ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ.ಸುಧಾಕರ್ ನಡುವೆ ಆಗಾಗ ವಾಕ್ಸಮರ ನಡೆಯುತ್ತಿರುತ್ತದೆ. ಇದೀಗ ನೀಟ್ ಪರೀಕ್ಷೆಯ ಬಗ್ಗೆ ಡಾ.ಸುಧಾಕರ್ ರವರಿಗೆ ಟಾಂಗ್ ಕೊಟ್ಟಿದ್ದಾರೆ. ನೀಟ್ ಪರೀಕ್ಷೆಯ ಬಗ್ಗೆ ಸಂಸದ ಡಾ.ಕೆ.ಸುಧಾಕರ್ ರವರಿಗೆ ಕನಿಷ್ಟ ಜ್ಞಾನವೂ ಇಲ್ಲ ಎಂದು ಗೇಲಿ ಮಾಡಿದ್ದಾರೆ.
ನೀಟ್ ಪರೀಕ್ಷೆ ಕುರಿತಂತೆ ಡಾ.ಕೆ.ಸುಧಾಕರ್ ರವರ ಹೇಳಿಕೆಯನ್ನು ಶಾಸಕ ಪ್ರದೀಪ್ ಈಶ್ವರ್ ಟಾಂಗ್ ಕೊಟ್ಟಿದ್ದಾರೆ. ನೀಟ್ ಎಕ್ಸಾಮ್ ಅನ್ನೋದು ಸೆಂಟ್ರಲ್ ಏಜೆನ್ಸಿ ನಡೆಸುತ್ತದೆ. ಅದನ್ನು ಸಚಿವ ಎಂ.ಸಿ.ಸುಧಾಕರ್ ನಡೆಸೊಲ್ಲ ಎಂಬ ವಿಚಾರ ಸಂಸದರಿಗೆ ಗೊತ್ತಿರಬೇಕು. ನೀಟ್ ಪರೀಕ್ಷೆಯನ್ನು ಇಲಾಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ರವರು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಾಸಕ ಪ್ರದೀಪ್ ಈಶ್ವರ್ ರಿಯಾಕ್ಟ್ ಆಗಿದ್ದಾರೆ. ಅವರು ರಾಕಿಂಗ್ ಕೊಟ್ಟು ರಾಜ್ಯ ಸರ್ಕಾರಕ್ಕೆ ಕೊಟ್ಟರೆ ಸೀಟ್ ಅಲಾಟ್ಮೆಂಟ್ ಅಷ್ಟೆ ಎಂ.ಸಿ.ಸುಧಾಕರ್ ಗೆ ಬರೋದು. ಈ ಕನಿಷ್ಟ ಜ್ಞಾನ ಸಹ ಸಂಸದರಿಗಿಲ್ಲ. ಸೋಲು ಅನ್ನೋದು ಓದುವ ಅಭ್ಯಾಸ ಕಡಿಮೆ ಮಾಡುತ್ತದೆ. ಸಂಸದರು ಓದೋದು ನಿಲ್ಲಿಸಿ ತುಂಬಾ ದಿನಗಳಾಗಿದೆ ಎಂದು ವ್ಯಂಗವಾಡಿದ್ದಾರೆ.
ಇನ್ನೂ ನಾನು ಖಾಸಗಿ ಕೋಚಿಂಗ್ ಸೆಂಟರ್ ಮಾಲೀಕನಾಗಿ ಹೇಳುತ್ತಿದ್ದೇನೆ. ನೀಟ್ ಪರೀಕ್ಷೆ ಬಗ್ಗೆ ವಿವಾದ ಎದ್ದಿದ್ದು, ಈಗಾಗಲೇ ಅದನ್ನು ಸಿಬಿಐಗೆ ಸಹ ಕೊಟ್ಟಿದ್ದಾರೆ. ಪರೀಕ್ಷೆಯಲ್ಲಿ 1600 ಮಂದಿಗೆ ಗ್ರೇಸ್ ಕೊಟ್ಟಿದ್ದು, ಇದರಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ. ಸಿಬಿಐ ಸಂಸ್ಥೆ ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಕಾರಣದಿಂದ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖೆಯಾಗಬೇಕು, ಜೊತೆಗೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕೆಂದರು. ಇನ್ನೂ ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ನಡೆಯುತ್ತಿರುವ ಸಿಎಂ, ಡಿಸಿಎಂ ಸ್ಥಾನಗಳ ಚರ್ಚೆಯ ಬಗ್ಗೆ ಸಹ ಹೇಳಿಕೆ ನೀಡಿದ್ದಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ ನಾವು ನೋಡಿಕೋಳ್ಳುತ್ತೇವೆ ನಿಮಗೇಕೆ ಎಂದು ಕಿಡಿಕಾರಿದ್ದಾರೆ.