ಮದುವೆಯಾಗಿ ಕೇವಲ ಏಳೇ ತಿಂಗಳಲ್ಲಿ ಗಂಡನ ಮನೆಯವರ (In-Laws) ನಿರಂತರ ಕಿರುಕುಳ (Harassment) ಮತ್ತು ಹಿಂಸೆಯನ್ನು ತಾಳಲಾರದೆ ಯುವ ಗೃಹಿಣಿಯೊಬ್ಬರು ನಾಲೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನಲ್ಲಿ ನಡೆದಿದೆ. ಮೃತ ಮಹಿಳೆ ನ್ಯಾಯಕ್ಕಾಗಿ ಕಂಬನಿ ಮಿಡಿದು ಬರೆದ ಡೆತ್ ನೋಟ್ (Death Note) ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Crime – ಏಪ್ರಿಲ್‌ನಲ್ಲಿ ಮದುವೆ, ನವೆಂಬರ್‌ನಲ್ಲಿ ದುರಂತ
ಡಿ.ಬಿ. ಹಳ್ಳಿಯ ನಿವಾಸಿ ದಿವಂಗತ ಪರಮೇಶ್ವರಪ್ಪ ಮತ್ತು ರುದ್ರಮ್ಮ ದಂಪತಿಯ ಪುತ್ರಿ ಲತಾ ಅವರೇ ದುರಂತ ಅಂತ್ಯ ಕಂಡ ಗೃಹಿಣಿ. ಈ ವರ್ಷದ ಏಪ್ರಿಲ್‌ನಲ್ಲಿ ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಗ್ರಾಮದ ಕೆಪಿಸಿಎಲ್ ಎಇಇ (KPCEL AEE) ಆಗಿರುವ ಗುರುರಾಜ್ ಎಂಬಾತನೊಂದಿಗೆ ಲತಾ ಅವರ ವಿವಾಹವಾಗಿತ್ತು.
ಆದರೆ, ಮಧುರ ಜೀವನದ ಕನಸು ಕಂಡಿದ್ದ ಲತಾ ಅವರಿಗೆ ಮದುವೆಯಾದ ಏಳು ತಿಂಗಳಲ್ಲೇ ಸಂಕಷ್ಟ ಎದುರಾಗಿತ್ತು. ಗಂಡನ ಮನೆಯವರಿಂದ ತೀವ್ರ ಕಿರುಕುಳಕ್ಕೆ ಒಳಗಾದ ಲತಾ ಅವರು ಬೇಸತ್ತು ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿ ಇರುವ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Crime – ಡೆತ್ ನೋಟ್‌ನಲ್ಲಿ ಗಂಭೀರ ಆರೋಪ
ಸಾಯುವ ಮುನ್ನ ಲತಾ ಅವರು ಬರೆದಿರುವ ಡೆತ್ ನೋಟ್ (Death Note) ಅತ್ಯಂತ ಮಹತ್ವದ್ದಾಗಿದ್ದು, ಗಂಡನ ಮನೆಯವರ ನಡವಳಿಕೆ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ನನ್ನ ಸಾವಿಗೆ ನನ್ನ ಅತ್ತೆ ನಾಗರತ್ನಮ್ಮ, ನಾದಿನಿ ರಾಜೇಶ್ವರಿ, ಶಾರದಮ್ಮ, ಗಂಡ ಗುರುರಾಜ್ ಹಾಗೂ ಮಾವ ಕೃಷ್ಣಪ್ಪ ಅವರೇ ಕಾರಣ. ಈ ಐವರೂ ನನಗೆ ಮಾನಸಿಕವಾಗಿ (Mental Harassment) ಹಿಂಸೆ ನೀಡಿದ್ದಾರೆ. ಇವರಿಗೆ ಶಿಕ್ಷೆ ಆಗಲೇಬೇಕು,” ಎಂದು ಡೆತ್ ನೋಟ್‌ನಲ್ಲಿ ಒತ್ತಾಯಿಸಿದ್ದಾರೆ.
“ನಾನು ಮದುವೆ ಆಗಿದ್ದ ಹುಡುಗ ಒಳ್ಳೆಯವರು ಎಂದುಕೊಂಡಿದ್ದೆ. ಆದರೆ, ಅವರ ಅಕ್ಕ, ಅಮ್ಮ ಹಾಗೂ ಮಾವನ ಮಾತು ಕೇಳಿ ಇವರು ಕೂಡ ನನ್ನ ಜೊತೆ ನಾಟಕೀಯವಾಗಿ ವರ್ತನೆ ಮಾಡಿದರು. ಇದರಿಂದ ಸಾಕಷ್ಟು ಅವಮಾನ ಮಾಡಿಸಿಕೊಂಡಿದ್ದೇನೆ. ಇದನ್ನು ಓದುತ್ತಿರುವವರು ನನ್ನ ಸಾವಿಗೆ ನ್ಯಾಯ ಕೊಡಿಸಿ,” ಎಂದು ಲತಾ ಅವರು ಕಳಕಳಿಯಿಂದ ಮನವಿ ಮಾಡಿದ್ದಾರೆ.
