Friday, November 22, 2024

Crime News: ಅಪ್ರಾಪ್ತ ಮಕ್ಕಳ ಮರ್ಮಾಂಗದ ಮೇಲೆ ಚಾಕು ಬಿಸಿ ಮಾಡಿ ಇಟ್ಟು ಕ್ರೌರ್ಯ ಮೆರೆದ ಮಲತಾಯಿ….!

Crime News- ತಾಯಿಗೆ ದೇವರ ಸ್ಥಾನವನ್ನು ನೀಡಿ ಗೌರವಿಸಲಾಗುತ್ತದೆ. ಆದರೆ ಕೆಲವು ತಾಯಂದಿರಿಂದ ತಾಯಿ ಎಂಬ ಪದಕ್ಕೆ ಕಳಂಕ ತಂದುಕೊಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನಿಬ್ಬರು ಮಲ ಮಕ್ಕಳ ಮೇಲೆ 27 ವರ್ಷದ ಮಹಿಳೆಯೊಬ್ಬರು ಕ್ರೌರ್ಯವೆಸಗಿದ್ದಾಳೆ. ಅಪ್ರಾಪ್ತ ಮಲ (Crime News) ಮಕ್ಕಳ ಖಾಸಗಿ ಭಾಗಕ್ಕೆ ಚಾಕು ಬಿಸಿ ಮಾಡಿ ಇಟ್ಟು ಸುಡುವ ಮೂಲಕ ಕ್ರೌರ್ಯ ಮೆರೆದಿದ್ದಾಳೆ. ಈ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ (Crime News) ವಸೈನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದ ವಸೈ ಪ್ರದೇಶದ ಮಹಿಳೆ ಈ ಕ್ರೌರ್ಯಕ್ಕೆ ಮುಂದಾಗಿದ್ದಾಳೆ. (Crime News) ದೌರ್ಜನ್ಯಕ್ಕೆ ಒಳಗಾದ ಈ ಅಪ್ರಾಪ್ತ ಮಕ್ಕಳ ತಂದೆ ತಾಯಿಗೆ ವಿಚ್ಚೇದನವಾಗಿತ್ತು. (Crime News) ಈ ಹಿನ್ನೆಲೆಯಲ್ಲಿ ಈ ದಂಪತಿ ಏಳು ಹಾಗೂ ಎಂಟು ವರ್ಷದ ಗಂಡು ಮಕ್ಕಳು ತಂದೆಯ ಜೊತೆಗೆ ವಾಸ ಮಾಡುತ್ತಿದ್ದರು. ಕಳೆದ ವರ್ಷ ತಂದೆ ಮತ್ತೆ ಮದುವೆಯಾಗಿದ್ದರು. ಪೋಷಕರೇ ನಿಶ್ಚಿಯಿಸಿದ ಈ ಮದುವೆಯಾಗಿತ್ತು. ಜೊತೆಗೆ ಮಹಿಳೆಗೆ (Crime News) ತಾನು ಮದುವೆಯಾಗುವ ವ್ಯಕ್ತಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬ ಅರಿವೂ ಸಹ ಇತ್ತು. ಇನ್ನೂ ತಂದೆ ಕೊರಿಯರ್‍ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತ ಹೆಚ್ಚಾಗಿ ಪ್ರಯಾಣದಲ್ಲೇ ಇರುತ್ತಿದ್ದ. ಈ ಕಾರಣದಿಂದ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ (Crime News) ದೃಷ್ಟಿಯಿಂದ ಎರಡನೇ ಮದುವೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Stepmom assault kids

