Crime – ಅತ್ತೆ-ಮಾವ ಎಂದರೆ ತಂದೆ-ತಾಯಿಗೆ ಸಮಾನ. ಅದರಲ್ಲೂ ಸೊಸೆಯನ್ನು ಮಗಳಂತೆ ನೋಡಿಕೊಳ್ಳುವುದು ನಮ್ಮ ಸಂಸ್ಕೃತಿ. ಆದರೆ, ಕೆಲವರು ಈ ಸಂಬಂಧಗಳ ಗೌರವವನ್ನೇ ಮಣ್ಣುಪಾಲು ಮಾಡುತ್ತಾರೆ. ಇಂತಹದ್ದೇ ಒಂದು ಅಘಾತಕಾರಿ ಮತ್ತು ಲಜ್ಜೆಗೆಟ್ಟ ಘಟನೆ ಬೆಂಗಳೂರಿನ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ.

ನಿವೃತ್ತ ಡಿವೈಎಸ್‌ಪಿ ಅವರ ಪುತ್ರಿ ಅನಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ, ತನ್ನ ಗಂಡ ಮತ್ತು ಇಡೀ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ವರದಕ್ಷಿಣೆ ಕಿರುಕುಳದ ಜೊತೆಗೆ ಮಾವನಿಂದ ತಮಗಾದ ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಬೇಡಿಕೆಗಳ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
Crime – ಮದುವೆಯಾದ 15 ದಿನಕ್ಕೆ ಶುರುವಾಯ್ತು ಹಣದ ಕಿರುಕುಳ
ಅನಿತಾ ಅವರು ಡಾ. ಗೋವರ್ಧನ್ ಎಂಬುವವರನ್ನು ನವೆಂಬರ್ 2, 2023 ರಂದು ವಿವಾಹವಾಗಿದ್ದರು. ಅನಿತಾ ಅವರ ತಂದೆ ಮದುವೆಗಾಗಿ ಚಿನ್ನಾಭರಣ ಹಾಗೂ ಇನ್ನಿತರ ಖರ್ಚುಗಳಿಗಾಗಿ ಸುಮಾರು ₹25 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ ಮದುವೆಯಾದ ಕೇವಲ 15 ದಿನಗಳ ನಂತರ, ಗಂಡ ಡಾ. ಗೋವರ್ಧನ್ ಕಿರುಕುಳ ನೀಡಲು ಶುರು ಮಾಡಿದ್ದಾರೆ ಎಂದು ಅನಿತಾ ದೂರಿನಲ್ಲಿ ತಿಳಿಸಿದ್ದಾರೆ.
ಗೋವರ್ಧನ್ ಅವರಿಗೆ ಅನಿತಾ ಅವರ ತಂದೆಯ ಆಸ್ತಿ ಮತ್ತು ಬಾಡಿಗೆ ಆದಾಯದಲ್ಲಿ ಪಾಲು ಬೇಕಿತ್ತು! “ನೀನು ನಿನ್ನ ತಂದೆಯ ಆಸ್ತಿ, ಹಣ ತಂದರೆ, ಬೇರೆಯವರ ಕೈಕೆಳಗೆ ಕೆಲಸ ಮಾಡುವುದನ್ನು ಬಿಟ್ಟು ನಾವಿಬ್ಬರೂ ಸ್ವಂತ ನರ್ಸಿಂಗ್ ಹೋಂ ಶುರುಮಾಡಬಹುದು” ಎಂದು ಒತ್ತಾಯಿಸುತ್ತಿದ್ದರು ಎಂದು ಅನಿತಾ ಆರೋಪಿಸಿದ್ದಾರೆ. ಇದಕ್ಕಾಗಿ ಪತಿ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು.
Crime – “ಅರೆಬರೆ ಬಟ್ಟೆ ಹಾಕೊಂಡು ಬಾ, ಗಂಡನ ಬದಲು ನಾನು ಬರುತ್ತೇನೆ…”
ಪತಿಯ ಕಿರುಕುಳಕ್ಕೆ ಇನ್ನೊಂದು ಭಯಾನಕ ಆಯಾಮ ಸೇರಿದ್ದು, ಅದು ಮಾವನಿಂದ. ನಿವೃತ್ತ ಪ್ರೊಫೆಸರ್ ನಾಗರಾಜು ಅವರು ಅನಿತಾಗೆ ಲೈಂಗಿಕ ಬೇಡಿಕೆ ಇಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಮಾವ ನಾಗರಾಜು ಅವರು ಸೊಸೆಯೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದರು ಮತ್ತು ದೇಹವನ್ನು ಮುಟ್ಟಿ ದೈಹಿಕ ದೌರ್ಜನ್ಯ ಎಸಗುತ್ತಿದ್ದರು ಎನ್ನಲಾಗಿದೆ. ಒಂದು ದಿನ ನಾಗರಾಜು ಅವರು, “ನಿಮ್ಮ ಮದುವೆಯಾಗಿ ಕೆಲವು ತಿಂಗಳುಗಳೇ ಕಳೆದಿವೆ, ಯಾಕೆ ಇನ್ನು ಮಕ್ಕಳಾಗಿಲ್ಲ? ಸಂಸಾರವನ್ನು ಸರಿಯಾಗಿ ಮಾಡುತ್ತಿಲ್ಲವೇ? ಇಲ್ಲದಿದ್ದರೆ, ನಿಮ್ಮ ಗಂಡನ ಬದಲು ನಾನು ಬರುತ್ತೇನೆ! ಮಾಡರ್ನ್ ಹುಡುಗಿಯಂತೆ ಅರೆಬರೆ ಬಟ್ಟೆ ಧರಿಸಿ ನನ್ನ ಮುಂದೆ ಬಾ” ಎಂದು ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ. Read this also : ಗಂಡನ ಜೂಜಿಗೆ ಬಲಿಯಾದ ಹೆಂಡತಿ : ಪಣವಾಗಿಟ್ಟು ಸೋತ ಮೇಲೆ 8 ಜನರ ಸಾಮೂಹಿಕ ಅ***ಚಾರ, ಉತ್ತರಪ್ರದೇಶದಲ್ಲಿ ನಡೆದ ಘಟನೆ…!

Crime – ಅತ್ತೆಯ ಬಳಿ ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ
ಈ ಬಗ್ಗೆ ಅನಿತಾ ತಮ್ಮ ಗಂಡ ಮತ್ತು ಅತ್ತೆ ಬಳಿ ಹೇಳಿಕೊಂಡಾಗ, ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸದೆ, “ಇದು ಮನೆಯ ವಿಷಯ. ನೀನೇ ಹೊಂದಾಣಿಕೆ ಮಾಡಿಕೊಳ್ಳಬೇಕು” ಎಂದು ಹೇಳಿ ಮಾವನಿಗೆ ಬೆಂಬಲ ನೀಡಿದ್ದಾರೆ. ಪತಿ, ಮಾವ ಮತ್ತು ಅತ್ತೆಯ ಆರ್ಥಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತ ಅನಿತಾ ಕೊನೆಗೂ ಧೈರ್ಯ ಮಾಡಿ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಇಡೀ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.
ಸದ್ಯ, ಪೊಲೀಸರು ಪತಿ ಡಾ. ಗೋವರ್ಧನ್, ಮಾವ ಪ್ರೊಫೆಸರ್ ನಾಗರಾಜು ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಈ ಪ್ರಕರಣ ಸಮಾಜದಲ್ಲಿನ ಸಂಬಂಧಗಳ ನಂಬಿಕೆಗೆ ಮತ್ತೊಂದು ದೊಡ್ಡ ಆಘಾತ ನೀಡಿದೆ.
