Crime – ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪಂಜಾಬ್ ನ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರು ಪೊಲೀಸರ ಕಣ್ತಪ್ಪಿಸಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿರುವ ಘಟನೆ ಪಂಜಾಬ್ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಶಾಸಕನ ಬೆಂಬಲಿಗರು ಪೊಲೀಸರ ಮೇಲೆ ಕಲ್ಲು ಮತ್ತು ಗುಂಡಿನ ದಾಳಿ ನಡೆಸಿದ್ದು, ಈ ಗೊಂದಲದ ಲಾಭ ಪಡೆದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
Crime – ಘಟನೆಯ ವಿವರ
ಪಂಜಾಬ್‌ನ ಸನೂರ್ ಕ್ಷೇತ್ರದ ಆಪ್ ಶಾಸಕ ಹರ್ಮಿತ್ ಸಿಂಗ್ ಅವರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಮಹಿಳೆಯೊಬ್ಬರು ದೂರು ನೀಡಿದ್ದರು. 2021ರಲ್ಲಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಶೋಷಣೆ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದರು. ಈ ದೂರಿನ ಆಧಾರದ ಮೇಲೆ ಹರ್ಯಾಣದ ಕರ್ನಾಲ್ ಜಿಲ್ಲೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ಪಂಜಾಬ್ ಪೊಲೀಸರು, ಹರ್ಮಿತ್ ಸಿಂಗ್ ಅವರನ್ನು ಬಂಧಿಸಿದ್ದರು. Read this also : ED ಅಧಿಕಾರಿಗಳನ್ನು ಕಂಡೊಡನೆ ಮನೆಯ ಫಸ್ಟ್ ಫ್ಲೋರ್‌ನಿಂದ ಜಿಗಿದ ಶಾಸಕ! ಆ ನಂತರ ನಡೆದಿದ್ದೇನು ಗೊತ್ತಾ?
ಬಂಧನದ ಬಳಿಕ ಅವರನ್ನು ಠಾಣೆಗೆ ಕರೆದೊಯ್ಯುತ್ತಿದ್ದಾಗ, ದಾರಿಯಲ್ಲಿ ಈ ನಾಟಕೀಯ ಘಟನೆ ನಡೆದಿದೆ. ಹರ್ಮಿತ್ ಸಿಂಗ್‌ರ ಬೆಂಬಲಿಗರ ಗುಂಪೊಂದು ಪೊಲೀಸರ ಮೇಲೆ ಏಕಾಏಕಿ ಕಲ್ಲು ಮತ್ತು ಗುಂಡಿನ ದಾಳಿ ನಡೆಸಿದೆ. ಈ ದಾಳಿಯಿಂದ ವಿಚಲಿತಗೊಂಡ ಪೊಲೀಸರ ಕಣ್ತಪ್ಪಿಸಿ, ಹರ್ಮಿತ್ ಸಿಂಗ್ ತಮ್ಮ ಬೆಂಬಲಿಗರು ತಂದಿದ್ದ ಕಾರಿನಲ್ಲಿ ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರನ್ನು ತಡೆಯಲು ಯತ್ನಿಸಿದ ಪೊಲೀಸರಿಗೆ ಕಾರು ಡಿಕ್ಕಿ ಹೊಡೆದಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
Crime – ಆರೋಪಿಯ ಫೇಸ್‌ಬುಕ್ ಲೈವ್
ಪರಾರಿಯಾದ ಬಳಿಕ ಶಾಸಕ ಹರ್ಮಿತ್ ಸಿಂಗ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಬಂದು, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ದೆಹಲಿಯಲ್ಲಿರುವ ಆಪ್ ನಾಯಕತ್ವವು ಅಕ್ರಮವಾಗಿ ಪಂಜಾಬ್ ಸರ್ಕಾರವನ್ನು ನಿಯಂತ್ರಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಹರ್ಮಿತ್ ಸಿಂಗ್‌ರ ಈ ಆರೋಪ ಪಂಜಾಬ್ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಪರಾರಿಯಾದ ಶಾಸಕನನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.