಬಂಧವಿಲ್ಲ. ದೇವೇಗೌಡರ ಕುಟುಂಬಕ್ಕೆ ನಾನು ಕೆಟ್ಟದ್ದು ಬಯಸೊಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರವರ ಆರೋಪಗಳಿಗೆ ಡಿಸಿಎಂ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಬ್ರದರ್ ಕುಮಾರಣ್ಣ ಯಾವ ತಿಮಿಂಗಲವನ್ನಾದರೂ ಹಿಡಿದು, ಬಡಿದು ನುಂಗಲಿ. ಅವರ ಎಲ್ಲಾ ಆರೋಪಗಳಿಗೆ ಮುಂದಿನ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದು ನಾನು ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ, ನಾನು ಕೇವಲ ಪ್ರದರ್ಶಕ ಅಷ್ಟೆ ಎಂದು ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಶಾಸಕರು ಹಾಗೂ ಸಚಿವರಿಂದ ಮಾತನಾಡಿಸುತ್ತಿರುವವರು ಯಾರು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ರವರು ನಿಮ್ಮ ಬಗ್ಗೆ ಹೇಳಿದ್ದಾರೆ ಎಂದು ಮಾದ್ಯಮದವರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಈ ಪ್ರಕರಣದಲ್ಲಿ ನನ್ನ ಹಸ್ತಕ್ಷೇಪ ಕೊಂಚ ಇದ್ದರೂ ಅದಕ್ಕೆ ಬೆಲೆ ತೆರಲು ನಾಣು ಸಿದ್ದನಾಗಿದ್ದೇನೆ. ಬೇರೆಯವರಿಂದ ಮಾತನಾಡಿಸುವ, ಪ್ರತಿಭಟನೆ ಮಾಡಿಸುವ ಬೇರೆಯವರ ಮೇಲೆ ಅನವಶ್ಯಕ ಆರೋಪ ಮಾಡುವ ಅಗತ್ಯ ನನಗಿಲ್ಲ. ನಾನು ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದೇನೆ. ನಾನು ಒಂದು ರಾಜಕೀಯ ಪಕ್ಷದ ಅಧ್ಯಕ್ಷ. ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ ಸಮಯವೇ ಎಲ್ಲದಕ್ಖೂ ಸಮಯಕ್ಕೆ ಸರಿಯಾಗಿ ಉತ್ತರ ನೀಡಲಿದೆ ಎಂದರು.
ಇನ್ನೂ ಇಂದು ಡಿ.ಕೆ.ಶಿವಕುಮಾರ್ ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಅಭಿಮಾನಿಗಳು ಕಾರ್ಯಕರ್ತರು ಶುಭಾಷಯಗಳನ್ನು ಕೋರುತ್ತಿದ್ದಾರೆ. ಈ ಹಾದಿಯಲ್ಲೇ ಸಿಎಂ ಸಿದ್ದರಾಮಯ್ಯ ರವರು ಸಹ ಶುಭಾಷಯಗಳನ್ನು ಕೋರಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಿದ್ದರಾಮಯ್ಯ ರವರು ಡಿಕೆಶಿ ಹೆಗಲ ಮೇಲೆ ಕೈ ಹಾಕಿರುವ ಪೊಟೋ ಒಂದನ್ನು ಹಂಚಿಕೊಂಡು ನನ್ನ ಆತ್ಮೀಯ ಸ್ನೇಹಿತ ಹಾಗೂ ಸಹುದ್ಯೋಗಿಗೆ ಜನ್ಮ ದಿನದ ಶುಭಾಷಯಗಳು. ನಿಮ್ಮ ಕೌಶಲ್ಯ, ಸಮರ್ಪಣೆ ಮತ್ತು ಅಚಲವಾದ ಬದ್ದತೆ ಯಾವಾಗಲೂ ಎದ್ದು ಕಾಣುತ್ತದೆ. ನೀವು ಅದೇ ಉತ್ಸಾಹ ಮತ್ತು ಶಕ್ತಿಯೊಂದಿಗೆ ಮುನ್ನೆಸುವುದನ್ನು ಮುಂದುವರೆಸಲಿ ನಿಮಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಟ್ವಿಟರ್ ಮೂಲಕ ಶುಭ ಕೋರಿದ್ದಾರೆ.