ಇನ್ನೂ ಇತ್ತೀಚಿಗೆ ವಾರಾಂತ್ಯದ ದಿನಗಳಂದು ತಂದೆ (Crime News) ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದ. ಈ ಸಮಯದಲ್ಲಿ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿದ್ದಾನೆ. ಮಕ್ಕಳ ದೇಹದಲ್ಲಿ ಆದಂತಹ ಗಾಯದ ಗುರುತುಗಳನ್ನು ಸಹ ಗಮನಿಸಿದ್ದಾರೆ. (Crime News) ಮಕ್ಕಳ ದೇಹದ ಮೇಲಿನ ಗಾಯಗಳ ಬಗ್ಗೆ ಮಕ್ಕಳನ್ನು ವಿಚಾರಿಸಿದ್ದಾನೆ. ಈ ವೇಳೆ ಮಲತಾಯಿಯ ಕ್ರೌರ್ಯದ ಬಗ್ಗೆ ತಂದೆಯ ಬಳಿಕ ಹೇಳಿಕೊಂಡಿದ್ದಾರೆ. (Crime News) ಮದುವೆಯಾದಾಗಿನಿಂದ ಮಲತಾಯಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಳು. ಕಳೆದ ಜೂನ್ ನಲ್ಲಿ ಚಾಕುವನ್ನು ಬಿಸಿ ಮಾಡಿ ಮಕ್ಕಳ ಮರ್ಮಾಂಗದ ಮೇಲೆ ಇಟ್ಟು (Crime News) ಅವರನ್ನು ಕ್ರೂರವಾಗಿ ಶಿಕ್ಷಿಸುತ್ತಿದ್ದಳು. ಮನೆಯ ಕೆಲಸಗಳನ್ನು ಮಕ್ಕಳೇ ನಿಯಮಿತ ಸಮಯದಲ್ಲಿ ಮಾಡದೇ ಇದ್ದಾಗ ಈ ರೀತಿ ಬೆಂಕಿಯಲ್ಲಿ ಕಾಯಿಸಿದ ಚಾಕುವಿನಿಂದ ಬರೆ (Crime News) ಎಳೆಯುತ್ತಿದ್ದಳಂತೆ.

ಇಡೀ ಮನೆಯನ್ನು ಮಕ್ಕಳ (Crime News) ಕೈಯಲ್ಲೇ ಸ್ವಚ್ಚಗೊಳಿಸುತ್ತಿದ್ದಳಂತೆ. ಇದರ ಜೊತೆಗೆ ಮನೆಯ ಪಾತ್ರೆಗಳು, ಬಟ್ಟೆಗಳನ್ನು ಮಕ್ಕಳ ಕೈಯಲ್ಲಿ ತೊಳೆಸುತ್ತಿದ್ದಳಂತೆ. ಶಾಲೆಗೆ ಹೋಗಿ ಬಂದ ಬಳಿಕ ಮನೆಯ (Crime News) ಎಲ್ಲಾ ಕೆಲಸ ನಮ್ಮ ಕೈಯಲ್ಲೇ ಮಾಡಿಸುತ್ತಿದ್ದಳು. ಇದನ್ನೆಲ್ಲಾ ಯಾರ ಬಳಿಯಾದರೂ ಹೇಳಿದರೆ ಮತಷ್ಟು ಕಿರುಕುಳ ನೀಡುವುದಾಗಿ ಮಕ್ಕಳನ್ನು ಬೆದರಿಸಿದ್ದಳು. ಈ ಭಯದಿಂದಲೇ ಮಕ್ಕಳು ಯಾರ ಬಳಿ ಹೇಳಿಕೊಂಡಿರಲಿಲ್ಲವಂತೆ. (Crime News) ಇದೀಗ ತಮ್ಮ ತಂದೆಯ ಬಳಿ ಎಲ್ಲಾ ವಿಚಾರವನ್ನು ಭಯದಿಂದಲೇ ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಮಹಿಳೆಯನ್ನು ಬಾಲನ್ಯಾಯ ಕಾಯ್ದೆಯಡಿ ಬಂಧನ ಮಾಡಿದ್ದು, ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ (Crime News)  ಎಂದು ತಿಳಿದುಬಂದಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!