ಜೀವ ಉಳಿಸಬೇಕಾದ ವೈದ್ಯಕೀಯ ಚಿಕಿತ್ಸೆಯೇ ಮುಳುವಾದರೆ ಹೇಗೆ? ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂತದ್ದೇ ಒಂದು ಆಘಾತಕಾರಿ ಘಟನೆ ನಡೆದಿದೆ. ಪ್ರೈವೇಟ್ ಆಸ್ಪತ್ರೆಯ ಸಿಬ್ಬಂದಿ ವೃದ್ಧೆಯೊಬ್ಬರಿಗೆ ಸಿಪಿಆರ್ (CPR) ನೀಡುವ ಭರದಲ್ಲಿ ಪಕ್ಕೇಲುಬುಗಳನ್ನೇ ಮುರಿದು ಹಾಕಿರುವ ಘಟನೆ ವರದಿಯಾಗಿದ್ದು, ಅಂತಿಮವಾಗಿ ಆ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

CPR Incident – ಅಸಲಿಗೆ ಅಲ್ಲಿ ನಡೆದಿದ್ದೇನು?
ಕಣ್ಣೌಜ್‌ನ ಗುರ್ಸಹೈಗಂಜ್ ಪ್ರದೇಶದ ನಿವಾಸಿಯಾಗಿದ್ದ 59 ವರ್ಷದ ಸುಧಾ ದುಬೆ ಎಂಬುವವರು ಸೋಮವಾರ (ನವೆಂಬರ್ 24) ಅಸ್ವಸ್ಥರಾಗಿದ್ದರು. ಕುಟುಂಬಸ್ಥರು ಗಾಬರಿಯಿಂದ ಅವರನ್ನು ಕಾನ್ಪುರದ ಕಲ್ಯಾಣ್‌ಪುರ ಕೈಲಾಶ್ ವಿಹಾರ್ ಪ್ರದೇಶದಲ್ಲಿರುವ ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಿಸಿದ್ದರು.
ಮಂಗಳವಾರ ಬೆಳಿಗ್ಗೆ ಸುಧಾ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ, ಆಸ್ಪತ್ರೆಯ ಸಿಬ್ಬಂದಿ ಜೀವ ಉಳಿಸಲು ಸಿಪಿಆರ್ (CPR) ನೀಡಲು ಪ್ರಾರಂಭಿಸಿದರು. ಆದರೆ, ಈ ವೇಳೆ ಎದೆಯ ಭಾಗಕ್ಕೆ ಅತಿಯಾದ ಒತ್ತಡ ಬಿದ್ದ ಪರಿಣಾಮ ವೃದ್ಧೆಯ ಪಕ್ಕೇಲಬುಗಳು (Ribs) ಮುರಿದು ಹೋಗಿವೆ ಎಂದು ಹೇಳಲಾಗಿದೆ.
CPR Incident – ಚಿಕಿತ್ಸೆ ಫಲಕಾರಿಯಾಗದೆ ಸಾವು
ಪಕ್ಕೇಲಬು ಮುರಿದ ನಂತರ ವೃದ್ಧೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ತಕ್ಷಣ ನರ್ಸಿಂಗ್ ಹೋಮ್ ಸಿಬ್ಬಂದಿ ಅವರನ್ನು ಸುಧಾರಿತ ಚಿಕಿತ್ಸೆಗಾಗಿ ‘ಕಾರ್ಡಿಯಾಲಜಿ ಇನ್‌ಸ್ಟಿಟ್ಯೂಟ್’ಗೆ ಕರೆದೊಯ್ಯಲು ಸೂಚಿಸಿದರು. ಮಧ್ಯಾహ్ನ 1:45ರ ಸುಮಾರಿಗೆ ಕುಟುಂಬಸ್ಥರು ಅಂಬುಲೆನ್ಸ್ ಮೂಲಕ ಅಲ್ಲಿಗೆ ಕರೆದೊಯ್ದರಾದರೂ, ಅಷ್ಟರಲ್ಲೇ ಸುಧಾ ದುಬೆ ಮೃತಪಟ್ಟಿದ್ದರು. ಪರೀಕ್ಷಿಸಿದ ವೈದ್ಯರು ಮಹಿಳೆಯ ಪಕ್ಕೇಲಬು ಮುರಿದಿರುವುದನ್ನು ದೃಢಪಡಿಸಿದ್ದಾರೆ.

CPR Incident – ಕುಟುಂಬಸ್ಥರ ಗಂಭೀರ ಆರೋಪಗಳೇನು?
ತಮ್ಮ ತಾಯಿಯ ಸಾವಿಗೆ ಖಾಸಗಿ ನರ್ಸಿಂಗ್ ಹೋಮ್ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಸುಧಾ ಅವರ ಮಗಳು ಪೂಜಾ ಮತ್ತು ಮಗ ಸುರ್ಜಿತ್ ಗಂಭೀರ ಆರೋಪ ಮಾಡಿದ್ದಾರೆ. ಸಿಬ್ಬಂದಿಯೊಬ್ಬರು ತಾಯಿಯ ಎದೆಗೆ ಜೋರಾಗಿ CPR ನೀಡಿದ ಕಾರಣ ಪಕ್ಕೆಲುಬು ಮುರಿದು ಸಾವು ಸಂಭವಿಸಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ. Read this also : ಅಸ್ಸಾಂ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳ ಆರೈಕೆ; ಶಿಕ್ಷಕಿಯ ಹೃದಯಸ್ಪರ್ಶಿ ಕಾರ್ಯಕ್ಕೆ ಮೆಚ್ಚುಗೆ…!
ಅಷ್ಟೇ ಅಲ್ಲದೆ, “ನರ್ಸಿಂಗ್ ಹೋಮ್‌ನವರು ಸರಿಯಾದ ಚಿಕಿತ್ಸೆ ನೀಡದೆ 21,000 ರೂ. ಹಣ ಕಟ್ಟಿಸಿಕೊಂಡಿದ್ದಾರೆ. ಸಾಲದ್ದಕ್ಕೆ ನಮ್ಮಿಂದ ಬಲವಂತವಾಗಿ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ,” ಎಂದು ಕುಟುಂಬಸ್ಥರು ದೂರಿದ್ದಾರೆ. ಮೃತದೇಹದೊಂದಿಗೆ ಕನ್ನೌಜ್‌ಗೆ ಮರಳಿರುವ ಕುಟುಂಬ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದೆ. ಘಟನೆಯ ನಂತರ ಮೃತದೇಹದೊಂದಿಗೆ ಕಣ್ಣೌಜ್‌ಗೆ ಮರಳಿರುವ ಕುಟುಂಬಸ್ಥರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಜೀವ ಉಳಿಸಬೇಕಾದ ವೈದ್ಯಕೀಯ ಪ್ರಕ್ರಿಯೆಯೇ ಪ್ರಾಣ ತೆಗೆದಿದೆ ಎಂಬ ಆರೋಪ ಸ್ಥಳೀಯವಾಗಿ ಆತಂಕ ಸೃಷ್ಟಿಸಿದೆ.
