ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಚುನಾವಣೆಗೂ ಮುಂಚೆಯೇ ಘೋಷಣೆ ಮಾಡಿತ್ತು. ಬಳಿಕ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನೂ ಸಹ ಜಾರಿ ಮಾಡಿ ಜನರಿಗೆ ತಲುಪಿಸುತ್ತಿದೆ. ಇದೇ ಕಾಂಗ್ರೇಸ್ ಗ್ಯಾರಂಟಿಗಳು ಲೋಕಸಭಾ ಚುನಾವಣೆಯಲ್ಲೂ ಕೈ ಹಿಡಿಯುತ್ತದೆ ಎಂದು ಕಾಂಗ್ರೇಸ್ ನಾಯಕರು ಹೇಳಿದ್ದರು. ಇದೀಗ ಮೈಸೂರು-ಕೊಡಗು ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ಸಾಮೂಹಿಕವಾಗಿ ನಿಲ್ಲಿಸೋದು ಒಳ್ಳೆಯದು ಎಂದು ಹೇಳಿದ್ದಾರೆ. ಅವರು ಈ ರೀತಿ ಹೇಳೋಕೆ ಕಾರಣವೇನು ಎಂಬ ವಿಚಾರಕ್ಕೆ ಬಂದರೇ,
ಮೈಸೂರು ಕೊಡಗು ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಂ.ಲಕ್ಷ್ಮಣ್ ಸೋಲನ್ನು ಅನುಭವಿಸಿದ್ದರು. ಅವರ ವಿರುದ್ದ ಸ್ಪರ್ಧೆ ಮಾಡಿದ್ದಂತಹ ಯಧುವೀರ್ ಒಡೆಯರ್ ಜಯ ಗಳಿಸಿದ್ದಾರೆ. ಇದೀಗ ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಜನರಿಗೆ ಕಾಂಗ್ರೇಸ್ ಗ್ಯಾರಂಟಿ ಇಷ್ಟವಾಗಿಲ್ಲ. ಇದನ್ನು ಲೋಕಸಭಾ ಚುನಾವಣೆಯ ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿಯವರು ಕಾಂಗ್ರೇಸ್ ಗ್ಯಾರಂಟಿ ವಿರುದ್ದ ಮಾತನಾಡುತ್ತಿದ್ದರೂ ಜನರ ಅವರನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಲೇ ಅಲ್ವಾ, ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ರವರು ಮರು ಪರಿಶೀಲನೆ ಮಾಡಬೇಕು. ಶೇ. 70 ರಷ್ಟು ಮೇಲ್ವರ್ಗದವರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಕುರಿತು ಸಿಎಂ ಗಮನ ಹರಿಸಬೇಕು ಎಂದರು.
ಇನ್ನೂ ಬೆಂಜ್ ಕಾರ್ ಹೊಂದಿರವವ, 25 ಸಾವಿರ ಸಂಬಂಳ ಪಡೆಯುವಂತಹವರಿಗೆ ಪುಕ್ಕಟೆ ಕರೆಂಟ್ ಕೊಟ್ಟರೇ ಹೇಗೆ, ಈಗಲೂ ಗ್ಯಾರಂಟಿಗಳ ಹಣದಿಂದಲೇ ಜೀವನ ನಡೆಸುವ ಜನರಿದ್ದಾರೆ. ಅಂತಹವರನ್ನು ನೋಡಿ ಗ್ಯಾರಂಟಿ ಮತ್ತೊಮ್ಮೆ ಪರಿಶೀಲನೆ ಮಾಡುವ ಅಗತ್ಯವಿದೆ. ಹುಣಸೂರಿನ ಹಲವು ಹಳ್ಳಿಗಳಲ್ಲಿ ಕೇವಲ ಒಂದೇ ಸಮುದಾಯದವರಿದ್ದಾರೆ ಅಲ್ಲಿ ಬಿಜೆಪಿಗೆ 600 ಕ್ಕೂ ಹೆಚ್ಚು ಮತಗಳನ್ನು ನೀಡಿದ್ದಾರೆ. ಆದರೆ ನನಗೆ ಮಾತ್ರ 3, 7, ಮತಗಳನ್ನು ನೀಡಿದ್ದಾರೆ. ಒಕ್ಕಲಿಗರು ನನಗೆ ಮತ ಹಾಕಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ. ಜೊತೆಗೆ ಸಿದ್ದರಾಮಯ್ಯನವರ ಬಗ್ಗೆ ಸಹ ಮಾತನಾಡಿದ್ದಾರೆ.
ಸಿದ್ದರಾಮಯ್ಯನವರಂತಹ ಮುಖ್ಯಮಂತ್ರಿ ಮತ್ತೆ ಈ ದೇಶದಲ್ಲಿ ಹುಟ್ಟಲು ಸಾಧ್ಯವೇ, ಸಿದ್ದರಾಮಯ್ಯ ರವರ ತವರಿನಲ್ಲೇ ಎಷ್ಟು ಭಾರಿ ಮುಖಭಂಗ ಮಾಡುತ್ತೀರಾ, ಇದು ಒಂದು ತರಹ ಸ್ಯಾಡಿಸ್ಟ್ ನೇಚರ್ ಅಲ್ಲವೇ, ಎಂದು ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್ ಅಥವಾ ಬಿಜೆಪಿಯಲ್ಲಿ ಸ್ಪರ್ಧೆ ಮಾಡಿದರೇ ಮಾತ್ರ ಒಕ್ಕಲಿಗರೇ, ಕಾಂಗ್ರೇಸ್ ನಲ್ಲಿ ಸ್ಪರ್ಧೆ ಮಾಡಿದರೇ ಒಕ್ಕಲಿಗರಲ್ಲವೇ, ಕಾಂಗ್ರೇಸ್ ನಲ್ಲಿ ಸ್ಪರ್ಧೆ ಮಾಡುವ ಒಕ್ಕಲಿಗರು ಏನು ಮಾಡಬೇಕು ಹೇಳಿ ಎಂದು ಅಸಮಧಾನ ಹೊರಹಾಕಿದ್ದಾರೆ.