ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ದಸರಾ ಹಬ್ಬ ಸಹ ಒಂದಾಗಿದ್ದು, ಈ ಹಬ್ಬವನ್ನು ಎಲ್ಲಾ ಹಿಂದೂಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅನೇಕ ಗ್ರಾಮಗಳಲ್ಲಿರುವ ಗ್ರಾಮ ದೇವತೆಗಳನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಸಹ ಮಾಡುತ್ತಾರೆ. ದಸರಾ ಹಬ್ಬ ಮುಗಿದರೂ ಸಹ ದಸರಾ ಸಂಭ್ರಮ ಇನ್ನೂ ಮುಗಿದಿಲ್ಲ ಎಂದೇ ಹೇಳಬಹುದಾಗಿದೆ. ಇನ್ನೂ ಗುಡಿಬಂಡೆ ತಾಲೂಕಿನ ಸೋಮೆನಹಳ್ಳಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ (Dasara 2024) ಅದ್ದೂರಿಯಾಗಿ ಗ್ರಾಮ ದೇವತೆಗಳ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ದಸರಾ ಉತ್ಸವ 2024 (Dasara 2024) ರ ಅಂಗವಾಗಿ ಶ್ರೀ ಚೌಡೇಶ್ವರಿ ದೇವಿ ಭಕ್ತ ಮಂಡಳಿ ಟ್ರಸ್ಟ್ ಹಾಗೂ ಗಂಗಾಭವಾನಿ ಭಕ್ತ ಮಂಡಳಿ ಟ್ರಸ್ಟ್ ವತಿಯಿಂದ ಸೋಮೇನಹಳ್ಳಿ ಪಾತಿಮಾನಗರ್ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ದಸರಾ ಮತ್ತು ನವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ (Dasara 2024) ದೈವಿಕ ಕಾರ್ಯಕ್ರಮದ ನಿಮಿತ್ತ ಗ್ರಾಮದ ವ್ಯಾಪ್ತಿಯ ಹಲವು ಗ್ರಾಮ ದೇವತೆಗಳನ್ನು ವಿಶೇಷವಾಗಿ ಅಲಂಕರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಇನ್ನೂ ಸುಮಾರು ವರ್ಷಗಳಿಂದ (Dasara 2024) ಈ ಪದ್ದತಿ ನಡೆದುಕೊಂಡು ಬರುತ್ತಿದ್ದು, ಈ ಬಾರಿಯೂ ಸಹ ಅದ್ದೂರಿಯಾಗಿ ಗ್ರಾಮ ದೇವತೆಗಳ ಮೆರವಣಿಗೆ ನಡೆಸಲಾಯಿತು. ಸೋಮೇನಹಳ್ಳಿ ಗ್ರಾಮದಲ್ಲಿರುವ (Dasara 2024) ಶ್ರೀ ಗಂಗಾಭವಾನಿ ದೇವಿ, ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಓಂ ಶಕ್ತಿ ದೇವಿಯ ಉತ್ಸವ ಮೂರ್ತಿಗಳನ್ನು ಹೂಗಳಿಂದ ಸಿಂಗಾರ ಮಾಡಿ ಸೋಮೇನಹಳ್ಳಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ (Dasara 2024) ವೇಳೆ ಗ್ರಾಮಸ್ಥರು ದೇವತೆಯರಿಗೆ ಹಣ್ಣು ಕಾಯಿ ಸಮರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಬೇಡಿಕೊಂಡರು.