Crime – ಪ್ರತಿ ಹೆಣ್ಣು ಮಗುವಿಗೆ ತನ್ನ ತಂದೆಯೇ ಮೊದಲ ಹಿರೋ ಆಗಿರುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ತಂದೆಯೇ ವಿಲನ್ ಆಗಿರುತ್ತಾನೆ ಎನ್ನಲಾಗುತ್ತದೆ. ಇದೀಗ ಉತ್ತರಪ್ರದೇಶದಲ್ಲಿ (Uttar Pradesh) ನಡೆದಂತಹ ಈ ಘಟನೆ ಅದಕ್ಕೆ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ತನ್ನ 11 ವರ್ಷದ ಅಪ್ರಾಪ್ತ ಮಗಳ ಮೇಲೆ ಪಾಪಿ ತಂದೆಯೋರ್ವ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ (Uttar Pradesh) ಮಹಾರಾಜ್ ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಗುರುವಾರ ರಾತ್ರಿ ಸಂತ್ರಸ್ತೆಯ ತಾಯಿ ತನ್ನ ತವರು ಮನೆಗೆ ಹೋಗಿದ್ದಳಂತೆ. ಈ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಸತ್ಯೇಂದ್ರ ಕುಮಾರ್ ಮಾಹಿತಿ ನೀಡಿದ್ದು, ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ, ಅದನ್ನು ಯಾರಿಗಾದರೂ ಹೇಳಿದರೇ ವಿಷ ನೀಡಿ ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದ್ದನಂತೆ. ಆದರೆ ತನ್ನ ತಾಯಿ ತವರು ಮನೆಯಿಂದ ಬಂದ ಬಳಿಕ ಈ ನೀಚ ಕೃತ್ಯದ ಬಗ್ಗೆ ತಾಯಿಗೆ ಹೇಳಿದ್ದಾಳೆ. ಬಳಿಕ ಸಂತ್ರಸ್ತ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರಿನಂತೆ ಆರೋಪಿ ತಂದೆಯನ್ನು ಬಂಧಿಸಿದ್ದು, ಬಾಲಕೀಯನ್ನು ವೈದ್ಯಕೀಯ ಪರೀಕ್ಷೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಕೇರಳದಲ್ಲಿ (Kerala) ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ, 42 ವರ್ಷದ ವ್ಯಕ್ತಿಯ ಜೊತೆ ಶವವಾಗಿ ಪತ್ತೆ?

ಕೇರಳದ (Kerala) ಪೈವಳಿಕೆಯಲ್ಲಿ ಕಳೆದ 3 ವಾರಗಳ ಹಿಂದೆ ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿಯ 42 ವರ್ಷದ ವ್ಯಕ್ತಿಯ ಜೊತೆ ಶವವಾಗಿ ಪತ್ತೆಯಾಗಿದ್ದಾಳೆ. ಭಾನುವಾರ ಕೇರಳದ ಪೈವಳಿಕೆ ಗ್ರಾಮದ ಬಾಲಕಿ ಕಳೆದ ಫೆ.11 ರಂದು ನಾಪತ್ತೆಯಾಗಿದ್ದಳು. ಆಕೆಯ ಪೋಷಕರ ದೂರಿನಂತೆ ಪೊಲೀಸರು ಬಾಲಕಿತ ಪತ್ತೆಗೆ ಮುಂದಾಗಿದ್ದರು. ಜೊತೆಗೆ ಬಾಲಕಿಯ ಪೋಷಕರು ನೆರೆ ಮನೆಯ ಪ್ರದೀಪ್ ಎಂಬ ವ್ಯಕ್ತಿಯ ವಿರುದ್ದ ಆರೋಪಗಳನ್ನು ಮಾಡಿದ್ದರಂತೆ. (Crime News) ಅದರಂತೆ ಪೊಲೀಸರು ತನಿಖೆಗೆ ಮುಂದಾಗಿದ್ದರು.
ಇನ್ನೂ ಇಬ್ಬರೂ ನಾಪತ್ತೆಯಾದಾಗಿನಿಂದ ಇಬ್ಬರ ಮೊಬೈಲ್ ಪೋನ್ ಗಳು ಸ್ವಿಚ್ ಆಫ್ ಆಗಿದೆ. ಬಳಿಕ ಪೊಲೀಸರು ತಂಡಗಳನ್ನು ಮಾಡಿಕೊಂಡು ಇಬ್ಬರನ್ನೂ ವ್ಯಾಪಕವಾಗಿ ಹುಡುಕಾಡಿದ್ದಾರೆ. ನೆರೆಮನೆಯ ಪ್ರದೀಪ್ ಹಾಗೂ ಬಾಲಕಿಯ ಮೃತದೇಹವು ಆಕೆಯ ಮನೆಯ ಸಮೀಪವಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾಪತ್ತೆ ಆದಾಗಿನಿಂದ ಇಬ್ಬರ ಮೊಬೈಲ್ ಫೋನ್‌ಗಳು ಸ್ವಿಚ್‌ಆಫ್ ಆಗಿದ್ದವು. ಭಾನುವಾರ 52 ಮಂದಿಯಿದ್ದ ಪೊಲೀಸ್ ತಂಡಗಳು ವ್ಯಾಪಕವಾಗಿ ಹುಡುಕಾಟ ನಡೆಸಿದವು. ನೆರೆಮನೆಯ ಪ್ರದೀಪ್ ಹಾಗೂ ಬಾಲಕಿಯ ಮೃತದೇಹವು ಆಕೆಯ ಮನೆಯ ಸಮೀಪವಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.