Sunday, October 26, 2025
HomeNationalCrime News: ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ, ಪೊಲೀಸರಿಗೆ ಪಾಪಿಯ ಕ್ರೂರತ್ವದ ವಿಡಿಯೋ ತೋರಿಸಿ...

Crime News: ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ, ಪೊಲೀಸರಿಗೆ ಪಾಪಿಯ ಕ್ರೂರತ್ವದ ವಿಡಿಯೋ ತೋರಿಸಿ ನೋವು ತೋಡಿಕೊಂಡ ಸಂತ್ರಸ್ಥೆ….!

ಕಾನೂನಿನಡಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆಯಿದ್ದರೂ ಸಹ ಇನ್ನೂ ಅಂತಹ ಪ್ರಕರಣಗಳು ನಡೆಯುತ್ತಿವೆ. ಮತಷ್ಟು ಕಾನೂನು ಕಠಿಣವಾಗಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ಇದೀಗ ಮುಂಬೈನಲ್ಲಿ ನಾಚಿಕೆಗೇಡಿನ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸ್ವಂತ ತಂದೆಯೇ ಕಳೆದ (Crime News) ಐದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಹೇಯ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಪೊಲೀಸರಿಗೆ ತೋರಿಸಿ ನೋವು ತೋಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಮುಂಬೈನಲ್ಲಿ ಸ್ವಂತ ತಂದೆಯೇ ಸ್ವಂತ ಮಗಳ ಮೇಲೆ ನಿರಂತರವಾಗಿ ಕಳೆದ ಐದು ವರ್ಷಗಳಿಂದ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ. ಸ್ವಂತ ತಂದೆಯ ಈ (Crime News) ಕ್ರೂರ ವರ್ತನೆಗೆ ಬೇಸತ್ತ 17 ವರ್ಷದ ಸಂತ್ರಸ್ತೆ ಮನೆ ಬಿಟ್ಟು ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕಾಮುಕ ಪಾಪಿ ತಂದೆ ಪರಾರಿಯಾಗಿದ್ದಾನೆಂದು ಬಾಲಕಿಯ ಮನೆಯವರು ತಿಳಿಸಿದ್ದಾರೆ. ಬಳಿಕ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದಾಗ ಸತ್ಯಾಂಸ ಹೊರಬಂದಿದೆ. ಸಂತ್ರಸ್ತ ಬಾಲಕಿಗೆ 12 ವರ್ಷ ವಯಸ್ಸಾದಾಗಿನಿಂತ ತಂದೆಯೇ ತನ್ನ (Crime News) ಕಾಮತೃಷೆಗೆ ಮಗಳನ್ನು ಬಳಸಿಕೊಳ್ಳುತ್ತಿದ್ದ ಎಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ತಿಳಿಸಿದ್ದಾರೆ.

Father Assault own daughter 1

ಇತ್ತಿಚಿಗಷ್ಟೆ ಬಾಲಕಿ ಮನೆಯನ್ನು ಬಿಟ್ಟು ಹೋಗಿದ್ದಳು. ಬಾಲಕಿಯನ್ನು (Crime News) ಪತ್ತೆ ಮಾಡಿ ಆಕೆಯ ಹೇಳಿಕೆ ದಾಖಲಿಸಿಕೊಂಡಾಗ ತಂದೆಯ ಪಾಪ ಕೃತ್ಯದ ಬಗ್ಗೆ ಪೊಲೀಸರಿಗೆ ಹೇಳಿದ್ದಾಳೆ. ಸಂತ್ರಸ್ತೆಯ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಬಳಿಕ ಸಂತ್ರಸ್ತೆ ತನ್ನ ಮೊಬೈಲ್ ನಲ್ಲಿ ತಂದೆಯ ಪಾಪ ಕೃತ್ಯದ ವಿಡಿಯೋ ತೋರಿಸಿ (Crime News) ನೋವು ತೋಡಿಕೊಂಡಿದ್ದಾರೆ. ತನ್ನ ತಾಯಿಯ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಇಬ್ಬರು ಅಣ್ಣಂದಿರಿದ್ದಾರೆ. ಆದರೆ (Crime News) ಕಾಮುಕ ತಂದೆ ಸಂತ್ರಸ್ತೆಯ ಸಹೋದರರಿಗೆ ಥಳಿಸುವ ಭಯದ ಕಾರಣದಿಂದ ಈ ವಿಚಾರವನ್ನು ಸಹೋದರರಿಗೆ ಹೇಳಿರಲಿಲ್ಲ ಎಂದು ಹೇಳಲಾಗಿದೆ.

ಇನ್ನೂ ಈ ಕುರಿತು ಪೊಲೀಸರು ತನಿಖೆಯನ್ನು ಮತಷ್ಟು ಚುರುಕುಗೊಳಿಸಿ, ಆರೋಪಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಂದೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. 46 ವರ್ಷದ ಆರೋಪಿ ತಂದೆ ಮುಂಬೈನ ಮಹಾಲಕ್ಷ್ಮೀ ರೇಸ್ ಕೋರ್ಸ್‌ನಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ತಂದೆಗೆ ಕಠಿಣ ಶಿಕ್ಷೆಯಾಗಬೇಕೆಂದು ಸಂತ್ರಸ್ತೆ ಒತ್ತಾಯಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular