Crime – ಮಾನವ ಸಂಬಂಧಗಳಲ್ಲಿ ನಂಬಿಕೆ ಮತ್ತು ಪ್ರೀತಿ ಅಡಿಪಾಯ. ಆದರೆ, ಕೆಲವು ಘಟನೆಗಳು ಆ ಅಡಿಪಾಯವನ್ನು ಸಂಪೂರ್ಣವಾಗಿ ಅಲುಗಾಡಿಸುತ್ತವೆ. ಹೈದರಾಬಾದ್ ನ ಮೆಡಿಪಲ್ಲಿಯಲ್ಲಿ ನಡೆದಿರುವ ಘಟನೆಯೊಂದು ಅಂತಹದ್ದೇ. ಒಬ್ಬ ಪತಿ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದಿದ್ದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿದ್ದಾನೆ. ಈ ಕ್ರೂರ (Crime) ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Crime – ಬೋಡುಪ್ಪಲ್‌ನಲ್ಲಿ ದಂಪತಿಯ ವಾಸ
ಹತ್ಯೆಯಾದ ಮಹಿಳೆಯನ್ನು ಸ್ವಾತಿ ಅಲಿಯಾಸ್ ಜ್ಯೋತಿ (22) ಎಂದು ಗುರುತಿಸಲಾಗಿದೆ. ಆಕೆ ಪತಿ ಮಹೇಂದರ್ ರೆಡ್ಡಿ ಜೊತೆಗೆ ಮೆಡಿಪಲ್ಲಿಯ ಬೋಡುಪ್ಪಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಬ್ಬರೂ ಮೂಲತಃ ವಿಕಾರಾಬಾದ್ ಜಿಲ್ಲೆಯವರು. ಒಂದು ತಿಂಗಳ ಹಿಂದೆ ಈ ಜೋಡಿ ಈ ಮನೆಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ದಿನ ಮನೆಯೊಳಗೆ ದೊಡ್ಡ ಶಬ್ದಗಳು ಕೇಳಿಬಂದಿದ್ದವು. ಅಕ್ಕಪಕ್ಕದ ಮನೆಯವರು (Crime) ಎಚ್ಚೆತ್ತ ನಂತರ, ಮನೆಯೊಳಗೆ ಹೋಗಿ ನೋಡಿದಾಗ ಸ್ವಾತಿಯ ಶವ ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ಇಟ್ಟಿರುವುದು ಕಂಡುಬಂದಿದೆ. ಈ ದೃಶ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
Crime – ಪತಿಯೇ ಹಂತಕನೆಂದು ಶಂಕೆ
ಪೊಲೀಸರು ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಧಾವಿಸಿ, ಮಹೇಂದರ್ ರೆಡ್ಡಿಯನ್ನ ವಶಕ್ಕೆ ಪಡೆದಿದ್ದಾರೆ. ಪತಿಯೇ ಕೊಲೆ ಮಾಡಿ ಶವವನ್ನು ವಿಲೇವಾರಿ ಮಾಡಲು ತುಂಡು ತುಂಡಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ದುರ್ಘಟನೆಯ ತನಿಖೆ ಮುಂದುವರೆದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. Read this also : ತೆಲಂಗಾಣದಲ್ಲಿ ವಿಚಿತ್ರ ಘಟನೆ: ಟಿವಿ ಸೀರಿಯಲ್‌ಗಾಗಿ ಗಂಡನೊಂದಿಗೆ ಜಗಳ, ವಿಷ ಸೇವಿಸಿದ ಹೆಂಡತಿ
ಗ್ರೇಟರ್ ನೋಯ್ಡಾದಲ್ಲಿ ಇನ್ನೊಂದು ದುರಂತ
ಇದೇ ರೀತಿಯ ಮತ್ತೊಂದು ದುರ್ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದು, ತಾಯಿ-ಮಗನನ್ನು ತಂದೆ ಮತ್ತು ಅಜ್ಜಿ ಸೇರಿ ಕೊಲೆ ಮಾಡಿದ್ದಾರೆಂದು 6 ವರ್ಷದ ಬಾಲಕ ಹೇಳಿಕೆ ನೀಡಿದ್ದಾನೆ. ಈ ದುರಂತಕ್ಕೆ ಸಂಬಂಧಿಸಿದಂತೆ, ಬಾಲಕನ ತಾಯಿ (ನಿಕ್ಕಿ) ಮೇಲೆ ಆಸಿಡ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಬಾಲಕ ಪೊಲೀಸರ ಬಳಿ ಹೇಳಿದ್ದಾನೆ. ಮೃತರ ಸಹೋದರಿ ಕಾಂಚನ್ ಹೇಳುವಂತೆ, ವಿಪಿನ್ ಹಾಗೂ ಆತನ ಮನೆಯವರು 36 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.