Crime – ‘ಗಂಡನೂ ದ್ವೇಷ ಮಾಡಿದಾಗ ಹೆಣ್ಣು ಬದುಕಿದ್ದೂ ಸತ್ತ ಥರ’
ಸಹಜವಾಗಿಯೇ ಒಂದು ಹೆಣ್ಣು ಹೊಸ ಮನೆಗೆ ಹೋದಾಗ ಆಗುವ ಹೊಂದಾಣಿಕೆಯ ಕಷ್ಟಗಳ ಬಗ್ಗೆ ಲತಾ ಅವರು ಅತ್ಯಂತ ಭಾವನಾತ್ಮಕವಾಗಿ ಬರೆದಿದ್ದಾರೆ. “ಯಾರು ಹುಟ್ಟುತ್ತಾ ಕೆಟ್ಟವರಾಗಿ ಇರುವುದಿಲ್ಲ. ಪ್ರತಿ ಹೆಣ್ಣು ಕೂಡ ಪುಣ್ಯ ಮಾಡಿಯೇ ಗಂಡನ ಮನೆಗೆ ಹೋಗುತ್ತಾಳೆ. ಒಂದೇ ದಿನಕ್ಕೆ, ಒಂದೇ ತಿಂಗಳಿಗೆ ಯಾರೂ ಕೂಡ ಅಲ್ಲಿನ ವಾತಾವರಣಕ್ಕೆ ಅಡ್ಜಸ್ಟ್ ಆಗೋದಿಲ್ಲ. ಈ ಸಮಯದಲ್ಲಿ ಯಾರೂ ಬೆಂಬಲ ಕೊಡದೆ ಇದ್ದರೂ, ಗಂಡ ಬೆಂಬಲ ಕೊಡಬೇಕು.”

“ನನ್ನ ಹೆಂಡ್ತಿ ಹೊಸ ಮನೆಗೆ ಬಂದಿದ್ದಾಳೆ, ತಪ್ಪುಗಳು ಆಗುತ್ತದೆ ಎಂದು ಗಂಡ ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ಮನೆಯ ಉಳಿದವರ ಜೊತೆ ಸೇರಿಕೊಂಡು ಗಂಡನೂ ಕೂಡ ದ್ವೇಷ ಮಾಡಿದಾಗ ಹೆಣ್ಣು ಬದುಕಿದ್ದೂ ಸತ್ತ ಥರ ಅನಿಸುತ್ತದೆ.” “ಒಳ್ಳೆಯದಾಗುತ್ತೆ ಅಂತಾ ತುಂಬಾ ಸಹಿಸಿಕೊಂಡೆ. ಆದರೆ, ದಿನೇ ದಿನೇ ಅವರು ಮಾಡುತ್ತಿರುವ ಸಂಚಿನ ವರ್ತನೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ,” ಎಂದು ಲತಾ ಅವರು ತಮ್ಮ ಮನದ ನೋವನ್ನು ತೆರೆದಿಟ್ಟಿದ್ದಾರೆ. Read this also : ಸ್ನೇಹಿತೆಯ ರೂಮಿಗೆ ಯುವತಿಯನ್ನು ಕರೆದೊಯ್ದು ಕೊಲೆಗೈದ ಪ್ರೇಮಿ? ಆರೋಪಿ ಪ್ರೇಮ್ ವರ್ಧನ್‌ಗಾಗಿ ಪೊಲೀಸರ ಹುಡುಕಾಟ..!
Crime – ಶವಕ್ಕಾಗಿ ಭದ್ರಾ ನಾಲೆ ಶೋಧ
ಲತಾ ಅವರು ಭದ್ರಾ ನಾಲೆಗೆ ಹಾರಿದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ (Fire Force), ಪೊಲೀಸ್ (Police) ಮತ್ತು ಸ್ಥಳೀಯರಿಂದ ಶವಕ್ಕಾಗಿ ಶೋಧ ಕಾರ್ಯ (Search Operation) ನಡೆಯುತ್ತಿದೆ. ಈ ಸಂಬಂಧ ಹೊಳೆ ಹೊನ್ನೂರು ಪೊಲೀಸ್ ಠಾಣಾ (Hole Honnuru Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
