Viral Video – ನಡುರಸ್ತೆಯಲ್ಲಿ ನಾಗರಹಾವು ಮತ್ತು ಮುಂಗುಸಿ ಎದುರಾದರೆ ಏನಾಗುತ್ತದೆ? ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಇದಕ್ಕೊಂದು ಉತ್ತರ ನೀಡಿದೆ. ಬದ್ಧ ವೈರಿಗಳ ನಡುವಿನ ಈ ಜಿದ್ದಾಜಿದ್ದಿನ ಫೈಟ್ ಅನ್ನು ಕಂಡ ವಾಹನ ಸವಾರರು ಆಶ್ಚರ್ಯದಿಂದ ನಿಂತುಬಿಟ್ಟಿದ್ದರು. ಕೊನೆಗೆ ಜನರೇ ಮಧ್ಯಪ್ರವೇಶಿಸಿ ಕಾದಾಟಕ್ಕೆ ತಡೆ ಒಡ್ಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Viral Video – ಹಾವು-ಮುಂಗುಸಿ ಬದ್ದ ವೈರಿಗಳು
ನಾಗರಹಾವು (Cobra) ಮತ್ತು ಮುಂಗುಸಿ (Mongoose) ಅಂದರೆ, ಪ್ರಕೃತಿಯಲ್ಲಿನ ಬದ್ಧ ವೈರಿಗಳು. ಇವು ಎದುರು ಬಂದರೆ ಯಾರೊಬ್ಬರೂ ಹಿಮ್ಮೆಟ್ಟುವುದಿಲ್ಲ, ಜಗಳ ಗ್ಯಾರಂಟಿ. ಇಂತಹದೊಂದು ರೋಚಕ ದೃಶ್ಯ ಇತ್ತೀಚೆಗೆ ರಾಜಸ್ಥಾನದ ಪಿಪಾಲ್‌ಖಂಟ್ ಗ್ರಾಮದ ಬಳಿಯ ರಸ್ತೆಯಲ್ಲಿ ನಡೆದಿದೆ. ಇದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
Viral Video – ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋ ಪ್ರಕಾರ, ಒಂದು ನಾಗರಹಾವು ತನ್ನ ಪಡಗವನ್ನು ಬಿಚ್ಚಿ ಬುಸುಗುಟ್ಟುತ್ತಾ ರಸ್ತೆಯ ಮೇಲೆ ಸಾಗುತ್ತಿರುತ್ತದೆ. ಅಷ್ಟರಲ್ಲಿ ಪಕ್ಕದ ಪೊದೆಯಲ್ಲಿ ಅಡಗಿದ್ದ ಅದರ ಜನ್ಮ ವೈರಿ ಮುಂಗುಸಿ ಇದನ್ನು ನೋಡಿ, ಕ್ಷಣಾರ್ಧದಲ್ಲಿ ಹಾವಿನ ಮೇಲೆ ದಾಳಿ ಮಾಡಲು ಧಾವಿಸುತ್ತದೆ. ನಡುರಸ್ತೆಯಲ್ಲಿ ನಡೆಯುತ್ತಿದ್ದ ಈ ಹಾವಿನ ಮತ್ತು ಮುಂಗುಸಿಯ ಮುಖಾಮುಖಿಯನ್ನು ನೋಡಲು ವಾಹನ ಸವಾರರು ಮತ್ತು ದಾರಿಹೋಕರು ತಮ್ಮ ವಾಹನಗಳನ್ನು ನಿಲ್ಲಿಸಿಬಿಡುತ್ತಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಮುಂಗುಸಿ ಹಾವಿನ ಮೇಲೆ ಎರಗಲು ಪ್ರಯತ್ನಿಸುತ್ತಿದ್ದಂತೆ, ಅಲ್ಲಿ ಸೇರಿದ್ದ ಜನ ಗಟ್ಟಿಯಾಗಿ ಕೂಗಾಡಲು ಶುರುಮಾಡುತ್ತಾರೆ. ಕೆಲವರು ತಕ್ಷಣ ಕಲ್ಲುಗಳನ್ನು ಎಸೆದು ಮುಂಗುಸಿಯನ್ನು ದೂರ ಓಡಿಸಲು ಪ್ರಯತ್ನಿಸುತ್ತಾರೆ. ಇದರಿಂದ ದಿಕ್ಕು ತಪ್ಪಿದ ಮುಂಗುಸಿ ಸ್ವಲ್ಪ ದೂರ ಸರಿದಿದೆ. ಈ ಅವಕಾಶ ಬಳಸಿಕೊಂಡ ನಾಗರಹಾವು ನಿಧಾನವಾಗಿ ಪೊದೆಗಳೊಳಗೆ ನುಸುಳಿಕೊಂಡು ಪಾರಾಗಿದೆ.
Read this also : ಹೃದಯ ವಿದ್ರಾವಕ ದೃಶ್ಯ, ಸಂಗಾತಿಯ ಅಗಲಿಕೆಗೆ ಕಣ್ಣೀರಿಟ್ಟ ಹೆಣ್ಣು ಹಾವು – ವಿಡಿಯೋ ವೈರಲ್
Viral Video – ನೆಟ್ಟಿಗರ ಪ್ರತಿಕ್ರಿಯೆಗಳು!
ಈ ಇಡೀ ಕಾದಾಟ ಮತ್ತು ಜನರ ಮಧ್ಯಪ್ರವೇಶದ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬ ಬಳಕೆದಾರರು, “ಅಯ್ಯೋ! ಸ್ವಲ್ಪ ಹೊತ್ತು ಕಾದಿದ್ದರೆ ಇವರಿಬ್ಬರ ಭಯಂಕರ ಫೈಟ್ ನೋಡಬಹುದಿತ್ತು. ಸ್ಥಳೀಯರು ಮಜಾ ಮಿಸ್ ಮಾಡಿಸಿದ್ರು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ನಾಗ ದೇವತೆಯ ಪ್ರಾಣ ರಕ್ಷಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗೆ, ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳೊಂದಿಗೆ ಕಾಮೆಂಟ್ ಬಾಕ್ಸ್ ತುಂಬಿಸುತ್ತಿದ್ದಾರೆ.

