Sunday, December 7, 2025
HomeStateVote Chori - ಮತ ಕಳ್ಳತನ ವಿರೋಧಿಸಿ ಗುಡಿಬಂಡೆಯಲ್ಲಿ ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ...!

Vote Chori – ಮತ ಕಳ್ಳತನ ವಿರೋಧಿಸಿ ಗುಡಿಬಂಡೆಯಲ್ಲಿ ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ…!

Vote Chori – ದೇಶದಲ್ಲಿ ಸದ್ದು ಮಾಡುತ್ತಿರುವ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆಯಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಸಹಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮತ ಚೋರಿ ಕುರಿತಂತೆ ಘೋಷಣೆಗಳನ್ನು ಕೂಗೂತ್ತಾ ಆಕ್ರೋಷ ಹೊರಹಾಕಿದರು.

Congress leaders and supporters in Gudibande holding banners during an anti “Vote Chori” signature campaign

Vote Chori – ಮತ ಕಳ್ಳತನ ದೇಶಕ್ಕೆ ಮಾಡಿದ ಅತಿ ದೊಡ್ಡ ದ್ರೋಹ

ಈ ವೇಳೆ ಕಾಂಗ್ರೇಸ್ ಪಕ್ಷದ ಚಿಕ್ಕಬಳ್ಳಾಫುರ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ದೇಶದಲ್ಲಿ ಬಿಜೆಪಿ ಪಕ್ಷದವರು ಮತ ಕಳ್ಳತನದಂತ ದುಸ್ಸಾಹಕ್ಕೆ ಕೈ ಹಾಕಿದ ಪರಿಣಾಮವಾಗಿ ದೇಶದಲ್ಲಿ ಹೆಚ್ಚಿನ ಪಾರ್ಲಿಮೆಂಟ್ ಸದಸ್ಯರು ಆಯ್ಕೆಯಾಗಿದ್ದಾರೆ. ಬಿಹಾರ್ ಮಾತ್ರವಲ್ಲದೇ ರಾಜ್ಯದ ಹಲವು ಕಡೆ ಮತ ಕಳ್ಳತನದಂತಹ ಘಟನೆಗಳು ನಡದಿವೆ. ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಅಧಿಕಾರಕ್ಕೋಸ್ಕರ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು. ಚುನಾವಣಾ ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ಉದ್ದೇಶದಿಂದ ಮೂಡಿಸಲು ಪಾರದರ್ಶಕವಾಗಿ ನಡೆಸಬೇಕೆಂಬ ಜನಜಾಗೃತಿಯನ್ನು ಕಾಂಗ್ರೆಸ್ ದೇಶದಾದ್ಯಂತ ಮತಕಳುವಿನ ವಿರುದ್ಧ ಚಳುವಳಿ ಮಾದರಿಯಲ್ಲಿ ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನಕ್ಕೆ ಎಲ್ಲಾ ಕಾಂಗ್ರೇಸ್ ಕಾರ್ಯಕರ್ತರು ಗ್ರಾಮಗಳಿಗೆ ಭೇಟಿ ನೀಡಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.

Vote Chori – ‘ಮತದಾನದ ಹಕ್ಕಿಗೆ ದ್ರೋಹ’: ಲಕ್ಷ್ಮೀನಾರಾಯಣ

ಬಳಿಕ ಕಾಂಗ್ರೇಸ್ ಮುಖಂಡ ಲಕ್ಷ್ಮೀನಾರಾಯಣ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶವ್ಯಾಪಿ ನಡೆಸುತ್ತಿರುವ ಸ್ಟಾಪ್ ವೋಟ್ ಚೋರಿ ಅಭಿಯಾನಕ್ಕೆ ಬೆಂಬಲವಾಗಿ ಈ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮತದಾನ ದೇಶದ ಪ್ರಜೆಗಳ ಹಕ್ಕು. ಆದರೆ ಮತಗಳ್ಳತನದ ಮೂಲಕ ಬಿಜೆಪಿ ಈ ದೇಶದ ಜನತೆಗೆ ಅತಿ ದೊಡ್ಡ ದ್ರೋಹ ಎಸಗಿದೆ. ಇದರ ವಿರುದ್ಧ ನಾವೆಲ್ಲರೂ ಒಂದಾಗಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಬಿಜೆಪಿ ಅಧಿಕಾರಕ್ಕಾಗಿ ಜನರ ಹಕ್ಕನ್ನು ಕಸಿಯುವ ದೇಶದ್ರೋಹದ ಕೆಲಸ ಮಾಡಿದೆ. ಇದರ ವಿರುದ್ಧ ಪ್ರತಿಯೊಬ್ಬ ಪ್ರಜೆಯೂ ಧ್ವನಿ ಎತ್ತಬೇಕು ಎಂದರು. Read this also : ಗುಡಿಬಂಡೆಯಲ್ಲಿ 50 ಲಕ್ಷ ವೆಚ್ಚದ ಚೆಕ್ ಡ್ಯಾಂ ಲೋಕರ್ಪಣೆಗೊಳಿಸಿದ ಶಾಸಕ ಸುಬ್ಬಾರೆಡ್ಡಿ

Congress leaders and supporters in Gudibande holding banners during an anti “Vote Chori” signature campaign

Vote Chori – ಉಪಸ್ಥಿತರಿದ್ದ ಪ್ರಮುಖರು

ಈ ವೇಳೆ ಕಾಂಗ್ರೇಸ್ ಮುಖಂಡರಾದ ಪ್ರಕಾಶ್, ರಾಜ್ಯ ಯೂತ್ ಕಾಂಗ್ರೇಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮತಗಳ್ಳತನದ ಕುರಿತು ಮಾತನಾಡಿದರು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಯೂತ್ ಕಾಂಗ್ರೇಸ್ ನ ನವೀನ್, ಅಂಬರೀಶ್, ಮುಖಂಡರಾದ ಚಾಂದ್ ಪಾಷ, ದಪ್ಪರ್ತಿ ನಂಜುಂಡ, ರಾಜೇಶ್, ರಹಮತ್, ಫಯಾಜ್ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular