ಕೆಲಸದ ಒತ್ತಡ ಮತ್ತು ಮಾಲೀಕರ ಕಿರುಕುಳ ಯಾವ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ವೈಯಕ್ತಿಕ ಕಾರಣಕ್ಕೆ ಕೆಲಸಕ್ಕೆ ಗೈರಾದ ಯುವತಿಯ ಮೇಲೆ ಬೀದಿಯಲ್ಲೇ (Cyber Center) ಎರಗಿದ ಮಾಲೀಕ, ಆಕೆಯ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ, ‘ರಸ್ತೆಯಲ್ಲೇ ಕತ್ತರಿಸಿ ಹಾಕುವೆ’ ಎಂಬ ಆತನ ದರ್ಪದ ಮಾತುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Cyber Center – ಏನಿದು ಘಟನೆ?
ಕೆಂಗೇರಿಯ ‘ಮುಸ್ಕಾನ್ ಟೈಮ್ಸ್’ ಎಂಬ ಸೈಬರ್ ಸೆಂಟರ್‌ನಲ್ಲಿ ಲಕ್ಷ್ಮಿ ಎಂಬ ಯುವತಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದಾಗಿ ಅವರು ಕೆಲಸಕ್ಕೆ ಗೈರಾಗಿದ್ದರು. ಕೇವಲ ಒಂದು ರಜೆಗಾಗಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಮಾಲೀಕ ಸೈಯದ್, ಜನವರಿ 22ರಂದು ತನ್ನ ವಿಕೃತ ರೂಪವನ್ನು ತೋರಿಸಿದ್ದಾನೆ.
ನಡುರಸ್ತೆಯಲ್ಲೇ ಅಸಭ್ಯ ವರ್ತನೆ, ಪ್ರಾಣ ಬೆದರಿಕೆ
ರಾತ್ರಿ 7:30ರ ಸುಮಾರಿಗೆ ಲಕ್ಷ್ಮಿ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ಸೈಯದ್, ನೂರಾರು ಜನರ ಮುಂದೆಯೇ ಅಸಭ್ಯವಾಗಿ ವರ್ತಿಸಿದ್ದಾನೆ. “ನಿನಗೆ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ, ರಸ್ತೆಯಲ್ಲೇ ಕತ್ತರಿಸಿ ಹಾಕುತ್ತೇನೆ” ಎಂದು ಕೂಗಾಡಿದ್ದಾನೆ. ಅಷ್ಟೇ ಅಲ್ಲದೆ, “ನಿನ್ನಿಂದ ನನಗೆ ಹಣ ನಷ್ಟವಾಗಿದೆ, ನನ್ನ ತಲೆ ಕೆಡಿಸಬೇಡ” ಎಂದು ಬೆದರಿಕೆ ಹಾಕಿ ಯುವತಿಯ (Cyber Center) ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾನೆ. Read this also : ಅರ್ಬನ್ ಕಂಪನಿ ಮಸಾಜ್ ಬುಕ್ ಮಾಡಿದ ಮಹಿಳೆಗೆ ಶಾಕ್ : ಮನೆಗೆ ಬಂದು ಗ್ರಾಹಕಿಯ ಮೇಲೆ ಹಲ್ಲೆ ಮಾಡಿದ ಸಿಬ್ಬಂದಿ!
ಸ್ಥಳೀಯರ ಆಕ್ರೋಶ ಮತ್ತು ಪೊಲೀಸ್ ಕ್ರಮ
ಸೈಯದ್‌ನ ಈ ಅಟ್ಟಹಾಸವನ್ನು ಕಂಡ ಸ್ಥಳೀಯರು ಸುಮ್ಮನೆ ಕೂರಲಿಲ್ಲ. ತಕ್ಷಣವೇ ಮಧ್ಯಪ್ರವೇಶಿಸಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಬಂದ ಕೆಂಗೇರಿ ಪೊಲೀಸರು ಆರೋಪಿ ಸೈಯದ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಆರೋಪಿಯ (Cyber Center) ವಿರುದ್ಧ ಮಹಿಳಾ ನಿಂದನೆ ಮತ್ತು ಪ್ರಾಣ ಬೆದರಿಕೆ ಪ್ರಕರಣ ದಾಖಲಾಗಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಆತನಿಗೆ ಸ್ಟೇಷನ್ ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿರುವುದು ದುರದೃಷ್ಟಕರ.

ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here
ನಾವು ಯೋಚಿಸಬೇಕಾದ ವಿಷಯ:
ಐದು ವರ್ಷಗಳ ನಂಬಿಕೆಗೆ ಬೆಲೆ ಇಲ್ಲವೇ? ಕೆಲಸಗಾರರು ಯಂತ್ರಗಳಲ್ಲ, ಅವರಿಗೂ ವೈಯಕ್ತಿಕ ಜೀವನ ಮತ್ತು ಸಮಸ್ಯೆಗಳಿರುತ್ತವೆ ಎಂಬ ಕನಿಷ್ಠ ಜ್ಞಾನ ಈ ಸಮಾಜಕ್ಕಿಲ್ಲವೇ? ಒಬ್ಬ ಮಹಿಳೆಯನ್ನು ರಸ್ತೆಯಲ್ಲಿ ನಿಲ್ಲಿಸಿ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ ಎನ್ನುವ ಧೈರ್ಯ ಈ ಕ್ರೂರಿಗಳಿಗೆ ಎಲ್ಲಿಂದ ಬರುತ್ತದೆ?
