Crime – ಮದುವೆ ಅಂದರೆ ಹೊಸ ಜೀವನಕ್ಕೆ ಕಾಲಿಡೋ ಸಂಭ್ರಮ. ಅದರಲ್ಲೂ ಎರಡು ಕುಟುಂಬಗಳ ವಿರೋಧವನ್ನೂ ಎದುರಿಸಿ ಪ್ರೀತಿಸಿದ ಜೋಡಿ ಒಂದು ಸೇರುತ್ತಿದೆ ಅಂದರೆ, ಅದು ನಿಜಕ್ಕೂ ಪ್ರೀತಿಯ ಗೆಲುವು. ಆದರೆ, ಗುಜರಾತ್ ನ ಭಾವನಗರದಲ್ಲಿ ನಡೆದ ಒಂದು ಘಟನೆ ಪ್ರೀತಿಯ ಗೆಲುವು ದುರಂತದ ಅಂತ್ಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಮದುವೆಗೆ ಇನ್ನು ಕೇವಲ ಕೆಲವೇ ಗಂಟೆಗಳು ಬಾಕಿ ಇದ್ದವು. ಇಷ್ಟು ದಿನ ಒಂದು ಸೂರಿನಡಿ ಸಂತೋಷವಾಗಿದ್ದ ಭಾವೀ ದಂಪತಿ ಕೊನೆಯ ಕ್ಷಣದಲ್ಲಿ ಒಂದು ಕ್ಷುಲ್ಲಕ ಕಾರಣಕ್ಕೆ ಜಗಳ ಶುರುಮಾಡಿ, ಕೊನೆಗೆ ವರನೇ ವಧುವನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಪ್ರೀತಿಯಲ್ಲಿ ಅಂಡರ್‌ಸ್ಟಾಂಡಿಂಗ್ ಎಷ್ಟರಮಟ್ಟಿಗಿತ್ತು ಅನ್ನೋದಕ್ಕೆ ಈ ದಾರುಣ ಘಟನೆ ಕೈಗನ್ನಡಿ ಹಿಡಿದಿದೆ.
Crime – ಸೀರೆ ಜಗಳದ ಹಿಂದೆ ಅಡಗಿದ ದುರಂತವೇನು?
ಕಳೆದ ಒಂದೂವರೆ ವರ್ಷದಿಂದ ಲೀವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯೇ ಸಾಜನ್ ಭರೈಯ್ಯ ಹಾಗೂ ಸೋನಿ ಹಿಮ್ಮತ್ ರಾಥೋಡ್. ಅವರ ಪ್ರೀತಿಗೆ ಎರಡೂ ಕುಟುಂಬಗಳಿಂದ ಭಾರಿ ವಿರೋಧವಿತ್ತು. ಇಷ್ಟೆಲ್ಲಾ ಸವಾಲುಗಳನ್ನು ಮೀರಿ ಇತ್ತೀಚೆಗೆ ನಿಶ್ಚಿತಾರ್ಥ ಮುಗಿಸಿದ್ದ ಈ ಜೋಡಿ, ಶನಿವಾರ (ನವೆಂಬರ್ 15) ಸಂಜೆ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲು ಸಿದ್ಧವಾಗಿತ್ತು.
ಮದುವೆ ಮಂಟಪ, ಊಟ, ಲಗ್ನಪತ್ರಿಕೆ ಎಲ್ಲವೂ ರೆಡಿ ಆಗಿದ್ದವು. ಆದರೆ, ಸಂಜೆ ಮದುವೆ ಮುಹೂರ್ತ ಸಮೀಪಿಸುತ್ತಿದ್ದಂತೆ ಈ ಇಬ್ಬರ ನಡುವೆ ಜಗಳ ಶುರುವಾಗಿದೆ. ಮೂಲಗಳ ಪ್ರಕಾರ, ಜಗಳ ಶುರುವಾಗಿದ್ದು ಸೀರೆಯ ವಿಚಾರದಲ್ಲಿ! ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಇದರ ಜೊತೆ ಹಣಕಾಸಿನ ವಿಚಾರಗಳೂ ಸೇರಿಕೊಂಡು ಪರಿಸ್ಥಿತಿ ಕೈಮೀರಿ ಹೋಗಿದೆ.
Crime – ಭಾವಿ ಪತ್ನಿಯ ಮೇಲೆ ಅಮಾನವೀಯ ಹಲ್ಲೆ!
ಜಗಳ ತೀವ್ರಗೊಳ್ಳುತ್ತಿದ್ದಂತೆ, ವರ ಸಾಜನ್ ಭರೈಯ್ಯ ತನ್ನ ಕೋಪವನ್ನು ನಿಯಂತ್ರಿಸಲಾಗದೆ, ಕೈಗೆ ಸಿಕ್ಕ ಕಬ್ಬಿಣದ ರಾಡ್‌ನಿಂದ ಸೋನಿಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಈ ಭೀಕರ ಹಲ್ಲೆಯಿಂದಾಗಿ ವಧು ಸೋನಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಇಷ್ಟಕ್ಕೆ ನಿಲ್ಲದ ಸಾಜನ್, ಮನೆಯೊಳಗಿನ ಟಿವಿ ಸೇರಿದಂತೆ ಇತರ ವಸ್ತುಗಳನ್ನು ಪುಡಿಪುಡಿ ಮಾಡಿ ಹಾಹಾಕಾರ ಸೃಷ್ಟಿಸಿದ್ದಾನೆ. ಬಳಿಕ ತನ್ನ ಭಾವಿ ಪತ್ನಿಯ ಮೃತದೇಹವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. Read this also : ಡೇಟಿಂಗ್ ಆ್ಯಪ್ನಲ್ಲಿ ‘ಮಾಯಾಂಗಿನಿ’ ಗಾಳ : ₹1.29 ಕೋಟಿ ಕಳೆದುಕೊಂಡ ಬೆಂಗಳೂರಿನ ಅಮಾಯಕರು..!
Crime – ಪೊಲೀಸ್ ತನಿಖೆ ಆರಂಭ: ಆರೋಪಿಗಾಗಿ ಹುಡುಕಾಟ
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸೋನಿಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಆರೋಪಿ ಸಾಜನ್ ಭರೈಯ್ಯಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಅಚ್ಚರಿ ಎಂದರೆ, ಸಾಜನ್ ಈ ಹಿಂದೆಯೂ ಸ್ಥಳೀಯರೊಂದಿಗೆ ಜಗಳ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ದೂರುಗಳನ್ನು ಎದುರಿಸುತ್ತಿದ್ದ. ಈಗ ಭಾವಿ ಪತ್ನಿಯ ಹತ್ಯೆಗಾಗಿ ಆತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

