Dairy Farming – ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಳಮ್ಮ ತಿಳಿಸಿದರು. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಜಂಬಿಗೆಮರದಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಏರ್ಪಡಿಸಿದ್ದ ಬರಡು ರಾಸುಗಳ ತಪಾಸಣೆ ಹಾಗೂ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

Dairy Farming – ಜಾನುವಾರುಗಳ ಆರೋಗ್ಯ ರಕ್ಷಣೆ ಪ್ರಮುಖ
ಈ ಭಾಗದಲ್ಲಿ ಹೈನುಗಾರಿಕೆ ಉತ್ತಮ ರೀತಿಯಲ್ಲಿ ನಿರ್ವಹಣೆಯಾಗುತ್ತಿದೆ. ಅನೇಕರಿಗೆ ಹೈನುಗಾರಿಕೆ ಪ್ರಮುಖ ಜೀವನೋಪಾಯ ಕಸುಬಾಗಿದೆ. ಹೈನುಗಾರರು ತಮ್ಮ ರಾಸುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ರೋಗ ರುಜಿನಗಳು ಜಾನುವಾರುಗಳಿಗೆ ತಗುಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ತಮ್ಮ ಜಾನುವಾರುಗಳಿಗೆ ಏನಾದರೂ ಕಾಯಿಲೆ ಬಂದರೇ ಕೂಡಲೇ ಪಶು ವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು. ಇನ್ನೂ ಕೃಷಿ ವಿದ್ಯಾರ್ಥಿಗಳಾದ ತಾವುಗಳು ಉತ್ತಮ ವಿದ್ಯಾಭ್ಯಾಸ ಪಡೆದು, ನೂತನ ಆವಿಷ್ಕಾರಗಳನ್ನು ಕಂಡುಹಿಡಿದು ರೈತರಿಗೆ ನೆರವಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Dairy Farming – ಶಿಬಿರದಲ್ಲಿ ಜಾನುವಾರುಗಳಿಗೆ ಉಚಿತ ಚಿಕಿತ್ಸೆ
ಈ ಶಿಬಿರದಲ್ಲಿ ಬರಡು ರಾಸುಗಳ ತಪಾಸಣೆ, ಜಂತು ನಿರ್ವಹಣೆ, ಗರ್ಭ ಪರೀಕ್ಷೆ, ಮತ್ತು ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲಾಯಿತು. ಜಾನುವಾರುಗಳಲ್ಲಿ ಜಂತು ನಿರ್ವಹಣೆಗೆ ಅಲ್ಬೆಂಡಜೋಲ್ ಮತ್ತು ಕುರಿಗಳಲ್ಲಿ ಫೆನ್‌ಬೆಂಡಜೋಲ್ ಬಳಸಲಾಯಿತು. ಹೆಚ್ಚುವರಿಯಾಗಿ, ಇವರ್‌ಮೆಕ್ಟಿನ್ ಅನ್ನು ಟಿಕ್ ಸೋಂಕುಗಳಿಗೆ ಮತ್ತು ಕ್ಯಾಲ್ಸಿಯಂ ಇಂಜೆಕ್ಷನ್ ಅನ್ನು ಹಾಲು ಜ್ವರ (ಮಿಲ್ಕ್ ಫೀವರ್) ತಡೆಗಟ್ಟಲು ಬಳಸಲಾಯಿತು. ಹೆಚ್ಚು ಹಾಲು ಉತ್ಪಾದನೆಗಾಗಿ ಮಿನರಲ್ ಮಿಕ್ಸಚರ್‌ಗಳನ್ನು ಸಹ ನೀಡಲಾಯಿತು.
Dairy Farming – ಕೃಷಿ ವಿದ್ಯಾರ್ಥಿಗಳ ಪಾತ್ರ
ಜಂಬಿಗೆಮರದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಜಾನುವಾರುಗಳೊಂದಿಗೆ ಈ ಶಿಬಿರಕ್ಕೆ ಆಗಮಿಸಿ, ಉಚಿತ ತಪಾಸಣೆ ಮತ್ತು ಔಷಧಿಗಳನ್ನು ಪಡೆದುಕೊಂಡರು. ಕೃಷಿ, ಕೃಷಿ ವ್ಯವಹಾರ ನಿರ್ವಹಣೆ, ಕೃಷಿ ಇಂಜಿನಿಯರಿಂಗ್, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. Read this also : ಮಹಿಳೆಯರು ಸ್ವಯಂ ಉದ್ಯೋಗ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು : ಅಶ್ವಿನಿ

ಇನ್ನೂ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ಪಶು ಇಲಾಖೆಯ ವೈದ್ಯರಾದ ಸುಬ್ರಮಣಿ, ರವಿಚಂದ್ರ, ಮಂಜುಳಾ, ಈ ವೇಳೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳಾದ ನಿವೇದಿತಾ, ಮಹಾಲಕ್ಷ್ಮೀ, ಕಿಶನ್, ರಕ್ಷಿತಾ, ರಾಕೇಶ್, ಮೇಘನಾ ಶಿಂಡೆ ಸೇರಿದಂತೆ ಹಲವರು ಇದ್ದರು.
